Home
ಸುದ್ದಿಜಾಲ

ಇವೇ ನೋಡಿ ವಿಶ್ವದ 10 ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು, ನಿಮಗೆ ಯಾವ ಫೋನ್‌ ಇಷ್ಟ?

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಬಳಕೆದಾರರ ಅನುಕೂಲಕ್ಕೆ ತಕ್ಕ ಎಲ್ಲಾ ರೀತಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಕೆಲವು ಫೋನ್‌ಗಳು ಮಾತ್ರ ಇಡೀ ಜಗತ್ತನ್ನೇ ಆಳಲು ಮುಂದಾಗಿವೆ. ಅಂದರೆ ಈ ಫೋನ್‌ಗಳನ್ನು ಜಗತ್ತಿನಾದ್ಯಂತ ಹೆಚ್ಚು ಜನರು ಇಷ್ಟ ಪಡುತ್ತಾರೆ. ಆ ಫೋನ್‌ಗಳ ವಿಭಾಗದಲ್ಲಿ ನೀವು ಬಳಕೆ ಮಾಡುತ್ತಿರುವ ಫೋನ್‌ ಸಹ ಒಂದಾಗಿರಬಹುದು.

ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ಕೆಲವರು ಮಾರುಕಟ್ಟೆಗೆ ಯಾವುದೇ ಹೊಸ ಫೋನ್‌ ಎಂಟ್ರಿಯಾದರೂ ಅದಕ್ಕೆ ಅಪ್‌ಗ್ರೇಡ್‌ ಆಗುವ ಹವ್ಯಾಸ ಹೊಂದಿದ್ದಾರೆ. ಈ ಎಲ್ಲಾ ಕಾರಣಕ್ಕೆ ಈ ಫೋನ್‌ಗಳನ್ನು ಜಾಗತಿಕವಾಗಿ ಹೆಚ್ಚು ಖರೀದಿ ಮಾಡಲಾಗಿದೆ. ಈ ಮೂಲಕ ಈ ಫೋನ್‌ಗಳು ಜಗತ್ತಿನಲ್ಲೇ ವಿಶೇಷ ಜನಪ್ರಿಯತೆ ಪಡೆದುಕೊಂಡಿವೆ. ಹಾಗಿದ್ರೆ, ಒಮ್ಡಿಯಾದ ಇತ್ತೀಚಿನ ವರದಿ ಪ್ರಕಾರ ಯಾವುವು ಆ ಫೋನ್‌ಗಳು ಎಂಬುದನ್ನು ತಿಳಿಸಿಕೊಡಲಾಗಿದೆ ಓದಿರಿ.

ಇವೇ ನೋಡಿ ವಿಶ್ವದ 10 ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು..

ಮೊದಲ ಸ್ಥಾನ ಪಡೆದ ಆಪಲ್‌: ಮೊದಲ ಸ್ಥಾನದಲ್ಲಿ ಆಪಲ್‌ನ ಐಫೋನ್ 14 ಪ್ರೊ ಮ್ಯಾಕ್ಸ್‌ (iPhone 14 Pro Max) ಇದೆ. ಈ ವರ್ಷದ ಮೊದಲಾರ್ಧದಲ್ಲಿ ವಿಶ್ವದಾದ್ಯಂತ ಹೆಚ್ಚು ರವಾನೆಯಾದ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ. ಒಮ್ಡಿಯಾದ ಸ್ಮಾರ್ಟ್‌ಫೋನ್ ಮಾಡೆಲ್ ಮಾರ್ಕೆಟ್ ಟ್ರ್ಯಾಕರ್ - 2 ಕ್ಯೂ 23 ರ ಪ್ರಕಾರ ಆಪಲ್ ಒಟ್ಟು 26.5 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ ಎಂದು ಉಲ್ಲೇಖಿಸಿದೆ.

ಐಫೋನ್ 14 ಪ್ರೊ (iPhone 14 Pro) ಸಹ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇದರೊಂದಿಗೆ ಎರಡನೇ ಸ್ಥಾನದಲ್ಲೂ ಸಹ ಐಫೋನ್‌ ಇದೆ. ಅಂದರೆ ಆಪಲ್‌ ಐಫೋನ್ 14. ಈ ತ್ರೈಮಾಸಿಕದಲ್ಲಿ ಅಗ್ರ 10 ಶ್ರೇಯಾಂಕಗಳನ್ನು ಪ್ರವೇಶಿಸಲು ಎರಡನೇ ಮೂರನೇ ಫೋನ್ ಇದಾಗಿದ್ದು, ಈ ಕ್ಷಣಕ್ಕೂ ಸಹ ಈ ಫೋನ್‌ಗೆ ಭಾರೀ ಬೇಡಿಕೆ ಇದೆಯಂತೆ.

