smartphones: ಈ ವರ್ಷ ಲಾಂಚ್ ಆದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು! ಫೋಟೋಗ್ರಫಿ ಪ್ರಿಯರಿಗೆ ಅಚ್ಚು ಮೆಚ್ಚು
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ಇಂದು ಕ್ಯಾಮೆರಾ ಉದ್ದೇಶಕ್ಕಾಗಿಯೇ ಇರುವ ಫೋನ್‌ಗಳನ್ನು ಕಾಣಬಹುದು. ಈ ಫೋನ್‌ಗಳು ಯಾವುದೇ ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕಿಂತ ಕಡಿಮೆ ಇಲ್ಲದ ಫೋಟೋಗಳನ್ನು ಶೂಟ್ ಮಾಡುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ. ಅದರಲ್ಲೂ ಗ್ರಾಹಕರು ಸಹ ಹೆಚ್ಚಾಗಿ ಈ ರೀತಿಯ ಫೋನ್‌ಗಳ ಕಡೆ ಹೆಚ್ಚು ವಾಲುತ್ತಿದ್ದಾರೆ.
ಹೌದು, ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ (Camera Features) ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಈ ಫೋನ್‌ಗಳ ವಿಭಾಗದಲ್ಲಿ ನೀವು ಆಪಲ್, ಸ್ಯಾಮ್‌ಸಂಗ್, ಒನ್‌ಪ್ಲಸ್ ಸೇರಿದಂತೆ ಅನೇಕ ಫೋನ್‌ಗಳನ್ನು ಕಾಣಬಹುದು. ಇವು ಫೋಟೋಗ್ರಫಿ (Photography) ಪ್ರಿಯರಿಗೆ ನೆಚ್ಚಿನ ಆಯ್ಕೆಆಗಿದ್ದು, ಅದರಂತೆ ಈ ವರ್ಷ ಅಂದರೆ 2023 ರಲ್ಲಿ ಅನಾವರಣ ಆದ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಇರುವ ಫೋನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ 5G: ಈ ಸ್ಮಾರ್ಟ್‌ಫೋನ್ (Samsung Galaxy S23 Ultra 5G) 200 ಮೆಗಾಪಿಕ್ಸೆಲ್ ಸೆನ್ಸರ್ ಪಡೆಯುವ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದೆ. ಇದರೊಂದಿಗೆ ಫೋನ್‌ನಲ್ಲಿ ಮೂರು ಸಮಾನ ಸಾಮರ್ಥ್ಯದ ಶೂಟರ್‌ಗಳಿವೆ. ಅಂದರೆ 12MP ಅಲ್ಟ್ರಾ-ವೈಡ್ ಕ್ಯಾಮೆರಾ, 10MP ಪೆರಿಸ್ಕೋಪ್ ಲೆನ್ಸ್ ಮತ್ತು ಇನ್ನೊಂದು 10MP ಟೆಲಿಫೋಟೋ ಶೂಟರ್ ಅನ್ನು ಹೊಂದಿದೆ. ಜೊತೆಗೆ ಉತ್ತಮ ಸೆಲ್ಫಿ ಫೋಟೋ ಸೆರೆಹಿಡಿಯಲು 12MP ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಆಪಲ್ ಐಫೋನ್ 15 ಪ್ರೊ ಮ್ಯಾಕ್ಸ್: ಇತ್ತೀಚಿಗೆ ಲಾಂಚ್ ಆದ ಆಪಲ್ ಐಫೋನ್ 15 ಪ್ರೊ ಮ್ಯಾಕ್ಸ್ (Apple iPhone 15 Pro Max) ಸಹ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಅತ್ಯುತ್ತಮ ಸ್ಟಿಲ್‌ಗಳು ಮತ್ತು ವಿಡಿಯೋಗಳನ್ನು ಶೂಟ್ ಮಾಡುವ ಸಾಮರ್ಥ್ಯವಿರುವ ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿಗೆ ಟೈಪ್-ಸಿ ಪೋರ್ಟ್ ಆಯ್ಕೆ ಸಹ ಪಡೆದಿದೆ. ಇನ್ನು 48 MP + 12 MP + 12 MP ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ 12 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಗೂಗಲ್ ಪಿಕ್ಸೆಲ್ 8 ಪ್ರೊ: ಕ್ಯಾಮೆರಾ ಪ್ರಿಯರಿಗೆ ಮತ್ತೊಂದು ನೆಚ್ಚಿನ ಫೋನ್ ಎಂದರೆ ಅದುವೇ ಗೂಗಲ್ ಪಿಕ್ಸೆಲ್ 8 ಪ್ರೊ(Google Pixel 8 Pro). ಈ ಫೋನ್ 50MP ಪ್ರೈಮರಿ, 48MP ಅಲ್ಟ್ರಾ ವೈಡ್ ಮತ್ತು 48MP ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದ್ದು ಆಸಕ್ತಿದಾಯಕ ಫೋಟೋ ಮತ್ತು ವೀಡಿಯೊ ಎಡಿಟಿಂಗ್ ಟೂಲ್ಸ್ ಅನ್ನೂ ಸಹ ಹೊಂದಿದೆ. ಇದರೊಂದಿಗೆ 10.5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಮೂಲಕ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಸಹಕಾರಿ.
ವಿವೋ X90 ಪ್ರೊ: ಈ ಸ್ಮಾರ್ಟ್‌ಫೋನ್ (Vivo X90 Pro) ಸಹ ಈ ವರ್ಷ ಲಾಂಚ್ ಆದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಲ್ಲಿ ಪ್ರಮುಖವಾಗಿದೆ. ಇದು 50MP 1 ಇಂಚಿನ ಸೋನಿ IMX989 ಪ್ರಾಥಮಿಕ ಸೆನ್ಸರ್, 50MP IMX758 ಲೆನ್ಸ್ ಮತ್ತು 12MP ಅಲ್ಟ್ರಾ-ವೈಡ್ ಶೂಟರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 32MP ಸೆಲ್ಫಿ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಇದಲ್ಲದೆ ಡಿವೈಸ್‌ನಲ್ಲಿ ಕ್ಯಾಮೆರಾಗಳನ್ನು ZEISS ನಿಂದ ಟ್ಯೂನ್ ಮಾಡಲಾಗಿದೆ. ಜೊತೆಗೆ ಈ ಫೋನ್ OIS, 8K ವೀಡಿಯೊ ರೆಕಾರ್ಡಿಂಗ್, HDR10+ ಶೂಟಿಂಗ್ ಸೇರಿದಂತೆ ಇತರೆ ಸಾಮರ್ಥ್ಯ ಹೊಂದಿದೆ.

ಶಿಯೋಮಿ 13 ಪ್ರೊ: ಈ ಸ್ಮಾರ್ಟ್‌ಫೋನ್ (Xiaomi 13 Pro) ಟ್ರಿಪಲ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ 1 ಇಂಚಿನ ಸೋನಿ IMX989 ಸೆನ್ಸರ್ ಈ ಫೋನ್‌ನಲ್ಲಿದೆ. ಪ್ರತಿ ಸೆನ್ಸರ್ 50 ಮೆಗಾಪಿಕ್ಸೆಲ್ ಹೊಂದಿದ್ದು, ಅತ್ಯುತ್ತಮ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಡ್ಯುಯಲ್-ಕಲರ್ ಎಲ್ಇಡಿ ಫ್ಲ್ಯಾಶ್ ಆಯ್ಕೆ ಇದ್ದು, ಈ ಮೂಲಕ ರೋಮಾಂಚನಕಾರಿ ಚಿತ್ರಗಳನ್ನು ಪಡೆಯಬಹುದಾಗಿದೆ.


Click it and Unblock the Notifications








