Home
ಸುದ್ದಿಜಾಲ

smartphones: ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು! ಫೀಚರ್ಸ್‌ ಏನಿವೆ? ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳ (smartphones) ವಿಷಯಕ್ಕೆ ಬಂದರೆ ನಿಮ್ಮ ಕಣ್ಣ ಮುಂದೆ ನೂರಾರು ಸ್ಮಾರ್ಟ್‌ಫೋನ್‌ಗಳು ಕಾಣಿಸಬಹುದು. ಯಾಕೆಂದರೆ ಪ್ರಮುಖ ಕಂಪೆನಿಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇವೆ. ಅದರಂತೆ ಈ ವರ್ಷದ ಅಂತ್ಯದಲ್ಲಿ ನಾವಿದ್ದು, ಈ ನಡುವೆ ಈ ವರ್ಷ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಸಹ ಲಾಂಚ್‌ ಆಗಿವೆ.

ಹೌದು, 2023 ರಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗಿದ್ದು, ಇವು ವಿಶೇಷ ಫೀಚರ್ಸ್‌ ಮೂಲಕ ಗ್ರಾಹಕರನ್ನು ಆಕರ್ಷಿಸಿವೆ. ಅದರಂತೆ ನೀವೇನಾದರೂ ಈ ವರ್ಷದ ಲಾಂಚ್‌ ಆದ ಅತ್ಯುತ್ತಮ ಫೋನ್ ಖರೀದಿ ಮಾಡಲು ಇಚ್ಚಿಸಿದರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ರಮುಖ ಫೋನ್‌ಗಳನ್ನು ಅನಾವರಣ ಮಾಡಲಾಗಿದೆ?, ಈ ಫೋನ್‌ಗಳ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ತಿಳಿಯೋಣ.

ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಶಿಯೋಮಿ ರೆಡ್ಮಿ A2 : ಈ ಫೋನ್‌ (Xiaomi Redmi A2) ಕೇವಲ ಬಜೆಟ್‌ ಫೋನ್‌ ಆಗಿ ಮಾತ್ರ ಗುರುತಿಸಿಕೊಳ್ಳದೆ ಅತ್ಯುತ್ತಮ ಫೀಚರ್ಸ್‌ ಮೂಲಕವೂ ಜನಪ್ರಿಯವಾಗಿದೆ. ಈ ಸ್ಮಾರ್ಟ್‌ಫೋನ್ ಕೇವಲ 5,499 ರೂಗಳ ಚೌಕಾಶಿ ಬೆಲೆಗೆ ಲಭ್ಯ ಇದ್ದು, 6.52 ಇಂಚಿನ IPS LCD LCD ಡಿಸ್‌ಪ್ಲೆ ಹಾಗೂ ಎರಡು ವರ್ಷಗಳ ನಿಯಮಿತ ಸಾಫ್ಟ್‌ವೇರ್ ನವೀಕರಣ, 5,000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಉತ್ತಮ ಎನಿಸಿದೆ.

ನೋಕಿಯಾ G42 5G: ಈ ಸ್ಮಾರ್ಟ್‌ಫೋನ್ (Nokia G42 5G) ಬಜೆಟ್ ಕ್ಷೇತ್ರದಲ್ಲಿ ಉತ್ತಮ ಫೋನ್‌ ಆಗಿದೆ. ಇದನ್ನು ನೀವು ಕೇವಲ 12,599ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ HD+ ನ 6.56 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 50 MP ಮುಖ್ಯ + 2 MP ಡೀಪ್‌ + 2 MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಪ್ಯಾಕ್‌ ಆಗಿದೆ. ಜೊತೆಗೆ ಸ್ನಾಪ್‌ಡ್ರಾಗನ್ 480+ 5G ಪ್ರೊಸೆಸರ್‌ ಬಲ ಮತ್ತು ಅಡ್ರಿನೊ 619 GPU ಶಕ್ತಿ ಹೊಂದಿದೆ.

ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಒನ್‌ಪ್ಲಸ್ ನಾರ್ಡ್‌ CE 3 ಲೈಟ್‌ 5G: ಈ ಸ್ಮಾರ್ಟ್‌ಫೋನ್ (OnePlus Nord CE 3 Lite 5G) ಗೆ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು 6.72 ಇಂಚಿನ LCD, ಡಿಸ್‌ಪ್ಲೇ ಹೊಂದಿದ್ದು, 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್‌ ರೇಟ್ ಹಾಗೂ 240Hz ಟಚ್ ಸ್ಯಾಂಪಲಿಂಗ್‌ ರೇಟ್‌ ಆಯ್ಕೆಯೊಂದಿಗೆ 108MP ಮುಖ್ಯ, 2MP ಡೀಪ್‌, 2MP ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದಿದೆ.

