ಈ ಐದು ಸ್ಮಾರ್ಟ್‌ಫೋನ್‌ಗಳಿಂದ ನಿಮ್ಮ ಹೋಳಿ ಸಂಭ್ರಮ ಇನ್ನಷ್ಟು ರಂಗು: ಅದೇಗೆ ಅಂತೀರಾ?
ಭಾರತೀಯ ಹಬ್ಬಗಳಿಗೂ ತಂತ್ರಜ್ಞಾನಕ್ಕೂ ಇತ್ತೀಚೆಗೆ ಸಂಬಂಧಗಳು ಹೆಚ್ಚಾಗುತ್ತಿದೆ. ಯಾಕೆಂದರೆ ಯಾವುದೇ ಸಂಭ್ರಮದಲ್ಲೂ ಭಾರತೀಯರು ಏನಾದರೂ ಗ್ಯಾಜೆಟ್ ಗಳನ್ನು ಖರೀದಿ ಮಾಡುತ್ತಾರೆ. ಹಾಗೆಯೇ ಹಲವಾರು ಗ್ಯಾಜೆಟ್‌ಗಳು ಹಬ್ಬದ ಆಚರಣೆಯಲ್ಲಿ ಜೊತೆಯಾಗುತ್ತದೆ. ಅದರಂತೆ ಈ ಐದು ಫೋನ್‌ಗಳು ರಂಗಿನ ಹಬ್ಬದಲ್ಲಿ ಸಂಭ್ರಮ ಹೆಚ್ಚಿಗೆ ಮಾಡಲಿವೆ.
ಹೌದು, ಸ್ಮಾರ್ಟ್‌ಫೋನ್ ವಲಯದಲ್ಲಿ ಈಗಾಗಲೇ ವಿವಿಧ ರೀತಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಭಾರತೀಯರು ಹಬ್ಬ ಎಂದರೆ ಸಾಕು ತಮ್ಮಿಷ್ಟದ ಬಟ್ಟೆ ಧರಿಸಿ ಫೋಟೋಗೆ ಫೋಸ್ ನೀಡಲು ಜನರು ಕಾತುರರಾಗುತ್ತಾರೆ. ಈ ನಡುವೆ ಹೋಳಿ ಹಬ್ಬದ ಸಂಭ್ರಮ ಈಗಾಗಲೇ ಮನೆಮಾಡಿದ್ದು, ಆ ವೇಳೆ ಬಣ್ಣದ ನೀರನ್ನು ಪರಸ್ಪರ ಎರಚುವುದು ಸಂಪ್ರದಾಯ.