ಐಫೋನ್‌ಗಳ ಲಿಸ್ಟ್‌ ಇನ್ನೂ ಮುಗಿದಿಲ್ಲ ಯಾಕೆಂದರೆ ನಾಲ್ಕನೇ ಸ್ಥಾನವನ್ನೂ ಸಹ ಐಫೋನ್‌ ಆಕ್ರಮಿಸಿಕೊಂಡಿದೆ. ಅಂದರೆ ಈ ಲಿಸ್ಟ್‌ನಲ್ಲಿ ಐಫೋನ್ 13 ಇದೆ. ಈ ಫೋನ್
H1 2023 ರಲ್ಲಿ 15.5 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ ವಿಶ್ವದ ನಾಲ್ಕನೇ ಅತಿ ಹೆಚ್ಚು ರವಾನೆಯಾದ ಸ್ಮಾರ್ಟ್‌ಫೋನ್ ಎಂದು ಜನಪ್ರಿಯತೆ ಪಡೆದುಕೊಂಡಿದೆ. ಈ ಮೂಲಕ ಆಪಲ್‌ ಇತರೆ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ.

ಸ್ಯಾಮ್‌ಸಂಗ್‌ ಫೋನ್‌ಗಳು: ಇದಾದ ನಂತರದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A145 (Samsung Galaxy A145) ಐದನೇ ಸ್ಥಾನ ಪಡೆದಿದೆ. ಈ ಫೋನ್ 12.4 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ ವಿಶ್ವದ ಅಗ್ರ ಐದನೇ ಸ್ಥಾನ ಗಳಿಸಿಕೊಂಡಿದೆ. ಇದರ ನಂತರದಲ್ಲೂ ಸಹ ಸ್ಯಾಮ್‌ಸಂಗ್‌ನ ಫೋನ್‌ ಇದೆ. ಅಂದರೆ ಆರನೇ ಸ್ಥಾನದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಇದ್ದು, 2023 ರ ಮೊದಲಾರ್ಧದಲ್ಲಿ ಜಾಗತಿಕವಾಗಿ 9.6 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ ಈ ಫೋನ್‌ ಜನಪ್ರಿಯತೆ ಪಡೆದಿದೆ.

ಏಳನೇ ಸ್ಥಾನವನ್ನೂ ಸ್ಯಾಮ್‌ಸಂಗ್‌ ಆಕ್ರಮಿಸಿಕೊಂಡಿದ್ದು, ಈ ಸಾಲಿನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G ಸ್ಮಾರ್ಟ್‌ಫೋನ್‌ ಅನ್ನು ನೋಡಬಹುದು. ವರದಿಯ ಪ್ರಕಾರ ಸ್ಯಾಮ್‌ಸಂಗ್ 9.0 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ. ನಂತರದಲ್ಲಿಯೂ ಸ್ಯಾಮ್‌ಸಂಗ್‌ ಫೋನ್‌ ಲಿಸ್ಟ್ ಇದ್ದು, ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಸ್ಮಾರ್ಟ್‌ಫೋನ್ ಮೊದಲ ಆರು ತಿಂಗಳಲ್ಲಿ 8.8 ಮಿಲಿಯನ್ ಯುನಿಟ್‌ಗಳನ್ನು ರವಾನಿಸಲಾಗಿದೆ.

ಇವೇ ನೋಡಿ ವಿಶ್ವದ 10 ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳು..

ಇದಾದ ಬಳಿಕ ಒಂಬತ್ತನೇ ಸ್ಥಾನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G (Samsung Galaxy A34 5G) ಫೋನ್‌ ಇದೆ. 2023 ರ ಮೊದಲಾರ್ಧದಲ್ಲಿ ಈ ಫೋನ್‌ನ 7.1 ಮಿಲಿಯನ್ ಯುನಿಟ್‌ಗಳನ್ನು ರವಾನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗದೆ. ಆದರೆ, ಕೊನೆಯ ಹತ್ತನೇ ಸ್ಥಾನವನ್ನು ಮತ್ತೇ ಆಪಲ್‌ ಪಡೆದುಕೊಂಡಿದೆ. ಅಂದರೆ ಆಪಲ್‌ನ ಐಫೋನ್ 11 ಈ ಸಾಲಿನಲ್ಲಿದೆ. ಈ ಫೋನ್ ಮೊದಲ 6 ತಿಂಗಳ ಅವಧಿಯಲ್ಲಿ 6.9 ಮಿಲಿಯನ್ ಯುನಿಟ್ ಸಾಗಣೆಯನ್ನು ಕಂಡಿದೆ.

Best Mobiles in India

English summary
These smartphone have gained special popularity in the world. In this regard Omdia reported that Apple and Samsung have got the top position.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+