ನಿಮ್ಮ ಬಳಿ ಯಾವುದೇ ಸ್ಮಾರ್ಟ್‌ಫೋನ್‌ ಇರಲಿ, ಆದ್ರೆ ಇವು ಮಾತ್ರ ಇರಲೇಬೇಕು!

|

ಸದ್ಯ ಎಲ್ಲರಿಗೂ ಸ್ಮಾರ್ಟ್‌ಫೋನ್ ಅಗತ್ಯ ಹಾಗೂ ಅವಶ್ಯಕ ಸಾಧನ ಎನಿಸಿಕೊಂಡಿದೆ. ಗ್ರಾಹಕರು ಅವರ ಅನುಕೂಲಕ್ಕೆ ತಕ್ಕಂತೆ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಾರೆ. ಆದರೆ ಫೋನ್ ಖರೀದಿಸಿದ ಮೇಲೆ ಅದಕ್ಕೆ ಕೆಲವೊಂದು ಆಕ್ಸಸರಿಸ್ ಅಗತ್ಯ ಅನಿಸುತ್ತದೆ. ಈ ನಿಟ್ಟಿನಲ್ಲಿ ಗ್ರಾಹಕರು ಮುಖ್ಯವಾಗಿ ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಸ್ಕ್ರೀನ್‌ ಗಾರ್ಡ್‌, ಫೋನ್ ಬ್ಯಾಕ್‌ ಕವರ್, ಆಡಿಯೊ ಕನೆಕ್ಟರ್ ಕೇಬಲ್ ಸೇರಿದಂತೆ ಕೆಲವೊಂದು ಆಕ್ಸಸರಿಸ್ ಖರೀದಿ ಮಾಡುತ್ತಾರೆ. ಕೆಲವರು ಆಫ್‌ಲೈನ್‌ನಲ್ಲಿ ಖರೀದಿ ಮಾಡಿದರೇ, ಮತ್ತೆ ಕೆಲವರು ಆನ್‌ಲೈನ್‌ ತಾಣಗಳಲ್ಲಿ ಖರೀದಿಸುತ್ತಾರೆ.

ಪರಿಕರಗಳ

ಹೌದು, ಫೋನ್‌ ಖರೀದಿ ಮಾಡಿದ ನಂತರ ಅದಕ್ಕೆ ಆಕ್ಸಸರಿಸ್ ಅಗತ್ಯ. ಈ ನಿಟ್ಟಿನಲ್ಲಿ ಆನ್‌ಲೈನ್‌ ತಾಣಗಳು ಆಕರ್ಷಕ ಡಿಸೈನ್‌ ಮತ್ತು ಫೋನ್‌ಗಳಿಗೆ ಸರಿಹೊಂದುವಂತಹ ಆಕ್ಸಸರಿಸ್ ಪರಿಕರಗಳ ಆಯ್ಕೆ ಹೊಂದಿವೆ. ಕೆಲವೊಮ್ಮೆ ಆಫ್‌ಲೈನ್‌ನಲ್ಲಿ ಲಭ್ಯವಾಗದ ಆಕ್ಸಸರಿಸ್‌ಗಳು ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ ಸಿಗುತ್ತವೆ. ಮುಖ್ಯವಾಗಿ ಚಾರ್ಜಿಂಗ್ ಕೇಬಲ್, OTG ಕೇಬಲ್, ಟ್ರೈಪ್ಯಾಡ್ ಸ್ಟ್ಯಾಂಡ್‌, ಸೆಲ್ಫಿ ಸ್ಟಿಕ್‌ ಸೇರಿದಂತೆ ಇನ್ನಷ್ಟು ಸಣ್ಣ ಪುಟ್ಟ ವಸ್ತುಗಳು ಸ್ಮಾರ್ಟ್‌ಫೋನಿನ ಅಗತ್ಯ ಆಕ್ಸಸರಿಸ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಬಹುತೇಕ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಆಕ್ಸಸರಿಸ್‌ ಖರೀದಿಸಲು ಅಮೆಜಾನ್ ತಾಣದಲ್ಲಿ ಜಾಲಾಡುತ್ತಾರೆ. ಅಮೆಜಾನ್‌ನಲ್ಲಿ ಆಕರ್ಷಕ ರಿಯಾಯಿತಿ ಸಹ ಸಿಗುತ್ತದೆ. ಹಾಗಾದರೇ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಯುನಿವರ್ಸಲ್ ಟ್ರೈಪಾಡ್ ಸ್ಟ್ಯಾಂಡ್ - (Tripod stand)

