ಅತ್ಯಂತ ಹೆಚ್ಚು ಹಾನಿಕಾರಕ ಡಿವೈಸ್ ಯಾವುದು ಗೊತ್ತಾ? ಅತಿಯಾಗಿ ಬಳಸಿದ್ರೆ ಸಮಸ್ಯೆ ಖಂಡಿತಾ
ನಾವು ನಿತ್ಯವೂ ಒಂದಲ್ಲಾ ಒಂದು ಡಿವೈಸ್‌ನ ಸೇವೆ ಪಡೆದುಕೊಳ್ಳುತ್ತಲೇ ಇರುತ್ತೇವೆ. ಅದರಲ್ಲೂ ಇತ್ತೀಚೆಗೆ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್‌ಗಳು ಯಾವಾಗಲೂ ನಮ್ಮ ಬಳಿಯೇ ಇರಲಿದ್ದು, ಇವುಗಳು ನಮಗೆ ವರದಾನ ಆಗುವುದರ ಜೊತೆಗೆ ಗಂಭೀರ ಸಮಸ್ಯೆಯನ್ನೂ ಸಹ ಉಂಟು ಮಾಡುತ್ತಿವೆ.
ಹೌದು, ಯಾವುದೇ ಸ್ಮಾರ್ಟ್ ಡಿವೈಸ್ ಆದರೂ ಸಹ ವಿಕಿರಣಗಳನ್ನು (Radiation) ಸೂಸುತ್ತವೆ. ಈ ಕಾರಣಕ್ಕಾಗಿಯೇ ಸಣ್ಣ ಪುಟ್ಟ ಅಕ್ಕಿಗಳು ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅದರಲ್ಲೂ ಗುಬ್ಬಚ್ಚಿಯ ಸಂತಾನವೇ ನಾಶ ಆಗುವತ್ತ ಸಾಗುತ್ತಿದೆ. ಈ ನಡುವೆ ಯಾವ ಡಿವೈಸ್ ಹೊರ ಸೂಸುವ ವಿಕಿರಣ ಹೆಚ್ಚು ಪರಿಣಾಮ ಕಾರಿ, ಯಾವುದನ್ನು ಹೇಗೆ ಬಳಕೆ ಮಾಡಿದರೆ ಒಳ್ಳೆಯದು ಎಂದು ಪ್ರತಿಯೊಬ್ಬರು ತಿಳಿಯುವುದು ಅಗತ್ಯ.

ಅಯಾನಿಕ್ ವಿಕಿರಣ, ಪಾಯಿಂಟ್ ವಿಕಿರಣ ಮತ್ತು ವಿದ್ಯುತ್ಕಾಂತೀಯ ವಿಕಿರಣ ಎಂಬ ಮೂರು ಪ್ರಮುಖ ವಿಕಿರಗಳಿದ್ದು, ಅಯಾನಿಕ್ ವಿಕಿರಣ ಎಂದರೆ ಅದು ವಸ್ತು ಅಥವಾ ವಸ್ತುವನ್ನು ಅಯಾನೀಕರಿಸುತ್ತದೆ. ಇದು ತುಂಬಾ ಅಸ್ಥಿರವಾಗಿದ್ದು, ವಾತಾವರಣದ ಅಡಿಯಲ್ಲಿ ಹರಡಬಹುದು. ಪಾಯಿಂಟ್ ವಿಕಿರಣವು ಒಂದು ಬಿಂದುವಿನಿಂದ ಹುಟ್ಟುತ್ತದೆ ಮತ್ತು ಇನ್ನೊಂದು ಬಿಂದುವನ್ನು ಮಾತ್ರ ತಲುಪುತ್ತದೆ. ವಿದ್ಯುತ್ಕಾಂತೀಯ ವಿಕಿರಣವು ಬೆಳಕು, ರೇಡಿಯೋ ಮತ್ತು ಮೈಕ್ರೋವೇವ್‌ಗಳ ರೂಪದಲ್ಲಿ ವಿಭಿನ್ನ ಆವರ್ತನಗಳೊಂದಿಗೆ ಶಕ್ತಿಯಾಗಿ ಕಾಣಿಸಿಕೊಳ್ಳುತ್ತದೆ.
ಯಾವ ವಿಕಿರಣವು ಅತ್ಯಂತ ಅಪಾಯಕಾರಿ?: ಪರಮಾಣು ವಿಕಿರಣವು ದೇಹಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಇದು ವಿಕಿರಣಶೀಲ ಅಣುಗಳಿಂದ ಉತ್ಪತ್ತಿಯಾಗುವ ವಿಕಿರಣವಾಗಿದ್ದು, ನಿಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದಾಗಿ ಕ್ಯಾನ್ಸರ್, ಆಂತರಿಕ ಅಂಗಗಳಿಗೆ ಹೆಚ್ಚಿದ ಹಾನಿ, ಅಸಹಜತೆಗಳು, ಹಲ್ಲು ಮತ್ತು ಒಸಡುಗಳ ದುರ್ಬಲಗೊಳ್ಳುವಿಕೆ, ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿಯಂತಹ ಸಮಸ್ಯೆಗಳು ಕಂಡುಬರುತ್ತವೆ.
ಯಾವ ಡಿವೈಸ್ ಹೆಚ್ಚಿನ ವಿಕಿರಣವನ್ನು ಹೊರಸೂಸುತ್ತದೆ?: ಈ ಬಗ್ಗೆ ಹಲವಾರು ಜನರಿಗೆ ಗೊತ್ತಿರುತ್ತದೆ. ಆದರೂ ಅದನ್ನು ದೇಹಕ್ಕೆ ಅಂಟಿಮ ಚರ್ಮದಂತೆ ಯಾವಾಗಲೂ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಹೌದು ನಾವು ಹೇಳಲು ಹೊರಟಿರುವುದು ಮೊಬೈಲ್ ಬಗ್ಗೆ. ಈ ಮೊಬೈಲ್ ಫೋನ್ ಟ್ರೋಪೋಸ್ಪಿಯರ್ ಅನ್ನು ಉತ್ಪತ್ತಿ ಮಾಡುತ್ತವೆ ಅದು ದೇಹಕ್ಕೆ ಅಪಾಯಕಾರಿಯಾಗಿದೆ. ಅದರಲ್ಲೂ ಮೊಬೈಲ್ ಅನ್ನು ಕಿವಿಯ ಬಳಿ ದೀರ್ಘಕಾಲ ಇಟ್ಟುಕೊಂಡರೆ ಖಂಡಿತಾ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಇದಾದ ನಂತರದ ಸ್ಥಾನದಲ್ಲಿ ಮೈಕ್ರೋವೇವ್ ಓವನ್ ಹೆಚ್ಚಿನ ವಿಕಿರಣ ಹೊರಸೂಸುತ್ತದೆ. ಮೈಕ್ರೊವೇವ್ ಓವನ್ ನಿಮ್ಮ ಆಹಾರವನ್ನು ಬಿಸಿಮಾಡಲು ಅಥವಾ ಬೇಯಿಸಲು ಬಳಸುವ ಡಿವೈಸ್ ಆಗಿದ್ದು, ಇದು ಮೈಕ್ರೋವೇವ್ ವಿಕಿರಣವನ್ನು ಬಳಕೆ ಮಾಡುತ್ತದೆ. ಈ ಕಾರಣದಿಂದ ಇದನ್ನು ಅತಿಯಾಗಿ ಬಳಕೆ ಮಾಡುವುದರಿಂದಾಗಿ ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯಾಗುತ್ತದೆ. ಇದರಿಂದ ಜನರು ಆಂತರಿಕ ಅಂಗಗಳ ಸಮಸ್ಯೆ ಮತ್ತು ನರವೈಜ್ಞಾನಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇನ್ನು ವೈ-ಫೈ ರೂಟರ್‌ಗಳು ಸಹ ಹೆಚ್ಚಿನ ವಿಕಿರಣ ಹೊರಸೂಸುವ ಸ್ಥಾನದಲ್ಲಿ ಪ್ರಮುಖ ಎನಿಸಿಕೊಂಡಿವೆ. ಅದಾಗ್ಯೂ ಮಾನವನ ಆರೋಗ್ಯಕ್ಕೆ ಯಾವುದೇ ಸಂಭಾವ್ಯ ಅಪಾಯಗಳನ್ನು ಉಂಟು ಮಾಡಬಹುದಾದ ವಿಷಯದಲ್ಲೇ ಇವುಗಳನ್ನು ತಯಾರು ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಅಂದರೆ ತಯಾರಕರು ಕೆಲವು ಮಾರ್ಗಸೂಚಿಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಹೊಂದಿರುತ್ತಾರೆ.

ಏನಿದು ವಿಕಿರಣ?: ವಿಕಿರಣ (Radiation) ಎಂದರೆ ಒಂದು ಮೂಲದಿಂದ ಬರುವ ಶಕ್ತಿಯಾಗಿದ್ದು, ಇದು ಬೆಳಕಿನ ವೇಗದಲ್ಲಿ ಬಾಹ್ಯಾಕಾಶದಲ್ಲಿ ಚಲಿಸುತ್ತದೆ. ಈ ಶಕ್ತಿಯು ವಿದ್ಯುತ್ ಕ್ಷೇತ್ರ ಮತ್ತು ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಇತ್ತೀಚೆಗೆ ನಮ್ಮ ಸುತ್ತಮುತ್ತಲ ವಾತಾವರಣದಲ್ಲಿ ಹೆಚ್ಚಾಗುತ್ತಿದ್ದು, ಕೆಲವು ಜೀವಿಗಳ ನಾಶಕ್ಕೆ ಕಾರಣ ಆಗುತ್ತಿದೆ. ಇದರಲ್ಲಿ ಧ್ವನಿ, ವಿದ್ಯುತ್, ಎಲೆಕ್ಟ್ರಾನ್ ಅಥವಾ ಪರಮಾಣು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಇದು ಕಂಡುಬರುತ್ತದೆ.


Click it and Unblock the Notifications








