ಏರ್‌ಟೆಲ್ ಗ್ರಾಹಕರಿಗೆ ಸಂಭ್ರಮ: ಅನಿಯಮಿತ 5G ಡೇಟಾದೊಂದಿಗೆ ಉಚಿತ ಓಟಿಟಿ ಚಂದಾದಾರಿಕೆ!
ಏರ್‌ಟೆಲ್ ಪ್ರಮುಖ ಟೆಲಿಕಾಂ ಸೇವೆಗಳಲ್ಲಿ ಒಂದಾಗಿದ್ದು, ತನ್ನ ಗ್ರಾಹಕರಿಗೆ ಶೀಘ್ರಗತಿಯಲ್ಲಿ 5G ಸೇವೆ ನೀಡಲು ಮುಂದಾಗಿದೆ. ಅದರಲ್ಲೂ ಡಿಸೆಂಬರ್ 2023 ರೊಳಗೆ ತನ್ನ 5G ಸೇವೆಗಳೊಂದಿಗೆ ಎಲ್ಲಾ ಪ್ರಮುಖ ಭಾರತೀಯ ನಗರಗಳನ್ನು ಕವರ್ ಮಾಡುವ ಉದ್ದೇಶದಲ್ಲಿದೆ. ಇಲ್ಲಿಯವರೆಗೆ ಟೆಲಿಕಾಂ ಆಪರೇಟರ್ ತನ್ನ 5G ನೆಟ್‌ವರ್ಕ್ ಅನ್ನು ಸುಮಾರು 300 ನಗರಗಳಲ್ಲಿ ನಿಯೋಜಿಸಿದೆ.
ಹೌದು, ಏರ್‌ಟೆಲ್ 5Gಸೇವೆಯನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ವಿಸ್ತರಣೆ ಮಾಡಿಕೊಂಡು ಬರುತ್ತಿದೆ. ಈ ನಡುವೆ 5G ಸಕ್ರಿಯಗೊಳಿಸಿದ ನಗರಗಳಲ್ಲಿನ ಏರ್‌ಟೆಲ್ ಬಳಕೆದಾರರು ಯಾವುದೇ ಡೇಟಾ ಕ್ಯಾಪ್ ಇಲ್ಲದೆ ಅನಿಯಮಿತ 5G ಇಂಟರ್ನೆಟ್ ಅನ್ನು ಸರ್ಫ್ ಮಾಡಲು, ರೀಲ್‌ಗಳನ್ನು ವೀಕ್ಷಿಸಲು,ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಅಷ್ಟೇ ಅಲ್ಲದೆ ಆಯ್ದ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಏರ್‌ಟೆಲ್ ಉಚಿತ ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಅನ್ನು ನೀಡುತ್ತಿರುವುದರಿಂದ ಬಳಕೆದಾರರು ಭಾರೀ ಸಂತಸಗೊಂಡಿದ್ದಾರೆ.

ಈ ನಡುವೆ ನೀವು ಏರ್‌ಟೆಲ್ ಬಳಕೆದಾರರಾಗಿದ್ದು, ಅನಿಯಮಿತ ಕರೆ ಮತ್ತು ಓಟಿಟಿ ಪ್ರಯೋಜನಗಳನ್ನು ಬಯಸಿದ್ದೇ ಆದರೆ ಅಮೆಜಾನ್ ಪ್ರೈಮ್ ಅಥವಾ ಡಿಸ್ನಿ+ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುವ ಪ್ರಮುಖ ಹಾಗೂ ಹೊಸ 5G ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ. ಈ ಮೂಲಕ ನಿಮ್ಮಿಷ್ಟದ ರೀಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು.
ಏರ್‌ಟೆಲ್ 499ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಕರೆಯೊಂದಿಗೆ ಅನಿಯಮಿತ 5G ಇಂಟರ್ನೆಟ್ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ದಿನಕ್ಕೆ 100 ಎಸ್ಎಮ್‌ಎಸ್ ಆಯ್ಕೆ ಸಹ ಇದೆ. ಇದರೊಂದಿಗೆ ಡಿಸ್ನಿ+ಹಾಟ್‌ಸ್ಟಾರ್, ಎಕ್ಸ್ ಟ್ರೀಮ್ ಆಪ್ ಪ್ರಯೋಜನಗಳು, ವಿಂಕ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ಲ್ಯಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಏರ್‌ಟೆಲ್ 839ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಅನಿಯಮಿತ 5G ಇಂಟರ್ನೆಟ್ ಡೇಟಾ, ಅನಿಯಮಿತ ಕರೆ ಸೌಲಭ್ಯ ಹಾಗ ದಿನವೂ 100 ಎಸ್ಎಮ್‌ಎಸ್ ಗಳನ್ನು ಹೊಂದಿದೆ. ಇದರೊದಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಚಂದಾದಾರಿಕೆ ಪಡೆದುಕೊಳ್ಳಬಹುದು ಹಾಗೂ ಎಕ್ಸ್‌ಸ್ಟ್ರೀಮ್ ಆಪ್ ಪ್ರಯೋಜನ, ವಿಂಕ್ ಚಂದಾದಾರಿಕೆ ಮತ್ತು ಹೆಚ್ಚಿನ ಸೌಲಭ್ಯ ಲಭ್ಯವಾಗಲಿದೆ. ಹಾಗೆಯೇ 5Gಪ್ರವೇಶವನ್ನು ಹೊಂದಿರದವರಿಗೆ 2GBದೈನಂದಿನ ಕ್ಯಾಪ್‌ನೊಂದಿಗೆ ಅನಿಯಮಿತ 4Gಡೇಟಾವನ್ನು ನೀಡಲಾಗುತ್ತದೆ. ಇದು 84 ದಿನಗಳ ಮಾನ್ಯತೆ ಹೊಂದಿದೆ.

