Home
ಸುದ್ದಿಜಾಲ

ಈ ವಾರ ಲಾಂಚ್‌ ಆಗಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು: ಖರೀದಿಗೆ ಹಲವು ಆಯ್ಕೆ!

ವಿವಿಧ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ಸುಧಾರಿತ ಫೀಚರ್ಸ್‌ ಇರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಈ ವಾರ ಅನಾವರಣ ಮಾಡಿದ್ದು, ಲಾಂಚ್‌ ಆಗಿರುವ ಪ್ರತಿ ಫೋನ್‌ಗಳು ಸಹ ಒಂದಕ್ಕೊಂದು ಪ್ರತಿಸ್ಪರ್ಧಿಯಂತೆ ಕಾಣಿಸುತ್ತಿವೆ. ಯಾಕೆಂದರೆ ಈ ಎಲ್ಲಾ ಫೋನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆ ಜೊತೆಗೆ ಆಕರ್ಷಕ ವಿನ್ಯಾಸವನ್ನೂ ಹೊಂದಿವೆ.

ಹೌದು, ಈ ವಾರದಲ್ಲಿ ಗೂಗಲ್‌, ಪೊಕೊ, ರಿಯಲ್‌ಮಿ, ರೆಡ್ಮಿ ಸೇರಿದಂತೆ ವಿವಿಧ ಕಂಪೆನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದ್ದು, ಈ ಫೋನ್‌ಗಳು ಬಜೆಟ್‌ ಬೆಲೆಯಿಂದ ದುಬಾರಿ ಬೆಲೆವರೆಗೂ ಲಭ್ಯ ಇವೆ. ಅದರಲ್ಲೂ ಈ ವಾರ ಲಾಂಚ್‌ ಆಗಿರುವ ಗೂಗಲ್ ಪಿಕ್ಸೆಲ್ ಫೋನ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಿದ್ರೆ, ಈ ವಾರ ಯಾವೆಲ್ಲಾ ಫೋನ್‌ಗಳು ಲಾಂಚ್‌ ಆಗಿವೆ, ಅವುಗಳ ಪ್ರಮುಖ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಓದಿರಿ.

ಈ ವಾರ ಲಾಂಚ್‌ ಆಗಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು: ಖರೀದಿಗೆ ಹಲವು ಆಯ್ಕೆ!

ಗೂಗಲ್‌ ಪಿಕ್ಸೆಲ್‌ 7a: ಈ ಫೋನ 90Hz ರಿಫ್ರೆಶ್ ರೇಟ್‌ನೊಂದಿಗೆ 6.1 ಇಂಚಿನ ಫುಲ್‌ಹೆಚ್‌ಡಿ+OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಟೈಟಾನ್ M2 ಚಿಪ್‌ ಆಯ್ಕೆ ಜೊತೆಗೆ ಟೆನ್ಸರ್ G2 ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇನ್ನು ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 64ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಹಾಗೂ 13ಮೆಗಾಪಿಕ್ಸೆಲ್‌ ಸೆಕೆಂಡರಿ ಕ್ಯಾಮೆರಾ ಇದೆ. ಹಾಗೆಯೇ ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನ್‌ ಬೆಲೆ 43,999ರೂ.ಗಳು.

ಪೊಕೊ F5: ಈ ಫೋನ್ 6.7ಇಂಚಿನ DHS+ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು,120Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್7+ಜನ್2 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 8GB/128GB ಹಾಗೂ 12GB/256GB ಇಂಟರ್‌ ಸ್ಟೋರೇಜ್‌ ಆಯ್ಕೆ ಹೊಂದಿದೆ. ಹಾಗೂ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯಲ್ಲಿ 64MP+8MP+2MP ಆಯ್ಕೆ ಇದ್ದರೆ ಸೆಲ್ಫಿಗಾಗಿ 16MPಕ್ಯಾಮೆರಾ ಸೆನ್ಸರ್‌ ನೀಡಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯೊಂದಿಗೆ 67Wಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಇದರ ಆರಂಭಿಕ ಬೆಲೆ 29,999ರೂ.ಗಳಾಗಿದೆ.

ಪೊಕೊ F5 ಪ್ರೊ: ಈ ಫೋನ್ 6.67 ಇಂಚಿನ WQHD+ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು ಡಾಲ್ಬಿ ವಿಷನ್ ಫೀಚರ್ಸ್‌ ಪಡೆದುಕೊಂಡಿದೆ. ಇನ್ನು ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 8+ಜನ್1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, 8GB/256GB,12GB/256GB,12GB/512GBನ ಮೂರು ವೇರಿಯಂಟ್‌ನಲ್ಲಿ ಲಭ್ಯ. ಜೊತೆಗೆ 64MP+8MP+2MP ಟ್ರಿಪಲ್‌ ರಿಯರ್‌ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನ್‌ ಆರಂಭಿಕ ಬೆಲೆ 36,900ರೂ.ಗಳಾಗಿದೆ.

