Home
ಸುದ್ದಿಜಾಲ

Smartphones: ಹಬ್ಬದ ವಿಶೇಷ ಸೇಲ್‌ನಲ್ಲಿ ಭಾರತದಲ್ಲಿ ಹೆಚ್ಚು ಸೇಲ್‌ ಸ್ಮಾರ್ಟ್‌ಫೋನ್‌ಗಳಿವು! ಅಗ್ರ ಸ್ಥಾನದಲ್ಲಿ ಐಫೋನ್‌

ಸ್ಮಾರ್ಟ್‌ಫೋನ್‌ (Smartphones) ಸೇರಿದಂತೆ ಯಾವುದೇ ಡಿವೈಸ್‌ ಅನ್ನು ಖರೀದಿ ಮಾಡಲು ಭಾರತದಲ್ಲಿನ ಹಲವಾರು ಗ್ರಾಹಕರು ಉತ್ತಮ ಸಮಯಕ್ಕಾಗಿ ಕಾಯುತ್ತಾರೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಸ್ಮಾರ್ಟ್‌ಡಿವೈಸ್‌ಗಳನ್ನು ಖರೀದಿ ಮಾಡುವುದು ಹೆಚ್ಚು, ಈ ನಡುವೆ ಹಬ್ಬದ ಸಮಯದಲ್ಲಿ ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಅದರಲ್ಲೂ ಐಫೋನ್‌ ಸೇಲ್‌ ಆಗಿವೆ.

ಹೌದು, ಭಾರತದ ಹಬ್ಬದ ಋತುವಿನ ಮೊದಲ ವಾರದಲ್ಲೇ ಐಫೋನ್ ಮಾರಾಟವು ದಾಖಲೆ ಬರೆದಿದೆ. ಈ ಮೂಲಕ ಕಂಪೆನಿ ಹೆಚ್ಚಿನ ಲಾಭಗಳಿಸಿದೆ. ಇನ್ನು ಅಪಲ್‌ (Apple) ಡಿವೈಸ್‌ ಅಷ್ಟೇ ಅಲ್ಲದೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌(Android smartphone) ಅನ್ನೂ ಸಹ ದಾಖಲೆ ಮಟ್ಟದಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಭಾರತದಲ್ಲಿ ಸೇಲ್ ಆದ ಫೋನ್‌ಗಳೆಷ್ಟು?, ಯಾವೆಲ್ಲಾ ಫೋನ್‌ಗಳು ಹೆಚ್ಚು ಬೇಡಿಕೆ ಹೊಂದಿದ್ದವು ಎಂಬ ಮಾಹಿತಿ ಇಲ್ಲಿದೆ ನೋಡಿ.

ಹಬ್ಬದ ವಿಶೇಷ ಸೇಲ್‌ನಲ್ಲಿ ಭಾರತದಲ್ಲಿ ಹೆಚ್ಚು ಸೇಲ್‌ ಸ್ಮಾರ್ಟ್‌ಫೋನ್‌ಗಳಿವು!...

ಹೆಚ್ಚಿಗೆ ಸೇಲ್‌ ಆದ ಐಫೋನ್: ಐಫೋನ್ (iPhone) ಸೇಲ್‌ನಲ್ಲಿ ಆಪಲ್‌ ದಾಖಲೆ ಬರೆದಿದೆ. ಅಂದರೆ ಭಾರತದಲ್ಲಿನ ಹಬ್ಬದ ಮಾರಾಟದ ಮೊದಲ ವಾರದಲ್ಲೇ 1.5 ಮಿಲಿಯನ್ ಯುನಿಟ್‌ಗಳನ್ನು ದಾಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಮೂಲಕ ಸಾಮಾನ್ಯ ಸೇಲ್‌ಗಿಂತ ಶೇಕಡಾ 25 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಆಪಲ್‌ ವರದಿ ಮಾಡಿದೆ.

ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ ಹಬ್ಬದ ಋತುವಿನ ಸ್ಮಾರ್ಟ್‌ಫೋನ್ ಸೇಲ್‌ ಸ್ಯಾಮ್‌ಸಂಗ್‌ಗೂ ಸಹ ಬಲವಾದ ಬೇಡಿಕೆ ಉಂಟು ಮಾಡಿದೆ. ಮೊದಲ ವಾರದಲ್ಲೇ ಅಂದರೆ ಅಕ್ಟೋಬರ್ 8-15 ರವರೆಗೆ ಶೇಕಡಾ 25 ರಷ್ಟು ಹೆಚ್ಚಾಗಿದೆ ಎಂದು ಉಲ್ಲೇಖಿಸಿದೆ. ಇದರೊಂದಿಗೆ ವರ್ಷವಿಡೀ ನಿಧಾನಗತಿಯ ಬೇಡಿಕೆಯನ್ನು ಎದುರಿಸಿದ್ದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ನಿರೀಕ್ಷೆಗಿಂತ ದೊಡ್ಡ ಏರಿಕೆಯನ್ನು ಈ ವೇಳೆ ದಾಖಲಿಸಿವೆ. ಮೊದಲ 48 ಗಂಟೆಗಳಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ ಸುಮಾರು 80 ಪ್ರತಿಶತ ಫೋನ್‌ಗಳು ಮಾರಾಟ ಆಗಿವೆ.

