Home
ಸುದ್ದಿಜಾಲ

ನಿಮ್ಮ ಫೋನಿನಲ್ಲಿ ಈ ಆಪ್‌ ಇದ್ದರೆ, ಸುಲಭವಾಗಿ ಡೇಟಾ ಉಳಿಸಬಹುದು!

ಸ್ಮಾರ್ಟ್‌ಫೋನ್‌ ಅಗತ್ಯ ಸಾಧನವಾಗಿದ್ದು, ಹಲವು ಕೆಲಸಗಳಿಗೆ ಇಂಟರ್ನೆಟ್‌ ಬಳಕೆ ಅವಶ್ಯ ಆಗಿದೆ. ಹೀಗೆ ಎಲ್ಲದಕ್ಕೂ ಇಂಟರ್ನೆಟ್‌ ಬಳಕೆ ಮಾಡುವುದರಿಂದ ಡೇಟಾ ಹೆಚ್ಚಾಗಿ ಖಾಲಿ ಆಗುತ್ತದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಆಯ್ಕೆ ಇದ್ದರೂ ಕೂಡಾ, ಆಕಸ್ಮಿಕವಾಗಿ ಡೇಟಾ ಬಳಕೆ ಮಿತಿಗಳನ್ನು ಮೀರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್ ಇದ್ದರೆ ಸೂಕ್ತ.

ಹೌದು, ಸ್ಮಾರ್ಟ್‌ಫೋನ್‌ ಮೂಲಕವೇ ಹಲವು ಕೆಲಸಗಳನ್ನು ಮಾಡುವುದರಿಂದ ಪ್ರಸ್ತುತ ಅಧಿಕ ಮೊಬೈಲ್‌ ಡೇಟಾ ಅಗತ್ಯ ಎನಿಸುತ್ತದೆ. ಬಳಕೆದಾರರು ದೈನಂದಿನ ಡೇಟಾ ಸೌಲಭ್ಯದ ಯೋಜನೆಗಳನ್ನು ರೀಚಾರ್ಜ್ ಮಾಡಿಸಿರುತ್ತಾರೆ. ಅದಾಗ್ಯೂ ಕೆಲವು ವೇಳೆ ಡೇಟಾ ಹರಿವು ಹೆಚ್ಚಾಗಿರುತ್ತದೆ. ಆದರೆ ಡೇಟಾ ಬಳಕೆ ಚೆಕ್ ಮಾಡುವ ಕುರಿತಾದ ಅಪ್ಲಿಕೇಶನ್ ಗಳು ಲಭ್ಯ ಇವೆ.

ನಿಮ್ಮ ಫೋನಿನಲ್ಲಿ ಈ ಆಪ್‌ ಇದ್ದರೆ, ಸುಲಭವಾಗಿ ಡೇಟಾ ಉಳಿಸಬಹುದು!

ಡೇಟಾ ಬಳಕೆ ಚೆಕ್ ಮಾಡುವಂತಹ ಆಪ್‌ ಮೂಲಕ ಎಷ್ಟು ಡೇಟಾ ಬಳಕೆ ಆಗುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ. ಡೇಟಾ ಬಳಕೆ ಟ್ರ್ಯಾಕ್‌ ಮಾಡಲು ಇನ್‌ಬಿಲ್ಟ್‌ ಆಯ್ಕೆಗಳನ್ನು ಫೋನ್‌ಗಳು ಹೊಂದಿವೆ. ಅದಾಗ್ಯೂ, ಪರಿಣಾಮಕಾರಿಯಾಗಿ ಡೇಟಾ ಬಳಕೆ ಮಾಹಿತಿಗಾಗಿ ಥರ್ಡ್‌ ಪಾರ್ಟಿ ಆಪ್‌ಗಳು ಇನ್‌ಸ್ಟಾಲ್ ಮಾಡಬಹುದಾಗಿದೆ. ಹಾಗಾದರೆ ಡೇಟಾ ಬಳಕೆ ಚೆಕ್ ಮಾಡುವ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮೈ ಡೇಟಾ ಮ್ಯಾನೇಜರ್ (My Data Manager) :
ಮೈ ಡೇಟಾ ಮ್ಯಾನೇಜರ್ ಒಂದು ಸಮಗ್ರ ಡೇಟಾ ಬಳಕೆಯ ಟ್ರ್ಯಾಕಿಂಗ್ ಆಪ್‌ ಆಗಿದ್ದು, ಅದು ಮೊಬೈಲ್ ಡೇಟಾ ಮತ್ತು ವೈ - ಫೈ ಬಳಕೆ ಎರಡನ್ನೂ ಟ್ರ್ಯಾಕ್‌ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಡೇಟಾ ಮಿತಿಯಲ್ಲಿ ಉಳಿಯಲು ಬಳಕೆದಾರರಿಗೆ ಸಹಾಯ ಮಾಡಲು ಇದು ರಿಯಲ್‌ ಟೈಮ್‌ ಟ್ರ್ಯಾಕಿಂಗ್, ಡೇಟಾ ಬಳಕೆಯ ಹಿಸ್ಟರಿ ಮತ್ತು ಕಸ್ಟಮೈಸ್‌ ಮಾಡಬಹುದಾದ ಅಲರ್ಟ್‌ ನೀಡುತ್ತದೆ. ಆಂಡ್ರಾಯ್ಡ್‌ ಹಾಗೂ ಐಓಎಸ್‌ ( iOS ) ಎರಡೂ ಮಾದರಿಗಳಲ್ಲಿಯೂ ಲಭ್ಯವಿದೆ.

