ವಿಶ್ವದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 15 ಟೆಕ್‌ ಕಂಪನಿಗಳು ಯಾವುವು ಗೊತ್ತಾ?

|

ಫಾರ್ಚೂನ್ ಸಂಸ್ಥೆಯು ಇತ್ತೀಚೆಗೆ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟೆಕ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಸಂಸ್ಥೆಯು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ - ಜನಪ್ರಿಯ ಆಪಲ್ ಕಂಪನಿಯು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಇದರೊಂದಿಗೆ ಲಿಸ್ಟ್‌ನಲ್ಲಿ ಇತರೆ ಹಲವಾರು ಟೆಕ್ ಕಂಪನಿಗಳು ಸೇರಿವೆ.

ಫಾರ್ಚೂನ್

ಇನ್ನು ಫಾರ್ಚೂನ್ ಸಂಸ್ಥೆಯು ಸುಮಾರು 3,800 ಕಾರ್ಪೊರೇಟ್ ಅಧಿಕಾರಿಗಳು, ನಿರ್ದೇಶಕರು ಮತ್ತು ವಿಶ್ಲೇಷಕರ ಸಮೀಕ್ಷೆ ನಡೆಸಿದ ನಂತರ ಟೆಕ್ ಕಂಪನಿಗಳ ಪಟ್ಟಿಯನ್ನು ಸಂಗ್ರಹಿಸಿದೆ. ಇಂದಿನ ಈ ಲೇಖನದಲ್ಲಿ ಫಾರ್ಚೂನ್ ಸಂಸ್ಥೆಯ ಲಿಸ್ಟ್‌ನಂತೆ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 15 ಟೆಕ್ ಕಂಪನಿಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಆಪಲ್ ಸಂಸ್ಥೆ

ಆಪಲ್ ಸಂಸ್ಥೆ

ಜನಪ್ರಿಯ ಐಫೋನ್ ತಯಾರಿಕಾ ಸಂಸ್ಥೆ ಆಪಲ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಸಂಸ್ಥೆಯು ಸತತ 14 ನೇ ವರ್ಷ ಆಪಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಮೆಜಾನ್ ಸಂಸ್ಥೆ

ಅಮೆಜಾನ್ ಸಂಸ್ಥೆ

ಇ-ಕಾಮರ್ಸ್‌ ದಿಗ್ಗಜನಾಗಿ ಗುರುತಿಸಿಕೊಂಡಿರುವ ಅಮೆಜಾನ್ ಹೆಚ್ಚು ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಜೆಫ್ ಬೆಜೋಸ್ ಒಡೆತನದ ಅಮೆಜಾನ್ ಲೀಡಿಂಗ್‌ನಲ್ಲಿ ಇದೆ.

ಮೈಕ್ರೋಸಾಫ್ಟ್‌ ಸಂಸ್ಥೆ

ಮೈಕ್ರೋಸಾಫ್ಟ್‌ ಸಂಸ್ಥೆ

ಸತ್ಯ ನಾಡೆಲ್ಲಾ ನೇತೃತ್ವದ ಮೈಕ್ರೋಸಾಫ್ಟ್ ಟೆಕ್ ಸಂಸ್ಥೆಯು ಹೆಚ್ಚು ಮೆಚ್ಚುಗೆ ಪಡೆದ ಕಂಪನಿಗಳ ಲಿಸ್ಟ್‌ನಲ್ಲಿ 3 ನೇ ಸ್ಥಾನದಲ್ಲಿದೆ.

ಗೂಗಲ್ ಆಲ್ಫಾಬೆಟ್

ಗೂಗಲ್ ಆಲ್ಫಾಬೆಟ್

ಟೆಕ್ ದೈತ್ಯ ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ 7ನೇ ಕಂಪನಿಯಾಗಿ ಗುರುತಿಸಿಕೊಂಡಿದೆ.

ಸೇಲ್ಸ್‌ಫೋರ್ಸ್ ಸಂಸ್ಥೆ

ಸೇಲ್ಸ್‌ಫೋರ್ಸ್ ಸಂಸ್ಥೆ

ಯುಎಸ್ ಮೂಲದ ಸಾಫ್ಟ್‌ವೇರ್ ದೈತ್ಯ ಸೇಲ್ಸ್‌ಫೋರ್ಸ್ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ.

