ವಿಶ್ವದ ಅಪಾಯಕಾರಿ ಪಾಸ್‌ವರ್ಡ್‌ಗಳ ಲಿಸ್ಟ್‌ ಇಲ್ಲಿದೆ!..ಇದ್ರಲ್ಲಿ ನಿಮ್ಮ ಪಾಸ್‌ವರ್ಡ್‌ ಇದೆಯಾ?

|

ಇಂದಿನ ಈ ಡಿಜಿಟಲ್ ಯುಗದಲ್ಲಿ ಬಹುತೇಕ ಕೆಲಸಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ. ಜಿ-ಮೇಲ್, ಗೂಗಲ್ ಖಾತೆ, ಫೇಸ್‌ಬುಕ್, ಟ್ವಿಟ್ಟರ್ ಹೀಗೆ ಹಲವು ಆನ್‌ಲೈನ್‌ ಖಾತೆಗಳಿಗೆ/ಅಕೌಂಟ್‌ಗಳಿಗೆ ಪಾಸ್‌ವರ್ಡ್‌ ಎಂಬುದು ಲಾಕರ್‌ ಇದ್ದಂತೆ. ಆದರೆ ಪ್ರಸ್ತುತ ಅನೇಕರು ತಮ್ಮ ಖಾತೆಗಳಿಗೆ ಅತೀ ಸರಳ ಪಾಸ್‌ವರ್ಡ್‌ ಬಳಕೆ ಮಾಡುತ್ತಿದ್ದಾರೆ ಎನ್ನುತ್ತಿವೆ ವರದಿಗಳು.

ಅಂತರ್ಜಾಲದಲ್ಲಿ

ಶತಕೋಟಿ ಜನರು ಅಂತರ್ಜಾಲದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಜಗತ್ತಿನಲ್ಲಿ, ದುರ್ಬಲತೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ. ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕ ಲೆಫ್ಟಿನೆಂಟ್ ಜನರಲ್ (ನಿವೃತ್ತ) ರಾಜೇಶ್ ಪಂತ್ ಇತ್ತೀಚೆಗೆ ಸೈಬರ್‌ಟಾಕ್‌ಗಳು ಗಮನಾರ್ಹ ಅಂತರದಿಂದ ಏರಿದೆ ಎಂದು ಹೇಳಿದ್ದಾರೆ.ಪ್ರತಿದಿನ 4 ಲಕ್ಷ ಮಾಲ್ವೇರ್‌ಗಳು ಕಂಡುಬರುತ್ತವೆ ಮತ್ತು ಕನಿಷ್ಠ 375 ಸೈಬರ್ ದಾಳಿಗಳು ಭಾರತದಲ್ಲಿಯೇ ಕಂಡುಬರುತ್ತವೆ ಎಂದು ಪಂತ್ ಹೇಳಿದ್ದಾರೆ.

ನಾರ್ಡ್‌ಪಾಸ್

ನಾರ್ಡ್‌ಪಾಸ್ (NordPass) ಪ್ರತಿವರ್ಷ ದುರ್ಬಲ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಅವುಗಳನ್ನು ಜಗತ್ತಿನಾದ್ಯಂತ ಅತ್ಯಂತ ಅಪಾಯಕಾರಿ ಪಾಸ್‌ವರ್ಡ್‌ಗಳೆಂದು ಪರಿಗಣಿಸಲಾಗಿದೆ. ಈ ರೀತಿಯ ಪಾಸ್‌ವರ್ಡ್‌ಗಳು ಕ್ರ್ಯಾಕ್ ಮಾಡಲು ಸುಲಭವಾಗಿರುತ್ತವೆ ಎನ್ನಲಾಗಿದೆ. ಹಾಗಾದರೇ ನಾರ್ಡ್‌ಪಾಸ್ ಪಟ್ಟಿ ಮಾಡಿರುವ ದುರ್ಬಲ ಪಾಸ್‌ವರ್ಡ್‌ಗಳನ್ನು ಮುಂದೆ ನೋಡೋಣ ಬನ್ನಿರಿ.

senha

picture1
senha
Million2
aaron431
evite
jacket025
omgpop
qqww1122
qwer123456
unknown
chatbooks
20100728
5201314
Bangbang123
jobandtalent
default
123654
ohmnamah23
zing
102030
147258369
party

asd123

myspace1
asd123
a123456789
1111
a801016
12341234
101010
princess1
987654
love
25251325
iloveyou1
686584
hunter
password123
123456789a
naruto
888888
1234qwer
147258
999999
159357
88888888
789456123
anhyeuem
1q2w3e
789456
6655321