ಡೇಟಾ ಬಳಕೆಯ ಮಾನಿಟರ್ (Data Usage Monitor) :
ಡೇಟಾ ಬಳಕೆಯ ಮಾನಿಟರ್ ನಿಮ್ಮ ಮೊಬೈಲ್ ಡೇಟಾ ಬಳಕೆಯ ವಿವರವಾದ ಅಂಕಿ- ಅಂಶಗಳನ್ನು ಒದಗಿಸುವ ಆಂಡ್ರಾಯ್ಡ್‌ ಅಪ್ಲಿಕೇಶನ್ ಆಗಿದೆ. ಇದು ಪ್ರತಿ ಆಪ್‌ನ ಆಧಾರದ ಮೇಲೆ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೇ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಡೇಟಾ ಬಳಕೆಯ ವರದಿಗಳನ್ನು ಒದಗಿಸುತ್ತದೆ. ಮಿತಿ ಮೀರಿದ ಡೇಟಾ ಪ್ರಮಾಣವನ್ನು ತಪ್ಪಿಸಲು ಬಳಕೆದಾರರು ಕಸ್ಟಮ್ ಬಳಕೆಯ ಅಲರ್ಟ್‌ಗಳನ್ನು ಸೆಟ್ ಮಾಡಬಹುದಾಗಿದೆ.

Datally ಆಪ್‌ :
Datally ಆಪ್‌ ಕೂಡಾ ಬಳಕೆದಾರರು ತಮ್ಮ ಮೊಬೈಲ್ ಡೇಟಾ ಬಳಕೆಯನ್ನು ನಿರ್ವಹಿಸಲು ಸಹಾಯ ಮಾಡಲು Google ನಿಂದ ಅಭಿವೃದ್ಧಿಪಡಿಸಲಾದ ಮತ್ತೊಂದು ಆಂಡ್ರಾಯ್ಡ್‌ ಆಪ್‌ ಆಗಿದೆ. ಇದು ಡೇಟಾ ಉಳಿಸುವ ಸಲಹೆಗಳು, ರಿಯಲ್‌ ಟೈಮ್‌ ಡೇಟಾ ಬಳಕೆಯ ಟ್ರ್ಯಾಕ್‌ ಮತ್ತು ನಿರ್ದಿಷ್ಟ ಆಪ್‌ಗಳಿಗಾಗಿ ಹಿನ್ನೆಲೆ ಡೇಟಾ ಬಳಕೆಯನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಡೇಟಾವನ್ನು ಉಳಿಸಲು ಮತ್ತು ಬಳಕೆದಾರರ ಬಳಕೆಯ ಮೇಲೆ ಉತ್ತಮ ನಿಯಂತ್ರಣವನ್ನು ಪಡೆಯಲು Datally ನೆರವು ಮಾಡಲಿದೆ.

ಮೈ ಡೇಟಾ ಮ್ಯಾನೇಜರ್ ಮತ್ತು ಸೆಕ್ಯುರಿಟಿ (My Data Manager and Security) :
ಈ ಆಂಡ್ರಾಯ್ಡ್‌ ಅಪ್ಲಿಕೇಶನ್ ಡೇಟಾ ಬಳಕೆಯನ್ನು ಟ್ರ್ಯಾಕ್ ಮಾಡುವುದರ ಜೊತೆಗೆ ಬಳಕೆದಾರರ ಡಿವೈಸ್‌ ಅನ್ನು ರಕ್ಷಿಸಲು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಕೂಡಾ ನೀಡುತ್ತದೆ. ಇದು ಬಳಕೆದಾರರ ಡೇಟಾ ಬಳಕೆಯ ಮಾದರಿಗಳ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಬಳಕೆದಾರರ ಡೇಟಾವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸೂಕ್ತ ನೆರವು ಒದಗಿಸುತ್ತದೆ.

Best Mobiles in India

English summary
Some phones have in-built way to track your data. However, this tool is relatively limited, so you'll want to download a dedicated app to manage your data usage effectively. details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+