ವಾಟರ್ ರೆಸಿಸ್ಟೆಂಟ್ ಇರುವ ಫೋನ್‌ಗಳೇ ಬೆಸ್ಟ್ !
ಇತ್ತೀಚೆಗೆ ವಾಟರ್, ಡಸ್ಟ್, ಕಲೆ ಇತ್ಯಾದಿ ನಿರೋಧಕ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿದ್ದು, ಇವುಗಳಿಗೆ ಬೇಡಿಕೆ ಹೆಚ್ಚಿದೆ. ಕಾರಣ ಏನೆಂದರೆ ಈ ಫೋನ್‌ಗಳು ನೀರು ಹಾಗೂ ಧೂಳು ಹಾಗೂ ಇನ್ನಿತರೆ ಸಮಸ್ಯೆಯಿಂದ ಹಾಳಾಗುವುದಿಲ್ಲ. ಬದಲಾಗಿ ಅವುಗಳ ವಿರುದ್ಧ ಬಲವಾಗಿ ನಿಲ್ಲುವ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಅದರಂತೆ ಇಲ್ಲಿ ನೀಡಲಾದ ಇಷ್ಟೂ ಸ್ಮಾರ್ಟ್‌ಫೋನ್‌ಗಳು ನಿಮ್ಮ ಹೋಳಿ ಸಂಭ್ರಮದಲ್ಲಿ ಜೊತೆಯಾಗಿದ್ದರೆ ಆ ಸುಂದರ ಸಮಯವನ್ನು ಸ್ಮರಣೀಯವಾಗಿಸಿಕೊಳ್ಳಬಹುದು.
ಐಫೋನ್ 13 ಹಾಗೂ 14
ಐಫೋನ್ 13 ಹಾಗೂ 14 ಫೋನ್‌ಗಳು ಎಲ್ಲಾ ರೀತಿಯಲ್ಲೂ ಒಂದು ಕೈ ಮೇಲಿವೆ. ಈ ಡಿವೈಸ್‌ಗಳು ನೀರು ಮತ್ತು ಧೂಳಿನ ನಿರೋಧಕತೆಗಾಗಿ IP68 ರೇಟಿಂಗ್ ಅನ್ನು ಹೊಂದಿದ್ದು, ಈ ಮೂಲಕ ನೀವು ಈ ಫೋನ್‌ಗಳನ್ನು 6 ಮೀಟರ್ ಆಳದಲ್ಲಿ 30 ನಿಮಿಷಗಳವರೆಗೆ ಮುಳುಗಿಸಬಹುದು. ಇದರಿಂದ ಫೋನ್‌ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಾಗೆಯೇ ಯಾವುದೇ ಸಮಯದಲ್ಲಿ ಸ್ಪಷ್ಟ ಚಿತ್ರವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಇವು ಹೊಂದಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ನಲ್ಲಿ ಮೂರು ರೂಪಾಂತರಗಳಿದ್ದು, ಈ ಫೋನ್‌ಗಳು ಸಹ IP68 ರೇಟ್ ಹೊಂದಿವೆ. ಈ ಮೂಲಕ 6 ಮೀಟರ್ ಆಳದಲ್ಲಿ ಇರಿಸಿದರೂ ಈ ಫೋನ್‌ಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹಾಗೆಯೇ ಇತ್ತೀಚಿನ ಗ್ಯಾಲಕ್ಸಿ ಫೋನ್‌ಗಳು 1.5 ಮೀಟರ್‌ಗಳಷ್ಟು ನೀರಿನ ಒತ್ತಡವನ್ನು 30 ನಿಮಿಷಗಳವರೆಗೆ ಮಾತ್ರ ತಡೆಯಬಲ್ಲವಾಗಿವೆ. ಇನ್ನು ಗ್ಯಾಲಕ್ಸಿ S23 ಅಲ್ಟ್ರಾ 100x ಡಿಜಿಟಲ್ ಜೂಮ್ ಮತ್ತು 80 30fps ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಐಫೋನ್ SE 3ನೇ ಜನ್
ಐಫೋನ್ ವಿಭಾಗದಲ್ಲಿ ಐಫೋನ್ SE 3ನೇ ಜನ್ ಫೋನ್ ಸಹ IP67 ರೇಟಿಂಗ್‌ನೊಂದಿಗೆ ಕಾಣಿಸಿಕೊಂಡಿದ್ದು, ಈ ಫೋನ್ ಅನ್ನು ನೀವು 1 ಮೀಟರ್‌ವರೆಗಿನ ನೀರಿನಲ್ಲಿ 30 ನಿಮಿಷಗಳವರೆಗೆ ಇರಿಸಿದರೆ ಏನೂ ಆಗುವುದಿಲ್ಲ. ಹಾಗೆಯೇ 50,000 ರೂ. ಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಫೀಚರ್ಸ್ ಇರುವ ಫೋನ್‌ಗಾಗಿ ಹುಡುಕುತ್ತಿದ್ದರೆ ಈ ಹೋಳಿ ಸಮಯದಲ್ಲಿ ಇದು ಸೂಕ್ತ ಫೋನ್ ಎಂದೇ ಹೇಳಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ಸ್ಮಾರ್ಟ್‌ಫೋನ್ ನೀರಿನ ಪ್ರತಿರೋಧಕ್ಕಾಗಿ IPX8 ರೇಟ್ ಹೊಂದಿದೆ. ಆದರೆ ಈ ಫೋನ್ ಧೂಳು ನಿರೋಧಕವಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಆಕಸ್ಮಿಕವಾಗಿ ಶುದ್ಧ ನೀರಿನಲ್ಲಿ ಇದು ಮುಳುಗಿದರೆ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಈ ಫೋನ್ ಅನ್ನು ಅಮೆಜಾನ್ ಮೂಲಕ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದ್ದು, 77,499 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.

ಗೂಗಲ್ ಪಿಕ್ಸೆಲ್ 6a
ಗೂಗಲ್‌ನ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ IP67 ರೇಟ್ ಹೊಂದಿದೆ. ಈ ಮೂಲಕ 1 ಮೀಟರ್ ನೀರಿನಲ್ಲಿ 30 ನಿಮಿಷಗಳವರೆಗೆ ಇದನ್ನು ಇರಿಸಬಹುದಾಗಿದೆ. ಇದರಿಂದ ಫೋನ್‌ಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇನ್ನುಳಿದಂತೆ ರಿಯರ್‌ನಲ್ಲಿ ಈ ಫೋನ್ 12MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ನ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಈ ಮೂಲಕ ಎಂತಹುದೇ ಸಂದರ್ಭದಲ್ಲೂ ಅತ್ಯುತ್ತಮ ಚಿತ್ರಗಳನ್ನು ಈ ಫೋನ್ ಸೆರೆಹಿಡಿಯುತ್ತದೆ.


Click it and Unblock the Notifications