ವೈಯಕ್ತಿಕ ಮಾಹಿತಿ ಬೇಡ

ವೈಯಕ್ತಿಕ ಮಾಹಿತಿ ಬೇಡ

ಪಾಸ್‌ವರ್ಡ್‌ ಅನ್ನು ಇಡುವಾಗ ಬೇಗ ನೆನಪಿಗೆ ಬರಲಿ ಎಂದು ನೀವು ನಿಮ್ಮ ಹೆಸರನ್ನೋ ಅಥವಾ ನಿಮ್ಮ ಮೊಬೈಲ್‌ ನಂಬರ್‌ ಅನ್ನೋ ಇಡಬೇಡಿ ಏಕೆಂದರೆ ಇವು ಸುರಕ್ಷಿತವಲ್ಲ. ಪಾಸ್‌ವರ್ಡ್‌ಗೆ ವೈಯಕ್ತಿಕ ಮಾಹಿತಿಗಳು ಇಡುವುದು ನಿಮಗೆ ಸರಳ ಎನಿಸಬಹುದು ಆದರೆ ನಿಮ್ಮ ಖಾತೆಗಳಿಗೆ ಈ ಪಾಸ್‌ವರ್ಡ್‌ಗಳು ಹೆಚ್ಚು ಭದ್ರತೆ ನೀಡುವುದಿಲ್ಲ ಹ್ಯಾಕ್‌ ಆಗುವ ಸಂಭವಗಳಿರುತ್ತವೆ.

ಪಾಸ್‌ವರ್ಡ್ ಕಠಿಣವಾಗಿರಲಿ

ಪಾಸ್‌ವರ್ಡ್ ಕಠಿಣವಾಗಿರಲಿ

ಹೆಸರು, ನಂಬರ್‌ ಬಳಸಿ ಪಾಸ್‌ವರ್ಡ್‌ಗಳನ್ನು ಸರಳವಾಗಿ ಇಡಬೇಡಿ, ಸಾಧ್ಯವಾದಷ್ಟು ಕಠಿಣವಾಗಿರಲಿ. ನಿಮ್ಮ ಪಾಸ್‌ವರ್ಡ್‌ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್ಸ್‌ಗಳನ್ನು ಬಳಸಿಕೊಳ್ಳುವುದರ ಮೂಲಕ ಕಠಿಣ ಪಾಸ್‌ವರ್ಡ್‌ ರಚಿಸಬಹುದಾಗಿದೆ.

ಒಂದೇ ಪಾಸ್‌ವರ್ಡ್‌ ಬೇಡ

ಒಂದೇ ಪಾಸ್‌ವರ್ಡ್‌ ಬೇಡ

ಆನ್‌ಲೈನ್‌ನಲ್ಲಿ ಮತ್ತು ಇತರೆ ಆಪ್‌ಗಳಿಗೆ ನೀವು ಹಲವಾರು ಖಾತೆಗಳನ್ನು ಹೊಂದಿರುತ್ತಿರಿ ಆ ಎಲ್ಲ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಬಳಸಬೇಡಿರಿ. ನೀವು ಒಂದೇ ಪಾಸ್‌ವರ್ಡ್‌ ಬಳಸುವುದರಿಂದ ನಿಮ್ಮ ಪಾಸ್‌ವರ್ಡ್ ಸುರಕ್ಷತೆ ಹ್ಯಾಕ್‌ ಆಗಲು ಸಾಧ್ಯತೆಗಳಿರುತ್ತವೆ.

ಪಾಸ್‌ವರ್ಡ್‌ ಬರೆದಿಡಬೇಡಿ

ಪಾಸ್‌ವರ್ಡ್‌ ಬರೆದಿಡಬೇಡಿ

ಕೆಲವರು ಪಾಸ್‌ವರ್ಡ್‌ ಬೇಗ ನೆನಪಾಗಲಿ ಎಂದು ಪಾಸ್‌ವರ್ಡ್‌ಗಳನ್ನು ಪುಸ್ತಕದಲ್ಲಿ ನೋಟ್‌ ಮಾಡಿರುತ್ತಾರೆ ಆದರೆ ಕೆಲವು ಸಂದರ್ಭಗಳಲ್ಲಿ ಇತರರಿಂದ ದುರುಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಬರೆದಿಟ್ಟರು ಅದು ನಿಮಗೆ ಮಾತ್ರ ತಿಳಿಯುವಂತಿರಲಿ.

ಪಾಸ್‌ವರ್ಡ್‌ ಬದಲಾಯಿಸಿ

ಪಾಸ್‌ವರ್ಡ್‌ ಬದಲಾಯಿಸಿ

ನಿಮ್ಮ ಎಲ್ಲ ಬಗೆಯ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಬೇಕು. ಬಹುತೇಕರು ಖಾತೆ ತೆರೆದಾಗ ಇಟ್ಟ ಪಾಸ್‌ವರ್ಡ್ ಅನ್ನು ಮತ್ತೆ ಬದಲಾಯಿಸಿರುವುದೇ ಇಲ್ಲ. ಹಲವು ವರ್ಷಗಳ ಒಂದೇ ಪಾಸ್‌ವರ್ಡ್‌ ಬಳಕೆ ಹೆಚ್ಚು ಸುರಕ್ಷಿತವಲ್ಲ.

Best Mobiles in India

English summary
NordPass publishes a list of what the ‘worst’ passwords for every year. The list is made out of all the passwords that are the easiest to crack.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X