Airtel ಗ್ರಾಹಕರಿಗೆ ಈ ಪ್ಲ್ಯಾನ್‌ಗಳು ಸೂಪರ್; ಒಮ್ಮೆ ಮಾತ್ರ ರೀಚಾರ್ಜ್, ಭರ್ಜರಿ ಡೇಟಾ!
ಭಾರತದಲ್ಲಿ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ಭಾರ್ತಿ ಏರ್‌ಟೆಲ್ (Airtel) ಕೆಲವು ಆಕರ್ಷಕ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಈಗಾಗಲೇ ಚಂದಾದಾರರನ್ನು ತನ್ನತ್ತ ಆಕರ್ಷಿಸಿದೆ. ಜಿಯೋ ಹಾಗೂ ವಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತ ಮುನ್ನಡೆದಿರುವ ಏರ್‌ಟೆಲ್ ತನ್ನ ಚಂದಾದಾರರಿಗಾಗಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಅವುಗಳಲ್ಲಿ ಬಹುತೇಕ ಪ್ಲ್ಯಾನ್‌ಗಳು ಡೇಟಾ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿದೆ. ಅದಾಗ್ಯೂ, ಏರ್‌ಟೆಲ್‌ನ 365 ದಿನ ವ್ಯಾಲಿಡಿಟಿಯ ಯೋಜನೆ ಬಹಳ ಜನಪ್ರಿಯತೆ ಪಡೆದಿವೆ.
ಹೌದು, ಭಾರ್ತಿ ಏರ್‌ಟೆಲ್ ( Airtel ) ಸಂಸ್ಥೆಯ ವಾರ್ಷಿಕ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಪಡೆದಿದ್ದು, ಆ ಪೈಕಿ 3599ರೂ, 3999ರೂ ಹಾಗೂ 1999 ರೂ. ಪ್ರೀಪೇಯ್ಡ್ ಪ್ಲ್ಯಾನ್ ಹೆಚ್ಚು ಗಮನ ಸೆಳೆದಿದೆ. ಈ ಮೂರು ಪ್ಲ್ಯಾನ್‌ಗಳು ದೀರ್ಘಾವಧಿಯ ವ್ಯಾಲಿಡಿಟಿ ಜೊತೆಗೆ ಆಕರ್ಷಕ ದೈನಂದಿನ ಡೇಟಾ ಪ್ರಯೋಜನ ಪಡೆದಿದೆ. ಇನ್ನು ಗ್ರಾಹಕರು ಈ ಪ್ಲ್ಯಾನ್ ರೀಚಾರ್ಜ್ ಮಾಡಿದಿರೇ, ಒಂದು ವರ್ಷದ ವರೆಗೂ ಮತ್ತೇ ರೀಚಾರ್ಜ್ ಮಾಡುವ ಕೆಲಸ ಇರುವುದಿಲ್ಲ. ಹಾಗಾದರೇ ಏರ್‌ಟೆಲ್ 3599ರೂ, 3999ರೂ ಹಾಗೂ 1999ರೂ. ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮುಂದೆ ಓದಿರಿ.

ಏರ್‌ಟೆಲ್ 3599ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ (Airtel) ಟೆಲಿಕಾಂನ 3599 ರೂ. ಗಳ ರೀಚಾರ್ಜ್ ಯೋಜನೆಯು ಸಹ ದೀರ್ಘಾವಧಿಯ ಸೌಲಭ್ಯ ಪಡೆದಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ( Validity ) ಪ್ರಯೋಜನ ಪಡೆದುಕೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಹಾಗೆಯೇ ಇದರಲ್ಲಿ ನಿತ್ಯ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಹೆಲೋ ಫ್ರೀ ಟ್ಯೂನ್ ಪ್ರಯೋಜನಗಳು ಸಿಗಲಿವೆ.
ಏರ್‌ಟೆಲ್ 3999ರೂ. ರೀಚಾರ್ಜ್ ಯೋಜನೆ ಮಾಹಿತಿ
ಏರ್‌ಟೆಲ್ ( Airtel ) ಟೆಲಿಕಾಂನ 3999 ರೂ. ಗಳ ರೀಚಾರ್ಜ್ ಯೋಜನೆಯು ಕೂಡಾ ದೀರ್ಘಾವಧಿಯ ಪ್ರಯೋಜನ ಪಡೆದಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ( Validity ) ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ದೈನಂದಿನ 2.5 GB ಡೇಟಾ ಸೌಲಭ್ಯ ಲಭ್ಯ ಇದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನಗಳು ಲಭ್ಯ.
ಏರ್‌ಟೆಲ್ 1999ರೂ. ರೀಚಾರ್ಜ್ ಯೋಜನೆ ಮಾಹಿತಿ
ಭಾರ್ತಿ ಏರ್‌ಟೆಲ್ ( Airtel ) ಟೆಲಿಕಾಂನ 1999 ರೂ. ಗಳ ರೀಚಾರ್ಜ್ ಯೋಜನೆಯು ಸಹ ದೀರ್ಘಾವಧಿಯ ಸೌಲಭ್ಯ ಪಡೆದಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ( Validity ) ಪ್ರಯೋಜನ ಒಳಗೊಂಡಿದೆ. ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಒಟ್ಟು 24 GB ಡೇಟಾ ಸೌಲಭ್ಯ ಲಭ್ಯ ಇದ್ದು, ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನ ಸಹ ಲಭ್ಯ ಆಗಲಿದೆ. ಹಾಗೆಯೇ ಇದರಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಕೂಡಾ ಲಭ್ಯ ಆಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಏರ್‌ಟೆಲ್ ಆಪ್ಸ್ ಪ್ರಯೋಜನಗಳು ಸಿಗಲಿವೆ.


Click it and Unblock the Notifications








