ಅಗ್ಗದ ಬೆಲೆಯಲ್ಲಿ ಪ್ರತಿದಿನ ಅಧಿಕ ಡೇಟಾ ಬೇಕಿದ್ರೆ, ಏರ್‌ಟೆಲ್‌ನ ಈ ಪ್ಲ್ಯಾನ್ ಸಾಕು!
ಭಾರತೀಯ ಟೆಲಿಕಾಂ ವಲಯದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಏರ್‌ಟೆಲ್, ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಂಸ್ಥೆಯು ಕೆಲವು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ಏರ್‌ಟೆಲ್ ಟೆಲಿಕಾಂ ತನ್ನ ನೇಋ ಎದುರಾಳಿ ಎನಿಸಿರುವ ಜಿಯೋ ಟೆಲಿಕಾಂಗೆ ಟಕ್ಕರ್ ನೀಡುವಂತಹ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಜೊತೆಗೆ ಏರ್‌ಟೆಲ್ ಕಂಪನಿಯು ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಪಡೆದಿದೆ. ಆ ಪೈಕಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಏರ್‌ಟೆಲ್ ನ 349ರೂ. ಒಳಗಿನ ಈ ಪ್ಲ್ಯಾನ್‌ವೊಂದು ಹೆಚ್ಚು ಆಕರ್ಷಕ ಎನಿಸಿದೆ.

ಏರ್‌ಟೆಲ್ ಟೆಲಿಕಾಂನ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ಅಲ್ಪಾವಧಿ ವ್ಯಾಲಿಡಿಟಿಯ ಪ್ರೀಪೇಯ್ಡ್ ಪ್ಲ್ಯಾನ್ ಆಗಿದೆ. ಈ ಯೋಜನೆಯು ಪ್ರತಿದಿನ ಡೇಟಾ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಹೊಂದಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಓಟಿಟಿ ಸೌಲಭ್ಯ, ವೆಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಮ್ಯೂಸಿಕ್ ಆಪ್ಸ್‌ಗಳ ಪ್ರಯೋಜನಗಳನ್ನು ಸಹ ಪಡೆದಿದೆ. ಹಾಗಾದರೇ ಏರ್‌ಟೆಲ್ ಟೆಲಿಕಾಂನ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಉತ್ತಮವೇ?..ಈ ಯೋಜನೆಯ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 349ರೂ. ಯೋಜನೆಯ ಪ್ರಯೋಜನಗಳು
ಏರ್‌ಟೆಲ್ 349ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಶನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಮೆಂಬರಶಿಪ್ ಸೌಲಭ್ಯ ಲಭ್ಯ. ಜೊತೆಗೆ ವೆಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಮ್ಯೂಸಿಕ್ ಆಪ್ಸ್‌ಗಳ ಪ್ರಯೋಜನಗಳನ್ನು ಸಹ ಪಡೆದಿದೆ.

ಏರ್‌ಟೆಲ್ 558ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್‌ನ ಜನಪ್ರಿಯ ಪ್ರೀಪೇಯ್ಡ್ ಪ್ಯಾನ್‌ಗಳಲ್ಲಿ ಒಂದಾಗಿರುವ 558ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.
ಏರ್‌ಟೆಲ್ 398ರೂ. ಪ್ರೀಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು
ಏರ್‌ಟೆಲ್ 398ರೂ. ಪ್ರೀಪೇಯ್ಡ್ ಪ್ಲ್ಯಾನ್‌ನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಸೌಲಭ್ಯ ಸಿಗಲಿದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.
ಏರ್‌ಟೆಲ್ 448ರೂ. ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್‌ನ 448ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.
ಏರ್‌ಟೆಲ್ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಗಳು:
ಏರ್‌ಟೆಲ್ ಟೆಲಿಕಾಂನಲ್ಲಿ 2,498ರೂ. 2698ರೂ ಮತ್ತು 1,498ರೂ. ಯೋಜನೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಹೆಚ್ಚು ಗಮನ ಸೆಳೆದಿವೆ. ಏರ್‌ಟೆಲ್ 2,498ರೂ. ಯೋಜನೆಯು 365 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ಪಡೆದಿದೆ. ಹಾಗೆಯೇ 1,498ರೂ.ಗಳ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಒಟ್ಟು 24GB ಡೇಟಾವನ್ನು ಹೊಂದಿದೆ. ಈ ಎರಡೂ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಲಾಭದೊಂದಿಗೆ ಬರುತ್ತವೆ. ಇನ್ನು 2698ರೂ. ಯೋಜನೆಯು ಸಹ 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್ ಆಪ್ ಸೇವೆ ಲಭ್ಯ.


Click it and Unblock the Notifications








