Home
ಸುದ್ದಿಜಾಲ

ಕಾಲೇಜು ವಿದ್ಯಾರ್ಥಿಗಳು ಖರೀದಿಸಬಹುದಾದ ಸ್ಮಾರ್ಟ್‌ ಗ್ಯಾಜೆಟ್‌ಗಳಿವು; ಆಫರ್‌ ಬೆಲೆಯಲ್ಲೂ ಲಭ್ಯ!

ಸ್ಮಾರ್ಟ್‌ ಗ್ಯಾಜೆಟ್‌ಗಳು ಆಗತಾನೆ ಜನಿಸಿದ ಮಕ್ಕಳಿಂದ ಹಿಡಿದು ಮುದುಕರವರೆಗೂ ವಿವಿಧ ರೀತಿಯಲ್ಲಿ ಸಹಾಯಕ. ಈ ನಡುವೆ ಶಾಲಾ ಕಾಲೇಜು ಆರಂಭ ಆಗಿದ್ದು, ವಿದ್ಯಾರ್ಥಿಗಳು ಸಹ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಅಗತ್ಯ ಸ್ಮಾರ್ಟ್‌ಡಿವೈಸ್ ಖರೀದಿ ಮಾಡಲು ಮುಂದಾಗಿದ್ದಾರೆ.

ಹೌದು, ಸ್ಮಾರ್ಟ್‌ ಗ್ಯಾಜೆಟ್‌ಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿವೆ. ಅದರಲ್ಲೂ ಕೊರೊನಾ ತರುವಾಯ ಆನ್‌ಲೈನ್‌ ಕ್ಲಾಸ್‌ಗಳು ಹಾಗೂ ಇನ್ನಿತರೆ ಆನ್‌ಲೈನ್‌ ಚಟುವಟಿಕೆಗೆ ಈ ಡಿವೈಸ್‌ಗಳು ಸಹಾಯಕವಾಗಿದ್ದು, ಈ ನಡುವೆ ಸ್ಮಾರ್ಟ್ ಬ್ಯಾಕ್‌ಪ್ಯಾಕ್‌ಗಳು, ಬಾಟಲಿಗಳು, ಮ್ಯಾಕ್‌ಬುಕ್, ಪವರ್ ಬ್ಯಾಂಕ್‌ಗಳು ಸೇರಿದಂತೆ ಇನ್ನೂ ಹೆಚ್ಚಿನ ಡಿವೈಸ್‌ಗಳು ಆಫರ್‌ ಬೆಲೆ ಲಭ್ಯ ಇವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳು ಅಗತ್ಯ ಹಾಗೂ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಯೋಣ.

ಕಾಲೇಜು ವಿದ್ಯಾರ್ಥಿಗಳು ಖರೀದಿಸಬಹುದಾದ ಸ್ಮಾರ್ಟ್‌ ಗ್ಯಾಜೆಟ್‌ಗಳಿವು...

ಮ್ಯಾಕ್‌ಬುಕ್ ಏರ್ 13 M2: ಕಾಲೇಜು ವಿದ್ಯಾರ್ಥಿಗಳಿಗೆ ಮ್ಯಾಕ್‌ಬುಕ್ ಏರ್ 13 M2 ಹಲವು ರೀತಿಯಲ್ಲಿ ಸಹಾಯಕವಾಗಿದೆ. ಇದು M2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಿಸಲಿದ್ದು, 13.6-ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 1080P ಕ್ಯಾಮೆರಾವನ್ನು ಆಯ್ಕೆ ಪಡೆದುಕೊಂಡಿದ್ದು, ಬ್ಯಾಕ್-ಟು-ಸ್ಕೂಲ್ ಕೊಡುಗೆಯ ಭಾಗವಾಗಿ ನೀವು M2 ಮ್ಯಾಕ್‌ಬುಕ್ ಏರ್‌ನೊಂದಿಗೆ ಆಪಲ್‌ ಏರ್‌ಪಾಡ್ಸ್‌ (3 ನೇ ಜನ್‌) ಅನ್ನು ಉಚಿತವಾಗಿ ಪಡೆಯಬಹುದು. ಇದರ ಬೆಲೆ 1,04,900ರೂ.ಗಳು.

