ಡೇಟಾ ಜೊತೆ ವ್ಯಾಲಿಡಿಟಿ ಬಯಸುವ ಏರ್‌ಟೆಲ್ ಗ್ರಾಹಕರಿಗೆ ಇವೇ ಬೊಂಬಾಟ್ ಪ್ಲ್ಯಾನ್!
ದೇಶದ ಟೆಲಿಕಾಂ ವಲಯದಲ್ಲಿ ಜನಪ್ರಿಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್ ಟೆಲಿಕಾಂ ಹಲವು ಭಿನ್ನ ಶ್ರೇಣಿಯ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕೆಲವು ಯೋಜನೆಗಳು ಅತ್ಯುತ್ತಮ ಡೇಟಾ ಪ್ರಯೋಜನ ಪಡೆದಿದ್ದರೇ, ಇನ್ನೂ ಕೆಲವು ಪ್ರೀಪೇಯ್ಡ್ ಯೋಜನೆಗಳು ದೀರ್ಘ ವ್ಯಾಲಿಡಿಟಿಯ ಸೌಲಭ್ಯವನ್ನು ಒಳಗೊಂಡಿವೆ. ಇವಲ್ಲದೇ ಇನ್ನೂ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನ ಹೊಂದಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್‌ನ ಎರಡು ಪ್ರೀಪೇಯ್ಡ್ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ. ಆದರೆ ಅವುಗಳಲ್ಲಿ ಒಂದು ಭಿನ್ನತೆ ಇದೆ.

ಹೌದು, ಏರ್‌ಟೆಲ್ ಟೆಲಿಕಾಂ ದೈನಂದಿನ ಡೇಟಾ ಪ್ರಯೋಜನ ಜೊತೆಗೆ ಅಧಿಕ ವ್ಯಾಲಿಡಿಟಿ ಪಡೆದಿರುವ ಕೆಲವು ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಕಂಪನಿಯ ಬಹುತೇಕ ಪ್ಲ್ಯಾನ್‌ಗಳಲ್ಲಿ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಉಚಿತ ಎಸ್‌ಎಮ್‌ಎಸ್ ಪ್ರಯೋಜನ ಸಹ ಒಳಗೊಂಡಿವೆ. ಅದಾಗ್ಯೂ ರೀಚಾರ್ಜ್ ಮಾಡಿಸುವ ಗ್ರಾಹಕರು ಮುಖ್ಯವಾಗಿ ಡೈಲಿ ಡೇಟಾ ಸೌಲಭ್ಯದೊಂದಿಗೆ 84 ದಿನಗಳ ವ್ಯಾಲಿಡಿಟಿ ಪಡೆದಿರುವ ಪ್ರೀಪೇಯ್ಡ್ ಪ್ಲ್ಯಾನ್‌ಗಳಿಗೆ ಮನಸ್ಸು ಮಾಡುತ್ತಾರೆ.

ಈ ನಿಟ್ಟಿನಲ್ಲಿ ಏರ್‌ಟೆಲ್ 598ರೂ. ಮತ್ತು ಏರ್‌ಟೆಲ್ 698ರೂ. ಪ್ರೀಪೇಯ್ಡ್ ಪ್ಲ್ಯಾನ್‌ಗಳು ಆಕರ್ಷಕ ಎನಿಸಿಕೊಂಡಿವೆ. ಆದರೆ ಈ ಎರಡು ಯೋಜನೆಗಳ ಪ್ರಯೋಜನಗಳಲ್ಲಿ ಡೇಟಾದ ಭಿನ್ನತೆ ಇರುವುದನ್ನು ಗಮನಿಸಬಹುದು. ಹಾಗಾದರೇ ಈ ಎರಡು ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್ 598ರೂ. ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು
ಏರ್‌ಟೆಲ್ ಟೆಲಿಕಾಂನ 598ರೂ. ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಿದ್ದು, ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ. Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರೀ ಹೆಲೋ ಟ್ಯೂನ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ.

ಏರ್‌ಟೆಲ್ 698ರೂ ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು
ಏರ್‌ಟೆಲ್ ಟೆಲಿಕಾಂನ 698ರೂ ಪ್ರೀಪೇಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಲಭ್ಯ. ಜೊತೆಗೆ ಈ ಪ್ಲ್ಯಾನ್ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಪ್ರೀಮಿಯಮ್ ಹಾಗೂ ಜೀ 5 ಸೌಲಭ್ಯಗಳು ಸಿಗುತ್ತವೆ. ಅದೇ ರೀತಿ ಏರ್‌ಟೆಲ್ ಟೆಲಿಕಾಂನ ಇತರೆ ಆಕರ್ಷಕ ಯೋಜನೆಗಳ ಬಗ್ಗೆ ಮುಂದೆ ಮಾಹಿತಿ ನೀಡಲಾಗಿದೆ.

ಏರ್‌ಟೆಲ್ 599ರೂ. ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು
ಏರ್‌ಟೆಲ್ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಇದರೊಂದಿಗೆ ಯಾವುದೇ ನೆಟವರ್ಕ್ ಅನಿಯಮಿತ ಉಚಿತ ವಾಯಿಸ್ ಕರೆ ಹಾಗೂ ಪ್ರತಿದಿನ 100ಎಸ್‌ಎಮ್‌ಎಸ್ ಲಭ್ಯ. ಹಾಗೆಯೇ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಏರ್‌ಟೆಲ್ 401ರೂ. ಪ್ರೀಪೇಯ್ಡ್ ಯೋಜನೆ ಸೌಲಭ್ಯಗಳು
ಏರ್‌ಟೆಲ್ ಸಂಸ್ಥೆಯ ಈ ಹೊಸ ಪ್ರೀಪೇಯ್ಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ. ಅಂದಹಾಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವವು ಒಂದು ವರ್ಷದ ವಾಯ್ದೆಯನ್ನು ಪಡೆದಿರುತ್ತದೆ. ಆದರೆ ಈ ಪ್ಲ್ಯಾನಿನಲ್ಲಿ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಏರ್‌ಟೆಲ್ 398ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ಏರ್‌ಟೆಲ್ 398ರೂ. ಪ್ರೀಪೇಯ್ಡ್ ಪ್ಲ್ಯಾನ್‌ನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಉಚಿತ ಡೇಟಾ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ.


Click it and Unblock the Notifications