ಅಕ್ಸೆಂಚರ್ ಸಂಸ್ಥೆ

ಅಕ್ಸೆಂಚರ್ ಸಂಸ್ಥೆ

ಜನಪ್ರಿಯ ಅಕ್ಸೆಂಚರ್ ಕಂಪನಿಯು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 33 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಎನ್ವಿಡಿಯಾ-Nvidia ಸಂಸ್ಥೆ

ಎನ್ವಿಡಿಯಾ-Nvidia ಸಂಸ್ಥೆ

ಯುಎಸ್ ಮೂಲದ ಚಿಪ್ ಮೇಕರ್ ಎನ್ವಿಡಿಯಾ ಕಂಪನಿಯು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಲಿಸ್ಟ್‌ನಲ್ಲಿ 37 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಅಡೋಬ್ ಸಂಸ್ಥೆ

ಅಡೋಬ್ ಸಂಸ್ಥೆ

ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಲಿಸ್ಟ್‌ನಲ್ಲಿ ಅಡೋಬ್ ಕಂಪನಿಯು 40 ನೇ ಸ್ಥಾನದಲ್ಲಿದೆ.

ಐಬಿಎಂ-IBM

ಐಬಿಎಂ-IBM

ಐಬಿಎಂ ವಿಶ್ವದ 41ನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಕಂಪನಿಯಾಗಿ ಗುರುತಿಸಿಕೊಂಡಿದೆ.

ಸ್ಯಾಮ್‌ಸಂಗ್ ಸಂಸ್ಥೆ

ಸ್ಯಾಮ್‌ಸಂಗ್ ಸಂಸ್ಥೆ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 49 ನೇ ಸ್ಥಾನದಲ್ಲಿದೆ.

ಪೇಪಾಲ್ ಸಂಸ್ಥೆ

ಪೇಪಾಲ್ ಸಂಸ್ಥೆ

ಪೇಪಾಲ್ ವಿಶ್ವದ 50ನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಕಂಪನಿಯಾಗಿದೆ.

Activision ಸಂಸ್ಥೆ

Activision ಸಂಸ್ಥೆ

ಗೇಮಿಂಗ್ ದೈತ್ಯ ಆಕ್ಟಿವಿಸನ್ ಕಂಪನಿಯು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 53 ನೇ ಸ್ಥಾನದಲ್ಲಿದೆ.

ಅಡ್ವಾನ್ಸ್‌ ಮೈಕ್ರೋ ಡಿವೈಸ್‌ (AMD) ಸಂಸ್ಥೆ

ಅಡ್ವಾನ್ಸ್‌ ಮೈಕ್ರೋ ಡಿವೈಸ್‌ (AMD) ಸಂಸ್ಥೆ

ಚಿಪ್‌ಮೇಕರ್ AMD ಸಂಸ್ಥೆಯು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 55 ನೇ ಸ್ಥಾನದಲ್ಲಿದೆ.

ಅಲಿಬಾಬಾ ಸಂಸ್ಥೆ

ಅಲಿಬಾಬಾ ಸಂಸ್ಥೆ

ಚೀನಾದ ಟೆಕ್ ದೈತ್ಯ ಅಲಿಬಾಬಾ ಅತ್ಯಂತ ಮೆಚ್ಚುಗೆ ಪಡೆದ ಸಂಸ್ಥೆಗಳ ಲಿಸ್ಟ್‌ನಲ್ಲಿ 61 ನೇ ಸ್ಥಾನದಲ್ಲಿದೆ.

ಅಮೆರಿಕಾ ಮಾವಿಲ್

ಅಮೆರಿಕಾ ಮಾವಿಲ್

ಮೆಕ್ಸಿಕೊ ಮೂಲದ ಟೆಲಿಕಾಂ ದೈತ್ಯ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳ ಪಟ್ಟಿಯಲ್ಲಿ 64 ನೇ ಸ್ಥಾನದಲ್ಲಿದೆ.

Most Read Articles
Best Mobiles in India

English summary
Fortune recently released its list of the world’s most admired companies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X