HP ಕ್ರೋಮ್‌ಬುಕ್‌: ಇನ್ನು ಅಷ್ಟೊಂದು ಹಣ ಇಲ್ಲ ಎಂದಾದರೆ ನೀವು ಹೆಚ್‌ಪಿ ಕ್ರೋಮ್‌ಬುಕ್‌ ಖರೀದಿ ಮಾಡಬಹುದು. ಈ ಲ್ಯಾಪ್‌ಟಾಪ್ ಕ್ರೋಮ್‌ ಓಎಸ್‌ನಿಂದ ರನ್‌ ಆಗಲಿದ್ದು, ಗೂಗಲ್‌‌ ಅಪ್ಲಿಕೇಶನ್‌ಗಳು ಮತ್ತು ಕ್ಲೌಡ್ ಸ್ಟೋರೇಜ್‌ನೊಂದಿಗೆ ಸಂಯೋಜಿಸುತ್ತದೆ. ಇದರೊಂದಿಗೆ 15.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಇಂಟೆಲ್‌ ಸೆಲೊರೊನ್‌ N4500 ಪ್ರೊಸೆಸರ್‌ನೊಂದಿಗೆ ಕಾಣಿಸಿಕೊಂಡಿದೆ. ಇದರ ಬೆಲೆ 28,999ರೂ.ಗಳು.

ವೇಕ್-ಅಪ್ ಲೈಟ್:ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಆಗಿರುವ ಡಿವೈಸ್‌ ಇದು. ಈ ಆರ್ಕ್ನಿಕ್ಸ್ ಸ್ಮಾರ್ಟ್ ವೈಫೈ ಸೂರ್ಯೋದಯ ವೇಕ್-ಅಪ್ ಲೈಟ್ ಸೂರ್ಯನ ಹಾಗೆಯೇ ಮುಂಜಾನೆಯ ಬೆಳಕನ್ನು ನೀಡುತ್ತದೆ. ಈ ಮೂಲಕ ಶಾಂತಮನಸ್ಥಿತಿಯಿಂದ ದಿನವನ್ನು ಆರಂಭ ಮಾಡಬಹುದು. ಇನ್ನು ಹಿತವಾದ ಕೆಂಪು-ಬಣ್ಣದ ಬೆಳಕು ನಂತರ ಬಿಳಿ ಬೆಳಕಿಗೆ ಕ್ರಮೇಣ ಪರಿವರ್ತನೆಯಾಗುತ್ತದೆ. ಇದು 7ವಿಭಿನ್ನ ಬಣ್ಣಗಳು ಮತ್ತು 7ನೈಸರ್ಗಿಕ ಶಬ್ದಗಳ ಆಯ್ಕೆ ಪಡೆದಿದೆ. FM ಆಯ್ಕೆ ಸಹ ಲಭ್ಯ. ಇದರ ಬೆಲೆ 3,999ರೂ.ಗಳು.

ರಾಕೆಟ್‌ಬುಕ್ ಎವರ್‌ಲಾಸ್ಟ್ ಸ್ಮಾರ್ಟ್ ನೋಟ್‌ಬುಕ್: ಈ ಡಿವೈಸ್‌ ಖಂಡಿತಾ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು. ಯಾಕೆಂದರೆ ಇದು ಮರುಬಳಕೆ ಮಾಡಬಹುದಾದ ಪುಟಗಳೊಂದಿಗೆ ಬರಲಿದ್ದು, ನೀವು ಪುಟವನ್ನು ಸ್ವಚ್ಛಗೊಳಿಸಲು ಒದ್ದೆಯಾದ ಬಟ್ಟೆಯಿಂದ ಸುಲಭವಾಗಿ ಒರೆಸಬಹುದು. ಪರಿಸರ ಸ್ನೇಹಿ ನೋಟ್‌ಬುಕ್ ರಾಕೆಟ್‌ಬುಕ್ ಅಪ್ಲಿಕೇಶನ್‌ನೊಂದಿಗೆ ಕೆಲಸ ಮಾಡಲಿದ್ದು, ಟಿಪ್ಪಣಿಗಳನ್ನು ಸ್ಕ್ಯಾನ್ ಮಾಡಲು ಅವುಗಳನ್ನು ಗೂಗಲ್‌ ಡ್ರೈವ್, ಡ್ರಾಪ್‌ಬಾಕ್ಸ್, ಐಕ್ಲೌಡ್ ಮತ್ತು ಹೆಚ್ಚಿನವುಗಳಿಗೆ ಅಪ್‌ಲೋಡ್ ಮಾಡಲು ಅನುಮತಿಸುತ್ತದೆ. ಇದರ ಬೆಲೆ 4,205ರೂ.ಗಳು.

