ನಿಮ್ಮ ಏರ್‌ಟೆಲ್ ಸಿಮ್ ಚಾಲ್ತಿ ಇರಬೇಕಿದ್ರೇ, ಈ ಅಗ್ಗದ ಪ್ಲ್ಯಾನ್ ರೀಚಾರ್ಜ್ ಮಾಡಿ!
ಸದ್ಯ ಬಹುತೇಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಎರಡು ಸಿಮ್ ಕಾರ್ಡ್ ಬಳಕೆ ಮಾಡುತ್ತಾರೆ. ಆ ಪೈಕಿ ಒಂದು ಸಿಮ್ ಡೇಟಾ ಹಾಗೂ ಹೊರಹೋಗುವ ಕರೆ ಮಾಡಲು ಬಳಕೆ ಮಾಡಿದರೇ, ಒನ್ನೊಂದು ಸಿಮ್ ಅನ್ನು ಒಳಬರುವ ಕರೆಗಳ ಸೇವೆಗಾಗಿ ಮೀಸಲಿಟ್ಟಿರುತ್ತಾರೆ. ಆದರೆ ಒಳಬರುವ ಕರೆಗಳ ಸೇವೆ ಉಳಿಸಿಕೊಳ್ಳಲಾದರೂ ಆ ಸಿಮ್‌ಗೆ ಕನಿಷ್ಠ ರೀಚಾರ್ಜ್ ಮಾಡಿಸಲೇಬೇಕಿರುತ್ತದೆ. ಹೀಗೆ ನೀವೇನಾದರೂ ಏರ್‌ಟೆಲ್ ಸಿಮ್ ಅನ್ನು ಒಳಬರುವ ಕರೆಗಳಿಗಾಗಿ ಚಾಲ್ತಿ ಇರಿಸಿಕೊಳ್ಳಬಯಸಿದರೇ ಸ್ಮಾರ್ಟ್ ರೀಚಾರ್ಜ್ ಪ್ಯಾಕ್ ಹಾಕಿಸಿಕೊಳ್ಳಬೇಕು.

ಹೌದು, ಏರ್‌ಟೆಲ್ ಕೆಲವು ಕನಿಷ್ಠ ಬೆಲೆಯ ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಆ ಪ್ಲ್ಯಾನ್‌ಗಳು ವ್ಯಾಲಿಡಿಟಿ, ವಾಯಿಸ್ ಕರೆ, ಎಸ್‌ಎಮ್‌ಎಸ್, ಹಾಗೂ ಡೇಟಾ ಸೌಲಭ್ಯಗಳನ್ನು ಒಳಗೊಂಡಿವೆ. ಹಾಗೆಯೇ ಏರ್‌ಟೆಲ್ ಟೆಲಿಕಾಂ ಡೇಟಾ ಸೌಲಭ್ಯದ ಹಾಗೂ ಟಾಕ್‌ಟೈಮ್ ಪ್ರಯೋಜನದ ಪ್ರತ್ಯೇಕ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಹಾಗಾದರೇ ಏರ್‌ಟೆಲ್‌ನ ಸ್ಮಾರ್ಟ್ ರೀಚಾರ್ಜ್ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 45ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 49ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲಿ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 100MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.

ಏರ್‌ಟೆಲ್ 79ರೂ. ಪ್ಲ್ಯಾನ್
ಈ ಪ್ಲ್ಯಾನ್ ಏರ್‌ಟೆಲ್‌ನ ಅಗ್ಗದ ಪ್ಲ್ಯಾನ್‌ಗಳಲ್ಲೊಂದಾಗಿದೆ. ಈ ಸ್ಮಾರ್ಟ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ರೀಚಾರ್ಜ್‌ನಲ್ಲ 64ರೂ. ಟಾಕ್‌ಟೈಮ್ ಲಭ್ಯವಾಗಲಿದ್ದು, 200MB ಡೇಟಾ ಸೌಲಭ್ಯವು ಸಿಗಲಿದೆ. ವಾಯಿಸ್ ಕರೆಗಳಿಗೆ ಪ್ರತಿ ಸೆಕೆಂಡಿಗೆ 2.5 ಶುಲ್ಕ ಹೊಂದಿದೆ. ಇನ್ನು ಲೋಕಲ್ ಎಸ್‌ಎಮ್ಎಸ್‌ಗೆ ಒಂದು ರೂಪಾಯಿ ಹಾಗೂ ಎಸ್‌ಟಿಡಿ ಎಸ್‌ಎಮ್‌ಎಸ್‌ಗೆ 1.5ಪೈಸೆ ಶುಲ್ಕ ಇದೆ.


Click it and Unblock the Notifications








