Home
ಸುದ್ದಿಜಾಲ

ನಿಮಗೆ ಅಧಿಕ ಡೇಟಾ ಬೇಕಿದ್ರೆ, ಖಂಡಿತಾ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಬೇಡಿ!

ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಏರ್‌ಟೆಲ್‌, ಚಂದಾದಾರರನ್ನು ಆಕರ್ಷಿಸಲು ಭಿನ್ನ ಬೆಲೆಯಲ್ಲಿ ಅಧಿಕ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಪ್ರಸ್ತುತ ಅದೇ ಹಾದಿಯಲ್ಲಿ ಮುನ್ನಡೆದಿರುವ ಭಾರ್ತಿ ಏರ್‌ಟೆಲ್‌ ಟೆಲಿಕಾಂ, ಮುಂಚೂಣಿಯಲ್ಲಿರುವ ಜಿಯೋ ಟೆಲಿಕಾಂಗೆ ನೇರ ಸ್ಪರ್ಧೆ ನೀಡುವ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅಧಿಕ ಡೇಟಾ ಬಯಸುವ ಗ್ರಾಹಕರಿಗೂ ಉತ್ತಮ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ. ಹಾಗೆಯೇ ಡೇಟಾ ಅಗತ್ಯವಿರದ, ಬರೀ ವಾಯಿಸ್‌ ಕರೆ ಸೌಲಭ್ಯ ಬಯಸುವ ಗ್ರಾಹಕರಿಗೂ ಬೆಸ್ಟ್‌ ಪ್ಲ್ಯಾನ್‌ಗಳ ಆಯ್ಕೆ ನೀಡಿದೆ.

ನಿಮಗೆ ಅಧಿಕ ಡೇಟಾ ಬೇಕಿದ್ರೆ, ಖಂಡಿತಾ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಬೇಡಿ!

ಭಾರ್ತಿ ಏರ್‌ಟೆಲ್‌ ಟೆಲಿಕಾಂ ಕೆಲವು ಭಿನ್ನ ಪ್ರಯೋಜನಗಳ ಪ್ರಿಪೇಯ್ಡ್‌ ಪ್ಲ್ಯಾನ್‌ಗಳ ಲಿಸ್ಟ್‌ ಹೊಂದಿದೆ. ಅವುಗಳಲ್ಲಿ ಬಹುತೇಕ ಪ್ರೀಪೇಯ್ಡ್‌ ಯೋಜನೆಗಳು ಪ್ರತಿದಿನ ಡೇಟಾ ಪ್ರಯೋಜನದ ಪಡೆದಿವೆ. ಅದಾಗ್ಯೂ, ಕೆಲವು ಪ್ಲ್ಯಾನ್‌ಗಳು ಇದ್ದು, ಅವು ವಾಯಿಸ್‌ ಕರೆಯ ಸೌಲಭ್ಯವನ್ನು ಮಾತ್ರ ಒಳಗೊಂಡಿವೆ. ವಾಯಿಸ್‌ ಕರೆಯ ಯೋಜನರಗಳು ನಿಗದಿತ ಡೇಟಾ ಪ್ರಯೋಜನ ಒಳಗೊಂಡಿವೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ ವಾಯಿಸ್‌ ಕರೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ನಿಮಗೆ ಅಧಿಕ ಡೇಟಾ ಬೇಕಿದ್ರೆ, ಖಂಡಿತಾ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಬೇಡಿ!

ಏರ್‌ಟೆಲ್‌ 155ರೂ. ಪ್ರಿಪೇಯ್ಡ್‌ ಪ್ಲಾನ್ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂನ ಈ ಪ್ರಿಪೇಯ್ಡ್‌ ಪ್ಲಾನ್‌ ಒಟ್ಟು 24 ದಿನಗಳ ವ್ಯಾಲಿಡಿಯನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯು 1GB ಡೇಟಾ ಪ್ರಯೋಜನ ಪಡೆದಿದ್ದು, ಒಟ್ಟು 300 SMS ಪ್ರಯೋಜನವನ್ನು ಹೊಂದಿದೆ. ಹಾಗೆಯೇ ಅನಿಯಮಿತ ಕರೆ ಪ್ರಯೋಜನ ಪಡೆದಿದ್ದು, ಇದರೊಂದಿಗೆ ಏರ್‌ಟೆಲ್‌ನ ವೆಂಕ್ ಮ್ಯೂಸಿಕ್ ಸೌಲಭ್ಯ ಸಹ ಲಭ್ಯ.