ಜಬ್ರಾ ಎಲೈಟ್ 4 ವಾಯರ್‌ಲೆಸ್‌ ಇಯರ್‌ಬಡ್ಸ್: ಈ ಇಯರ್‌ಬಡ್ಸ್ ಸಂಗೀತ ಆಲಿಸಲು ಅಥವಾ ಪಾಠಗಳನ್ನು ರೆಕಾರ್ಡ್‌ ಮಾಡಿಕೊಂಡು ಕೇಳಲು ಸಹಾಯಕವಾಗಿದ್ದು, ಇದು ಶಬ್ದ ರದ್ದತಿಯೊಂದಿಗೆ ಫೀಚರ್ಸ್‌ ಪಡೆದಿದ್ದು, ಡ್ಯುಯಲ್ ಪೇರಿಂಗ್ ಬೆಂಬಲದೊಂದಿಗೆ ಪ್ಯಾಕ್‌ ಆಗಿದೆ. ಅದರಲ್ಲೂ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 5.5 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ನೀಡಲಿದೆ. ಇದರ ಬೆಲೆ 4,999ರೂ.ಗಳಾಗಿದೆ.

ಕಾಲೇಜು ವಿದ್ಯಾರ್ಥಿಗಳು ಖರೀದಿಸಬಹುದಾದ ಸ್ಮಾರ್ಟ್‌ ಗ್ಯಾಜೆಟ್‌ಗಳಿವು...

MI ಪವರ್ ಬ್ಯಾಂಕ್ 3i: ಈ ಪವರ್‌ ಬ್ಯಾಂಕ್ 20000mAh ಸಾಮರ್ಥ್ಯ ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಇದು ಸುಧಾರಿತ ಚಿಪ್ ರಕ್ಷಣೆಯ 12 ಲೇಯರ್‌ಗಳನ್ನು ಹೊಂದಿದ್ದು, ಈ ಮೂಲಕ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಇದರೊಂದಿಗೆ ಟ್ರಿಪಲ್ ಪೋರ್ಟ್ ಔಟ್‌ಪುಟ್‌ ಆಯ್ಕೆ ಇದೆ. ಇದರ ಬೆಲೆ 2,049ರೂ.ಗಳು.

ಪೋರ್ಟಬಲ್ ಫ್ಯಾನ್ : ಇದು ಈ ಮಳೆಗಾಲಕ್ಕೆ ಅನಗತ್ಯ ಎಂದಾದರೂ ವಿದ್ಯಾರ್ಥಿಗಳಿಗೆ ಖಂಡಿತಾ ಬಳಕೆಗೆ ಬರುತ್ತದೆ. ಇದು ಕಾಂಪ್ಯಾಕ್ಟ್ ನೆಕ್‌ಬ್ಯಾಂಡ್-ಶೈಲಿಯನ್ನು ಪಡೆದುಕೊಂಡಿದ್ದು, ಇದನ್ನು ಕುತ್ತಿಗೆಗೆ ಹಾಕಿಕೊಳ್ಳಬಹುದು. ಈ ಫ್ಯಾನ್‌ಗಳು ಬ್ಯಾಟರಿ ಆಧಾರಿತವಾಗಿ ಕೆಲಸ ಮಾಡಲಿದ್ದು, ವೇಗದ ಚಾರ್ಜಿಂಗ್‌ ಬೆಂಬಲ ಸಹ ಪಡೆದುಕೊಂಡಿದೆ. ಅದೆಲ್ಲಕ್ಕೂ ಮಿಗಿಲಾಗಿ ನಿಮ್ಮ ಮುಖಕ್ಕೆ ನೇರವಾಗಿ ಗಾಳಿ ನೀಡುತ್ತವೆ. ಇದರ ಬೆಲೆ ಕೇವಲ 376ರೂ.ಗಳು.

