Home
ಸುದ್ದಿಜಾಲ

ಈ ವರ್ಷ ಖರೀದಿ ಮಾಡಬಹುದಾದ 25,000 ರೂ.ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು! ಭರ್ಜರಿ ಫೀಚರ್ಸ್‌

ಸ್ಮಾರ್ಟ್‌ಫೋನ್‌ಗಳು (Smartphones) ವಿವಿಧ ರೀತಿಯಲ್ಲಿ ಹೆಸರುವಾಸಿಯಾಗಿವೆ. ಅಂದರೆ ಕೆಲವರು ಫೋಟೋಗಾಗಿ ಫೋನ್‌ ಖರೀದಿ ಮಾಡಿದ್ರೆ ಇನ್ನೂ ಕೆಲವರು ಕಾರ್ಯಕ್ಷಮತೆ ನೋಡಿ ಫೋನ್‌ ಖರೀದಿ ಮಾಡುತ್ತಾರೆ. ಅದಾಗ್ಯೂ ವಿಶೇಷ ಕ್ಯಾಮೆರಾ ಫೀಚರ್ಸ್‌ ಇರುವ ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದೆ.

ಹೌದು, ಕ್ಯಾಮೆರಾ ಆಯ್ಕೆಯ ಫೋನ್‌ಗಳು (camera phones) ಎಂದೆಂದಿಗೂ ಬೇಡಿಕೆ ಹೊಂದಿದ್ದು, ಇವು ಬಳಕೆದಾರರನ್ನು ಹೆಚ್ಚು ಹೆಚ್ಚಾಗಿ ತನ್ನತ್ತ ಸೆಳೆಯುತ್ತವೆ. ಅದರಂತೆ ಟೆಕ್ನೋ ಕ್ಯಾಮನ್‌ 30, ರಿಯಲ್‌ಮಿ 12 ಪ್ರೊ, ಒನ್‌ಪ್ಲಸ್‌ ನಾರ್ಡ್‌ CE 4 ಸೇರಿದಂತೆ ಅನೇಕ ಫೋನ್‌ಗಳನ್ನು ಕಾಣಬಹುದಾಗಿದೆ. ಹಾಗಿದ್ರೆ ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಈ ವರ್ಷ ಖರೀದಿ ಮಾಡಬಹುದಾದ 25,000 ರೂ.ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ಟೆಕ್ನೋ ಕ್ಯಾಮನ್ 30: 8GB RAM/256GB ಸ್ಟೋರೇಜ್ ವೇರಿಯಂಟ್‌ನ ಈ ಫೋನ್‌ಗೆ (Tecno Camon 30) 22,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ 120Hz ರಿಫ್ರೆಶ್ ದರ ಮತ್ತು 1080 x 2436 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ LTPS ಅಮೋಲೆಡ್‌ ಡಿಸ್ಪ್ಲೇಯನ್ನು ಹೊಂದಿದ್ದು, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌, 2160Hz PWM ಮಬ್ಬಾಗಿಸುವಿಕೆ ಮತ್ತು 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು ಓಐಎಸ್‌ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸರ್‌ ಆಯ್ಕೆ ಪಡೆದಿದೆ. ಇದರ ಜೊತೆಗೆ f/2.45 ದ್ಯುತಿರಂಧ್ರದೊಂದಿಗೆ 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಒನ್‌ಪ್ಲಸ್‌ ನಾರ್ಡ್‌ CE 4: ಈ ಸ್ಮಾರ್ಟ್‌ಫೋನ್‌ನ (OnePlus Nord CE 4) 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 24,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 6.7 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ 2412 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ವರೆಗೆ ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 210Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಆಯ್ಕೆ ಪಡೆದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 8 ಮೆಗಾಪಿಕ್ಸೆಲ್‌ ಸೋನಿ IMX355 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗೆ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ ಸೋನಿ LYT600 ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ನೋಡಬಹುದಾಗಿದೆ.

ಈ ವರ್ಷ ಖರೀದಿ ಮಾಡಬಹುದಾದ 25,000 ರೂ.ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ನಥಿಂಗ್ ಫೋನ್ (2a): ಈ ಫೋನ್‌ನ (Nothing Phone 2a) 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 23,999 ರೂ.ಗಳ ಬೆಲೆ ಇದೆ. ಈ ಫೋನ್ 1080x2412 (FHD+) ರೆಸಲ್ಯೂಶನ್, 30-120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, ಮತ್ತು 10-ಬಿಟ್ ಡೆಪ್ತ್ ಜೊತೆಗೆ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಎರಡು ಹೆಚ್‌ಡಿ ಮೈಕ್ರೋಫೋನ್‌ಗಳನ್ನು ಹೊಂದಿದ್ದು, 50 ಮೆಗಾಪಿಕ್ಸೆಲ್‌+ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಹಾಗೂ ಸೆಲ್ಫಿ ಮತ್ತು ವಿಡಿಯೋ ಕರೆ ಸಂಬಂಧಿತ ಅಗತ್ಯತೆಗಳನ್ನು ನಿರ್ವಹಿಸಲು 32 ಮೆಗಾಪಿಕ್ಸೆಲ್‌ ಸೆನ್ಸರ್‌ ಅನ್ನು ಹೊಂದಿದೆ.

ರಿಯಲ್‌ಮಿ 12 ಪ್ರೊ: ಈ ಸ್ಮಾರ್ಟ್‌ಫೋನ್‌ನ (Realme 12 Pro) 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 22,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 2412 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ FHD+ OLED ಕರ್ವ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಗೆ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್‌ ಸೋನಿ IMX 882 ಲೆನ್ಸ್‌ನೊಂದಿಗೆ ಬಂದಿದ್ದು, ಟೆಲಿಫೋಟೋ ಲೆನ್ಸ್ OIS, 2x ಆಪ್ಟಿಕಲ್ ಜೂಮ್ ಮತ್ತು 4x ಡಿಜಿಟಲ್ ಜೂಮ್‌ಗೆ ಬೆಂಬಲದೊಂದಿಗೆ 32 ಮೆಗಾಪಿಕ್ಸೆಲ್‌ ಸೋನಿ IMX 709 ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್‌ f/2.2 ಲೆನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಈ ವರ್ಷ ಖರೀದಿ ಮಾಡಬಹುದಾದ 25,000 ರೂ.ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳಿವು!

ರೆಡ್ಮಿ ನೋಟ್‌ 13 ಪ್ರೊ: ಈ ಸ್ಮಾರ್ಟ್‌ಫೋನ್‌ನ (Redmi Note 13 Pro) 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 22,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ ಈ ಫೋನ್ 6.67 ಇಂಚಿನ ಕರ್ವ್ಡ್ ಅಮೋಲೆಡ್‌ ಡಿಸ್ಪ್ಲೇ ಜೊತೆಗೆ 1.5K ರೆಸಲ್ಯೂಶನ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ಪಡೆದುಕೊಂಡಿದೆ. ಮಿಡ್-ರೇಂಜರ್ ಓಐಎಸ್‌ ಜೊತೆಗೆ 200 ಮೆಗಾಪಿಕ್ಸೆಲ್‌ ಪ್ರಾಥಮಿಕ ಸೆನ್ಸರ್‌, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಶೂಟರ್ ಸೇರಿದಂತೆ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ.

Best Mobiles in India

English summary
In this year's category of best camera Smartphones under Rs 25,000, various phones can be found, Tecno Camon 30, Realme 12 Pro, OnePlus Nord CE 4, Nothing Phone (2a), Redmi Note 13 Pro are prominent phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+