ಏರ್‌ಟೆಲ್ 3,359ರೂ. ಗಳ ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ 5Gಡೇಟಾ, ಅನಿಯಮಿತ ಉಚಿತ ಕರೆ ಸೌಲಭ್ಯ ಹಾಗೂ 100 ದೈನಂದಿನ ಎಸ್‌ಎಮ್‌ಎಸ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಇದು 1 ವರ್ಷದ ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಅಫೋಲೋ 24|7ಪ್ರಯೋಜನ, ವಿಂಕ್ ಚಂದಾದಾರಿಕೆ ಸೇರಿದಂತೆ ಇನ್ನೂ ಹಲವು ಸೌಲಭ್ಯ ಪಡೆದುಕೊಳ್ಳಬಹುದು. 5G ಲಭ್ಯವಿಲ್ಲದಿದ್ದರೆ 2.5GB ದೈನಂದಿನ ಮಿತಿಯೊಂದಿಗೆ ಅನಿಯಮಿತ 4G ಡೇಟಾವನ್ನು ಬಳಕೆದಾರರು ಪಡೆಯಬಹುದು. ಇದು ಒಂದು ವರ್ಷದ ಮಾನ್ಯತೆ ಹೊಂದಿದೆ.
ಏರ್‌ಟೆಲ್ 699ರೂ.ಗಳ ಪ್ಲ್ಯಾನ್: ಈ ವಿಶೇಷ ಪ್ಲ್ಯಾನ್‌ನಲ್ಲಿ ಬಳಕೆದಾರರು 5Gಡೇಟಾ, ಉಚಿತ ಕರೆ ಸೌಲಭ್ಯ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್ ಸೇವೆ ಪಡೆದುಕೊಳ್ಳಬಹುದಾಗಿದ್ದು, ಈ ಯೋಜನೆಯು ಅಮೆಜಾನ್ ಪ್ರೈಮ್‌ನ 56 ದಿನಗಳ ಸದಸ್ಯತ್ವಕ್ಕೆ ಅನುವು ಮಾಡಿಕೊಡುತ್ತದೆ. ಹಾಗೆಯೇ, ಎಕ್ಸ್ ಟ್ರೀಮ್ ಆಪ್ ಪ್ರಯೋಜನಗಳು, ವಿಂಕ್ ಚಂದಾದಾರಿಕೆ ಸೌಲಭ್ಯ ಇದರಿಂದ ಸಿಗಲಿದೆ. ಇನ್ನು 5Gನೆಟ್ವರ್ಕ್ ಪ್ರದೇಶದಲ್ಲಿ ಇಲ್ಲದಿದ್ದರೆ,3GB ದೈನಂದಿನ 4Gಡೇಟಾ ಪಡೆಯಬಹುದು. ಇದು 56 ದಿನಗಳ ಮಾನ್ಯತೆ ಹೊಂದಿದೆ.

ಏರ್‌ಟೆಲ್ 999ರೂ. ಪ್ಲ್ಯಾನ್: ಈ ಪ್ಲ್ಯಾನ್‌ನಲ್ಲಿ ಅನಿಯಮಿತ 5G ಇಂಟರ್ನೆಟ್ ಡೇಟಾ ಹಾಗೂ ಅನಿಯಮಿತ ಕರೆ ಮತ್ತು ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ, ಎಕ್ಸ್ ಟ್ರೀಮ್ ಆಪ್ ಪ್ರಯೋಜನಗಳು, ವಿಂಕ್ ಚಂದಾದಾರಿಕೆ, ರಿವಾರ್ಡ್ಸ್ ಮಿನಿ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ. 5G ನಗರದಲ್ಲಿಲ್ಲದ ಬಳಕೆದಾರರು 2.5GB ದೈನಂದಿನ ಡೇಟಾ ಬಳಕೆ ಮಾಡಬಹುದಾಗಿದ್ದು, ಇದರ ಮಾನ್ಯತೆ 84 ದಿನವಾಗಿದೆ.


Click it and Unblock the Notifications