ನಾಯ್ಸ್‌ ಕಲರ್‌ಫಿಟ್ ಕ್ವಾಡ್‌ ಕಾಲ್‌ ಸ್ಮಾರ್ಟ್‌ವಾಚ್‌: ಈ ವಾಚ್‌ ಕೈಗೆಟುಕುವ ಸ್ಮಾರ್ಟ್ ವಿಭಾಗದಲ್ಲಿ ಲಭ್ಯ ಇದ್ದು, ಬ್ಲೂಟೂತ್ ಕರೆಯನ್ನು ಬೆಂಬಲಿಸುತ್ತದೆ. ಇದರೊಂದಿಗೆ ನಾಯ್ಸ್ ಹೆಲ್ತ್ ಸೂಟ್‌ನೊಂದಿಗೆ ಪ್ಯಾಕ್‌ ಆಗಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 7 ದಿನಗಳವರೆಗೆ ಬಳಕೆ ಮಾಡಿಕೊಳ್ಳಬಹುದು.ಇದರಿಂದ ವಿದ್ಯಾರ್ಥಿಗಳು ಸಮಯವನ್ನು ಪಾಲನೆ ಮಾಡಬಹುದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರ ಬೆಲೆ 1,499ರೂ.ಗಳು.

ಆಂಟಿ-ಥೆಫ್ಟ್ ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್: ಫರ್ ಜಡೆನ್ ಪ್ರೊ ಸೀರೀಸ್ ಸ್ಮಾರ್ಟ್ ಟೆಕ್ ಆಂಟಿ-ಥೆಫ್ಟ್ ಲ್ಯಾಪ್‌ಟಾಪ್ ಬ್ಯಾಕ್‌ಪ್ಯಾಕ್ ವಿದ್ಯಾರ್ಥಿಗಳಿಗೆ ಅಗತ್ಯವಾದ ವಸ್ತುವಾಗಿದೆ. ಇದು
ಇನ್‌ಬಿಲ್ಟ್‌ ಯುಎಸ್‌ಬಿ ಟೈಪ್-ಎ ಮತ್ತು ಯುಎಸ್‌ಬಿ ಟೈಪ್-ಸಿ ರಿವರ್ಸಿಬಲ್ ಚಾರ್ಜಿಂಗ್ ಪೋರ್ಟ್ ಸಿಸ್ಟಮ್‌ನೊಂದಿಗೆ ಪ್ಯಾಕ್‌ ಆಗಿದ್ದು, ಇದರಿಂದ ನಿಮ್ಮ ಎಲ್ಲಾ ಡಿವೈಸ್‌ಗಳನ್ನು ಸೇಫ್‌ ಆಗಿ ಇರಿಸಿಕೊಳ್ಳಬಹುದು. ಇದರ ಬೆಲೆ 3,499ರೂ.ಗಳು.

ಸ್ಮಾರ್ಟ್ ವಾಟರ್ ಬಾಟಲ್: ಈ ಕ್ಯಾಪ್2O ಇನ್‌ಬಿಲ್ಟ್‌ ಯುವಿ ತಂತ್ರಜ್ಞಾನದ ಸ್ಮಾರ್ಟ್ ವಾಟರ್ ಬಾಟಲ್ ಯುವಿ ಆಧಾರಿತ ಶುದ್ಧೀಕರಣ ವ್ಯವಸ್ಥೆಯೊಂದಿಗೆ ಬರಲಿದ್ದು, 5 ನಿಮಿಷಗಳಲ್ಲಿ 99.99% ಬ್ಯಾಕ್ಟೀರಿಯಾ ಮತ್ತು ವೈರಸ್ ಅನ್ನು ಕೊಲ್ಲುತ್ತದೆ. ಹಾಗೆಯೇ ಬಾಟಲಿಯು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 45 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಇದರ ಬೆಲೆ 2,499ರೂ.ಗಳು

Best Mobiles in India

English summary
Smart gadgets are a complement to the academic development of students. Similarly smart backpacks, bottles, MacBook, power banks and many more devices are available at the offer price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+