ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಬಯಸುವ ಏರ್‌ಟೆಲ್ ಗ್ರಾಹಕರಿಗೆ ಈ ಪ್ಲ್ಯಾನ್ ಬೆಸ್ಟ್!
ದೇಶದ ಟೆಲಿಕಾಂ ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್ ಟೆಲಿಕಾಂ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಹಲವು ಭರ್ಜರಿ ಡೇಟಾ ಪ್ರಯೋಜನವನ್ನು ಪಡೆದಿದ್ದರೇ, ಇನ್ನೂ ಕೆಲವು ದೀರ್ಘ ವ್ಯಾಲಿಡಿಟಿಯ ಸೌಲಭ್ಯವನ್ನು ಒಳಗೊಂಡಿವೆ. ಹಾಗೆಯೇ ಮತ್ತೆ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳು ಅಧಿಕ ಡೇಟಾ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಹೌದು, ಭಾರ್ತಿ ಏರ್‌ಟೆಲ್ ಟೆಲಿಕಾಂ ಡೈಲಿ ಅಧಿಕ ಡೇಟಾ ಸೌಲಭ್ಯದ ಜೊತೆಗೆ ಬಿಗ್ ವ್ಯಾಲಿಡಿಟಿ ಇರುವ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಈ ಪ್ಲ್ಯಾನ್‌ಗಳಲ್ಲಿ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಒಳಗೊಂಡಿವೆ. ಆದರೆ ಅವುಗಳಲ್ಲಿ 84 ದಿನಗಳ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್ ಯೋಜನೆಗಳಿಗೆ ಬಳಕೆದಾರರು ಹೆಚ್ಚು ಮನಸ್ಸು ಮಾಡುತ್ತಾರೆ. ಹಾಗಾದರೇ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದ ಏರ್‌ಟೆಲ್ ಕೆಲವು ಪ್ರಮುಖ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಭಾರ್ತಿ ಏರ್‌ಟೆಲ್ 379ರೂ. ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್‌ನ ಈ 379ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100 ಎಸ್‌ಎಮ್ಎಸ್ ಪ್ರಯೋಜನ ಪಡೆದಿದೆ.

ಭಾರ್ತಿ ಏರ್‌ಟೆಲ್ 598ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್ 598ರೂ. ಪ್ರೀಪೇಯ್ಡ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಭಾರ್ತಿ ಏರ್‌ಟೆಲ್‌ನ 698ರೂ. ಪ್ರೀಪೇಯ್ಡ್ ಯೋಜನೆ
ಭಾರ್ತಿ ಏರ್‌ಟೆಲ್‌ನ 698.ರೂ ಪ್ರೀಪೇಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.


Click it and Unblock the Notifications