ಫ್ಲಿಪ್‌ಕಾರ್ಟ್ ಪ್ರೀಮಿಯಂ (Flipkart Premium) ವಿಭಾಗದ ಬೆಳವಣಿಗೆಯು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಿದೆ. ಅದರಲ್ಲೂ ಐಫೋನ್ 14 ಮತ್ತು ಗ್ಯಾಲಕ್ಸಿ S21 FE (iPhone 14 and Galaxy S21 FE) ಫೋನ್‌ಗಳು ಹೆಚ್ಚು ಸೇಲ್‌ ಆಗಿವೆ. ಇದರೊಂದಿಗೆ ಅಮೆಜಾನ್ ಸುಮಾರು 200 ಪ್ರತಿಶತದಷ್ಟು ಹೆಚ್ಚಿನ ಬೆಳವಣಿಗೆ ವರದಿ ಮಾಡಿದೆ. ಇದರಲ್ಲಿ ಐಫೋನ್ 13 ಮತ್ತು ಗ್ಯಾಲಕ್ಸಿ S23 FE (iPhone 13 and Galaxy S23 FE) ಫೋನ್‌ಗಳು ಹೆಚ್ಚು ಸೇಲ್‌ ಆಗಿವೆ. ಜೊತೆಗೆ ಎಲ್ಲಾ ಪ್ಲಾಟ್‌ಫಾರ್ಮ್‌ನಲ್ಲೂ ಐಫೋನ್‌ 14, 13 ಮತ್ತು 12 ಗಳು ಹೆಚ್ಚಿನ ಬೇಡಿಕೆ ಕಂಡಿವೆ.

ಇದರೊಂದಿಗೆ ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy S21 FE) ಸಹ ಹೆಚ್ಚಾಗಿ ಸೇಲ್‌ ಆಗಿದ್ದು, ಬಲವಾದ ಮಾರಾಟಕ್ಕೆ ಸಾಕ್ಷಿಯಾಗಿದೆ. ಹಬ್ಬದ ಸೀಸನ್‌ಗೆ ಮುಂಚಿತವಾಗಿ ಪ್ರಮುಖ ಕಂಪೆನಿಗಳು ಅನೇಕ ಡಿವೈಸ್‌ಗಳನ್ನು ಲಾಂಚ್‌ ಮಾಡಿದ್ದರಿಂದ 10,000 ರೂ. ಗಳಿಂದ 15,000 ರೂ.ಗಳ ಬೆಲೆ ವಿಭಾಗದಲ್ಲಿನ ಫೋನ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತಂತೆ. ಪ್ರಮುಖವಾಗಿ 5G ಡಿವೈಸ್‌ಗಳನ್ನು ಜನರು ಕಿಕ್ಕಿರಿದು ಖರೀದಿ ಮಾಡಿದ್ದಾರೆ.

ಹಾಗೆಯೇ ಈ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೋ 60x 5G, ಗ್ಯಾಲಕ್ಸಿ M14 5G ಮತ್ತು M34 5G (Realme Narzo 60x 5G, Galaxy M14 5G and M34 5G) ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ನಲ್ಲಿ ಹೆಚ್ಚಿನ ಬೇಡಿಕೆ ಕಂಡಿವೆ. ಈ ಮೂಲಕ ಇವು ಹೆಚ್ಚಾಗಿ ಸೇಲ್‌ ಆದ ಆಂಡ್ರಾಯ್ಡ್‌ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಇದರೊಂದಿಗೆ ವಿವೋ T2x (Vivo T2x) ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚು ಸೇಲ್‌ಆದ ಫೋನ್‌ಗಳ ಟಾಪ್‌ ಲಿಸ್ಟ್‌ನಲ್ಲಿದೆ.

ಹಬ್ಬದ ವಿಶೇಷ ಸೇಲ್‌ನಲ್ಲಿ ಭಾರತದಲ್ಲಿ ಹೆಚ್ಚು ಸೇಲ್‌ ಸ್ಮಾರ್ಟ್‌ಫೋನ್‌ಗಳಿವು!...

ಉಳಿದಂತೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ಇಎಮ್‌ಐ ಸೇರಿದಂತೆ ಖರೀದಿಗೆ ಯೋಗ್ಯವಾದ ಆಫರ್ ಅನ್ನು ಘೋಷಣೆ ಮಾಡಿದ್ದರಿಂದ ಮೊದಲ ವಾರದ ಬಳಿಕವೂ ಪ್ರೀಮಿಯಂ ಡಿವೈಸ್‌ಗಳಿಗೆ ದೊಡ್ಡ ಮಟ್ಟದಲ್ಲೇ ಬೇಡಿಕೆ ಇದೆಯಂತೆ. ಅಷ್ಟೇ ಅಲ್ಲದೆ ಗ್ರಾಹಕರು ಆನ್‌ಲೈನ್‌ ಹಾಗೂ ಆಫ್‌ಲೈನ್‌ಗೆ ತಾಳೆ ಹಾಕಿ ನೋಡಿದ್ದು, ಹೆಚ್ಚಿನ ಡಿಸ್ಕೌಂಟ್‌ ಆನ್‌ಲೈನ್‌ನಲ್ಲೇ ಲಭ್ಯ ಆಗಿದ್ದರಿಂದ ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ಮುತ್ತಿಗೆ ಹಾಕುತ್ತಿದ್ದಾರೆ.

Best Mobiles in India

English summary
iPhone sales hit a record in the first week of India's festive season. It is known that not only Apple devices but also Android smartphones have been purchased at a record level.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+