ಮೊಟೊರೊಲಾ ಎಡ್ಜ್ 40: ಈ ಸ್ಮಾರ್ಟ್‌ಫೋನ್ (Motorola Edge 40) ಅನ್ನು 26,499 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್ ಹೊಂದಿದ್ದು, 144Hz ರಿಫ್ರೆಶ್ ರೇಟ್‌ನೊಂದಿಗೆ ತೀಕ್ಷ್ಣವಾದ ಪೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 50 MP ಮುಖ್ಯ ಕ್ಯಾಮೆರಾ ಮತ್ತು ವೇಗದ 68W ಚಾರ್ಜಿಂಗ್‌ನೊಂದಿಗೆ 4,400 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೋಡಬಹುದು.

ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22: ಫ್ಲ್ಯಾಗ್‌ಶಿಪ್‌ ಫೋನ್‌ಗಳಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇರುವ ಫೋನ್ ಇದಾಗಿದೆ. ಇದನ್ನು ನೀವು 39,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಜನ್ 1 ನೊಂದಿಗೆ ಕಾರ್ಯನಿರ್ವಹಿಸಲಿದ್ದು, 3,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದು 25W ಚಾರ್ಜಿಂಗ್ ಬೆಂಬಲ ಪಡೆದಿದೆ. ಹಾಗೆಯೇ 50 MP ಡೀಪ್‌, 10 MP ಟೆಲಿಫೋಟೋ, 12 MP ಅಲ್ಟ್ರಾವೈಡ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದ್ದು, ಅತ್ಯುತ್ತಮ ಫೋನ್ ಎನಿಸಿಕೊಂಡಿದೆ.

ಒನ್‌ಪ್ಲಸ್‌ 11 : ಈ ಸ್ಮಾರ್ಟ್‌ಫೋನ್‌ (OnePlus 11) ಅತ್ಯುತ್ತಮ ವಿನ್ಯಾಸ, ಅದ್ಭುತ ಕಾರ್ಯಕ್ಷಮತೆ ಮತ್ತು ಹೆಚ್ಚು ಸುಧಾರಿತ ಕ್ಯಾಮೆರಾಗಳಿಗೆ ಹೆಸರುವಾಸಿಯಾಗಿದೆ. ಇದನ್ನು ನೀವು 54,999 ಗಳಿಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಗ್ಯಾಲಕ್ಸಿ S22+ ಗೆ ಅತ್ಯುತ್ತಮವಾದ ಪರ್ಯಾಯ ಫೋನ್‌ ಸಹ ಆಗಿದೆ. ಈ ಫೋನ್ 120Hz ರಿಫ್ರೆಶ್‌ ರೇಟ್‌ ಆಯ್ಕೆಯೊಂದಿಗೆ ಅಮೋಲೆಡ್‌ ಡಿಸ್ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ಈ ಫೋನ್‌ನಲ್ಲಿ ಕಾಣಬಹುದು.

ನೀವು ಖರೀದಿ ಮಾಡಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!

ಆಪಲ್‌ ಐಫೋನ್ 15 : ಈ ಫೋನ್‌ (Apple iPhone 15) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಐಫೋನ್‌ಗಳು ನೀಡುವ ಪ್ರೀಮಿಯಂ ಅನುಭವದ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ಅದರಂತೆ ಐಫೋನ್ 15 ಆ ಬಲವಾದ ಅಡಿಪಾಯಗಳ ಮೇಲೆ ನಿರ್ಮಾಣ ಆಗಿದ್ದು, ಇದೀಗ ಡೈನಾಮಿಕ್ ಐಲ್ಯಾಂಡ್ ಅನ್ನು ಸಹ ಹೊಂದಿದೆ. ಜೊತೆಗೆ 48MP ಮುಖ್ಯ ಸೆನ್ಸರ್‌ 12 MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ 12 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

Best Mobiles in India

English summary
A lot of smartphones have been launched this year and here is a list of some of them ranging from budget to expensive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+