ಯುನಿವರ್ಸಲ್ ಟ್ರೈಪಾಡ್ ಸ್ಟ್ಯಾಂಡ್ - (Tripod stand)

ಸದ್ಯದ ನೂತನ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಸೌಲಭ್ಯ ಹೊಂದಿವೆ. ಸದ್ಯ ಬಹುತೇಕ ಬಹುತೇಕ ಬಳಕೆದಾರರು ಸ್ಮಾರ್ಟ್‌ಫೋನ್‌ ಮೂಲಕವೇ ಫೋಟೊಗ್ರಫಿ ನಡೆಸುತ್ತಿದ್ದಾರೆ. ಫೋನಿನಲ್ಲಿ ಬೆಸ್ಟ್‌ ಫೋಟೊ/ವಿಡಿಯೊ ಶೂಟ್ ಮಾಡಲು ಟ್ರೈಪಾಡ್ ಸ್ಟ್ಯಾಂಡ್ ಬಳಕೆ ಸಹ ಹೆಚ್ಚಾಗುತ್ತಿದೆ. ಅಮೆಜಾನ್‌ ತಾಣದಲ್ಲಿ ಭಿನ್ನ ಬೆಲೆಗೆ ಟ್ರೈಪಾಡ್‌ ಲಭ್ಯ ಇವೆ. ಆ ಪೈಕಿ KAELAN 50 ಇಂಚಿನ ಟ್ರೈಪ್ಯಾಡ್ ಆಕರ್ಷಕ ದರದಲ್ಲಿ ಕಾಣಿಸಿಕೊಂಡಿದೆ. ಇದು ಅಲ್ಯೂಮಿನಿಯಮ್ ರಚನೆ ಹೊಂದಿದ್ದು, ಹಗುರವಾಗಿದೆ.

ಇಯರ್‌ಫೋನ್ (Earphone)

ಇಯರ್‌ಫೋನ್ (Earphone)

ಸ್ಮಾರ್ಟ್‌ಫೋನ್ ಇದ್ದ ಮೇಲೆ ಅದಕ್ಕೊಂದು ಹೆಡ್‌ಫೋನ್ ಅಥವಾ ಇಯರ್‌ಫೋನ್ ಇದ್ರೆ ಚೆಂದ. ಇತ್ತೀಚಿಗೆ ವಾಯರ್‌ಲೆಸ್‌ ಹೆಡ್‌ಫೋನ್, ಇಯರ್‌ಬಡ್ಸ್‌ ಹೆಚ್ಚು ಜನಪ್ರಿಯವಾಗಿವೆ. ಅದಾಗ್ಯೂ ಇವೆಲ್ಲಾ ಖರೀದಿಸದಿದ್ದರೂ, ಬೇಸಿಕ್ ಇಯರ್‌ಫೋನ್ ಇದ್ರೆ ಉತ್ತಮ. ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಇಯರ್‌ಫೋನ್‌ಗಳು ಲಭ್ಯ. ಆರಂಭಿಕ 200ರೂ. ಒಳಗೂ ಇಯರ್‌ಫೋನ್ ಸಿಗುತ್ತವೆ. pTron ಪ್ರೈಡ್ ಲೈಟ್ HBE ಅಗ್ಗದ ಪ್ರೈಸ್‌ನಲ್ಲಿ ಕಾಣಿಸಿಕೊಂಡಿದೆ.