ಈ ವಾರ ಲಾಂಚ್‌ ಆಗಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು: ಖರೀದಿಗೆ ಹಲವು ಆಯ್ಕೆ!

ರಿಯಲ್‌ಮಿ 11: ಈ ಫೋನ್ 6.43 ಇಂಚಿನ FHD+ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ.ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಜೊತೆಗೆ 64MP+2MPಡ್ಯುಯಲ್ ರಿಯರ್‌ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.ಈ ಫೋನ್‌ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಇದರ ಆರಂಭಿಕ ಬೆಲೆ 19,000ರೂ.ಗಳು

ರಿಯಲ್‌ಮಿ 11 ಪ್ರೊ:ಈ ಫೋನ್‌ 6.7ಇಂಚಿನ FHD+ಅಮೋಲೆಡ್‌ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ ಬಲ ಹೊಂದಿದೆ. ಹಾಗೆಯೇ 8GB/256GB,12GB/256GB ವೇರಿಯಂಟ್‌ನಲ್ಲಿ ಲಭ್ಯ. ಇದರೊಂದಿಗೆ 108MP+2MPರಿಯರ್‌ ಕ್ಯಾಮೆರಾ ಹಾಗೂ 16MPಸೆಲ್ಫಿ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇನ್ನುಳಿದಂತೆ 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 67Wಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದರಲ್ಲಿದೆ. ಈ ಫೋನ್‌ ಅನ್ನು ನೀವು 21,300ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದು.

ರಿಯಲ್‌ಮಿ 11 ಪ್ರೊ+: ರಿಯಲ್‌ಮಿಯ ಈ ವಿಶೇಷ ಫೋನ್ 6.7 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಬಲ ಹೊಂದಿದ್ದು, 12GB/256GB, 12GB/512GB ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು 200MP+8MP+2MP ರಿಯರ್‌ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಸೆನ್ಸರ್‌ ಹೊಂದಿದ್ದು, 5000mAh ಬ್ಯಾಟರಿ ಜೊತೆಗೆ 100W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರ ಸಾಮಾನ್ಯ ದರ 24,900ರೂ.ಗಳು.

ಈ ವಾರ ಲಾಂಚ್‌ ಆಗಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು: ಖರೀದಿಗೆ ಹಲವು ಆಯ್ಕೆ!

ಗೂಗಲ್ ಪಿಕ್ಸೆಲ್ ಫೋಲ್ಡ್: ಗೂಗಲ್‌ ಇದೇ ಮೊದಲ ಬಾರಿಗೆ ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ ಅನಾವರಣ ಮಾಡಿದ್ದು, ಈ ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ 5.8ಇಂಚಿನ OLED ಕವರ್ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್‌ನೊಂದಿಗೆ7.6 ಇಂಚಿನ ಪ್ರಾಥಮಿಕ OLEDಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಫೋನ್ ಟೆನ್ಸರ್ G2 ಚಿಪ್ ನಲ್ಲಿ ಕಾರ್ಯನಿರ್ವಹಿಸಲಿದ್ದು,48MP+10.8MP+10.8MP ರಿಯರ್‌ ಕ್ಯಾಮೆರಾ ಹಾಗೂ8.3MP ಸೆಲ್ಫಿ ಕ್ಯಾಮೆರಾ ರಚನೆ ಇದರಲ್ಲಿದೆ. ಅದರಂತೆ ಈ ಫೋನ್ 1,47,000ರೂ.ಗಳ ಬೆಲೆ ಹೊಂದಿದೆ.

ರೆಡ್ಮಿ ನೋಟ್‌ 12S: ಈ ಫೋನ್ 6.43 ಇಂಚಿನ ಪೂರ್ಣ HD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇನ್ನುಳಿದಂತೆ ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ ಬಲ ಪಡೆದಿದ್ದು, 8GB/256GB ವೇರಿಯಂಟ್‌ನಲ್ಲಿ ಲಭ್ಯ. 108MP+8MP+2MP ರಿಯರ್‌ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ರಚನೆ ಇದರಲ್ಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರೊಂದಿಗೆ 29,500ರೂ. ಗಳ ಬೆಲೆ ಹೊಂದಿದೆ.

Best Mobiles in India

English summary
This week, various companies including Google, Poco, Realme, Redmi have launched new smartphones, these phones are available from budget to expensive prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+