ನಿಮಗೆ ಅಧಿಕ ಡೇಟಾ ಬೇಕಿದ್ರೆ, ಖಂಡಿತಾ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಬೇಡಿ!

ಏರ್‌ಟೆಲ್‌ 179ರೂ. ಪ್ರಿಪೇಯ್ಡ್‌ ಪ್ಲಾನ್ ಸೌಲಭ್ಯಗಳು

ಏರ್‌ಟೆಲ್‌ ಟೆಲಿಕಾಂ ನೀಡುತ್ತಿರುವ ಅಗ್ಗದ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಏರ್‌ಟೆಲ್‌ 179ರೂ. ಪ್ರಿಪೇಯ್ಡ್‌ ಪ್ಲಾನ್ ಕೂಡ ಒಂದು. ಈ ಪ್ಲಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದ್ದು, ಈ ಅವಧಿಯಲ್ಲಿ ಅನಿಯಮಿತ ಕರೆ ಪ್ರಯೋಜನ ದೊರೆಯಲಿದೆ. ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು ಅವಧಿಗೆ 300 SMS ಮತ್ತು 2GB ಡೇಟಾ ಸೌಲಭ್ಯ ಸಿಗಲಿದೆ.

ಏರ್‌ಟೆಲ್‌ 455 ರೂ. ಪ್ರಿಪೇಯ್ಡ್‌ ಪ್ಲಾನ್ ಸೌಲಭ್ಯಗಳು

ಏರ್‌ಟೆಲ್‌ 455 ರೂ. ಗಳ ಪ್ಲ್ಯಾನ್‌ 84 ದಿನಗಳ ಮಾನ್ಯತೆ ಹೊಂದಿದ್ದು, ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಸ್ಥಳೀಯ ಕರೆ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳು, 900 ಎಸ್‌ಎಮ್‌ಎಸ್‌ ಮತ್ತು 6 GB ಡೇಟಾವನ್ನು ಪಡೆಯಬಹುದಾಗಿದೆ. ಹಾಗೆಯೇ ನೀಡಲಾದ ಡೇಟಾ ಖಾಲಿಯಾದರೆ ಪ್ರತಿ MB ಗೆ 50 ಪೈಸೆ ಶುಲ್ಕ ನೀಡುವ ಮೂಲಕ ಹೆಚ್ಚುವರಿ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಹೊರತಾಗಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಮೂರು ತಿಂಗಳವರೆಗೆ ಅಪೋಲೋ 24/ 7 ನ ಹೆಚ್ಚುವರಿ ಪ್ರಯೋಜನವನ್ನೂ ಸಹ ಪಡೆಯಬಹುದಾಗಿದೆ. ಹಾಗೆಯೇ ಫಾಸ್ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್‌ ಸೌಲಭ್ಯ ಪಡೆದುಕೊಳ್ಳಬಹುದು.

ನಿಮಗೆ ಅಧಿಕ ಡೇಟಾ ಬೇಕಿದ್ರೆ, ಖಂಡಿತಾ ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಬೇಡಿ!

ಏರ್‌ಟೆಲ್‌ನ 1799ರೂ. ಪ್ರಿಪೇಯ್ಡ್‌ ಪ್ಲಾನ್ ಸೌಲಭ್ಯಗಳು

ಏರ್‌ಟೆಲ್‌ನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 24 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಒಟ್ಟು 3600 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರ ಹೊರತಾಗಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಮೂರು ತಿಂಗಳವರೆಗೆ ಅಪೋಲೋ 24/ 7 ನ ಹೆಚ್ಚುವರಿ ಪ್ರಯೋಜನವನ್ನೂ ಸಹ ಪಡೆಯಬಹುದಾಗಿದೆ. ಹಾಗೆಯೇ ಫಾಸ್ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್‌ ಸೌಲಭ್ಯ ಪಡೆದುಕೊಳ್ಳಬಹುದು.

Best Mobiles in India

English summary
Airtel has 4 Unlimited Voice Only Prepaid Plans. that offer sms and limited data. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+