OTG ಕಾರ್ಡ್‌ ರೀಡರ್

OTG ಕಾರ್ಡ್‌ ರೀಡರ್

OTG ಮತ್ತು ಕಾರ್ಡ್‌ ರೀಡರ್ ಪ್ರಸ್ತುತ ಬಳಕೆದಾರರಿಗೆ ಬಹು ಉಪಯುಕ್ತ ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳು ಎಂದು ಹೇಳಬಹುದಾಗಿದೆ. ಈ ಡಿವೈಸ್‌ಗಳ ಮೂಲಕ ಸುಲಭವಾಗಿ ಡೇಟಾ ಟ್ರಾನ್ಸ್‌ಫರ್/ ಸ್ಟೋರ್ ಮಾಡಬಹುದಾಗಿದೆ ಇನ್ನು ಇವುಗಳ ಬೆಲೆಯು ಅಷ್ಟೆನು ದುಬಾರಿ ಇರುವುದಿಲ್ಲ. ಅಮೆಜಾನ್‌ನಲ್ಲಿ ಅನ್‌ಬ್ರ್ಯಾಂಡೆಂಡ್‌ ಓಟಿಜಿ ಸಾಧನಗಳು ಆರಂಭಿಕ 50ರೂ.ಗಳ ಆಸುಪಾಸಿನಲ್ಲಿಯೂ ಸಿಗುತ್ತವೆ. ಉತ್ತಮ ಓಟಿಜಿ ಬೇಕಿದ್ದರೇ 200ರೂ. ಆಸುಪಾಸಿನಲ್ಲಿ ಖರೀದಿಸಬಹುದು.

ಡ್ಯುಯಲ್-ಪೋರ್ಟ್ ವೇಗದ ಚಾರ್ಜರ್

ಡ್ಯುಯಲ್-ಪೋರ್ಟ್ ವೇಗದ ಚಾರ್ಜರ್

ಇಂದಿನ ಬಹುತೇಕ ಫೋನ್‌ಗಳು ಫಾಸ್ಟ್‌ ಚಾರ್ಜರ್ ಸೌಲಭ್ಯ ಹೊಂದಿವೆ. ಹಾಗೆಯೇ ಮಾರುಕಟ್ಟೆಯಲ್ಲಿ ಡ್ಯುಯಲ್ ಪೋರ್ಟ್‌ ಫಾಸ್ಟ್‌ ಚಾರ್ಜರ್ ಸೌಲಭ್ಯದ ಡಿವೈಸ್ ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಅಮೆಜಾನ್ ತಾಣದಲ್ಲಿ ಅಗ್ಗದ ಬೆಲೆಯಿಂದ, ದುಬಾರಿ ಬೆಲೆಯ ವರೆಗೂ ಹಲವು ವಿಧದ ಚಾರ್ಜರ್‌ಗಳ ಆಯ್ಕೆ ಇದೆ. ಅಮೆಜಾನ್ ನಲ್ಲಿ pTron ವೋಲ್ಟಾ ಇವೋ ಡಿವೈಸ್ ಆಕರ್ಷಕ ದರದಲ್ಲಿ ಕಾಣಿಸಿಕೊಂಡಿದೆ.

ಮೊಬೈಲ್ ಸ್ಟ್ಯಾಂಡ್

ಮೊಬೈಲ್ ಸ್ಟ್ಯಾಂಡ್

ಬಹುತೇಕ ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ, ಯೂಟ್ಯೂಬ್ ವಿಡಿಯೋ, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ವಿಡಿಯೋ ಗಳನ್ನು ವೀಕ್ಷಣೆ ಮಾಡುತ್ತಾರೆ. ಹೆಚ್ಚು ಸಮಯ ಕೈಯಲ್ಲಿ ಮೊಬೈಲ್ ಹಿಡಿಯಲು ಹಿತಕರ ಅನಿಸದಿರಬಹುದು. ಅದಕ್ಕಾಗಿ ಮೊಬೈಲ್‌ ಸ್ಟ್ಯಾಂಡ್‌ಗಳು ಲಭ್ಯ ಇವೆ. ಈ ಸ್ಟ್ಯಾಂಡ್‌ಗಳಿಗೆ ಮೊಬೈಲ್‌ ಫಿಟ್ ಮಾಡುವ ಮೂಲಕ ಆದಾಮದಾಯಕವಾಗಿ ವಿಡಿಯೋಗಳನ್ನು ಅಥವಾ ಮೊಬೈಲ್ ಬಳಕೆ ಮಾಡಬಹುದು. ಅಮೆಜಾನ್ ಇ ಕಾಮರ್ಸ್‌ನಲ್ಲಿ ಭಿನ್ನ ಬೆಲೆಯಲ್ಲಿ ಈ ರೀತಿ ಮೊಬೈಲ್ ಸ್ಟ್ಯಾಂಡ್‌ ಸಿಗುತ್ತವೆ.

Best Mobiles in India

English summary
These Accessories Very Useful To Your Smartphone: Available In Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X