ಏರ್‌ಟೆಲ್ ಗ್ರಾಹಕರೇ ಪ್ರತಿದಿನ 1.5GB ಡೇಟಾ ಅಗತ್ಯ ಇದ್ರೇ ಈ ಪ್ಲ್ಯಾನ್ಸ್ ಬೆಸ್ಟ್!
ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿದಿನ ಹೆಚ್ಚಿನ ಡೇಟಾ ಸೌಲಭ್ಯದ ಪ್ರೀಪೇಯ್ಡ್ ಯೋಜನೆಗಳನ್ನು ರೀಚಾರ್ಜ್ ಮಾಡಿಸುತ್ತಾರೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ಡೈಲಿ ಡೇಟಾ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳ ಆಯ್ಕೆ ನೀಡುತ್ತಾ ಸಾಗಿವೆ. ಆ ಪೈಕಿ ಭಾರ್ತಿ ಏರ್‌ಟೆಲ್ ಕಂಪನಿಯು ಪ್ರತಿದಿನ 1GB, 1.5GB, 2GB ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಲಿಸ್ಟ್ ಹೊಂದಿದೆ.

ಹೌದು, ಏರ್‌ಟೆಲ್ ಟೆಲಿಕಾಂ ಭಿನ್ನ ಡೇಟಾ ಪ್ರಯೋಜನದ ಜೊತೆಗೆ ಭಿನ್ನ ವ್ಯಾಲಿಡಿಟಿಯ ಆಯ್ಕೆಗಳ ಯೋಜನೆಗಳನ್ನು ಹೊಂದಿದೆ. 28 ದಿನಗಳ, 56 ದಿನಗಳ ಹಾಗೂ 84 ದಿನಗಳ ವ್ಯಾಲಿಡಿಟಿ ಆಯ್ಕೆಯನ್ನು ಒಳಗೊಂಡಿವೆ. ಅಧಿಕ ಡೇಟಾ ಬಯಸುವವರು ಡೈಲಿ 2GB ಡೇಟಾ ಪ್ಲ್ಯಾನ್ ರೀಚಾರ್ಜ್ ಉತ್ತಮ. ಇನ್ನು ಡೇಟಾ ಹೆಚ್ಚಿನ ಅಗತ್ಯ ಇರದ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಯೋಜನೆಗಳು ಬೆಸ್ಟ್. ಹಾಗಾದರೇ ಡೈಲಿ 1.5GB ಡೇಟಾ ಸೌಲಭ್ಯದ ಏರ್‌ಟೆಲ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 249ರೂ.ಯೋಜನೆ
ಏರ್‌ಟೆಲ್ 249ರೂ.ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ರೋಮಿಂಗ್ ಕರೆಗಳು ಸೇರಿದಂತೆ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಇದೇ ಪ್ರಯೋಜನಗಳನ್ನು ಒಳಗೊಂಡ ಏರ್‌ಟೆಲ್ 279ರೂ. ಪ್ಲ್ಯಾನ್ ರೀಚಾರ್ಜ್ ಮಾಡಿಸಿದರೇ 4ಲಕ್ಷದ ಇನ್ಶೂರೆನ್ಸ್ ಸೌಲಭ್ಯ ಲಭ್ಯವಾಗಲಿದೆ.

ಏರ್‌ಟೆಲ್ 399ರೂ.ಯೋಜನೆ
ಏರ್‌ಟೆಲ್ 399ರೂ.ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ರೋಮಿಂಗ್ ಕರೆಗಳು ಸೇರಿದಂತೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ವ್ಯಾಲಿಡಿಟಿ ಅವಧಿ ಮುಗಿಯುವವರೆಗೂ ಪ್ರತಿದಿನ 1.5GB ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ 598ರೂ.ಯೋಜನೆ
ಏರ್‌ಟೆಲ್ 598ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ.ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ.


Click it and Unblock the Notifications








