Home
ಸುದ್ದಿಜಾಲ

2024 ರ ಆರಂಭದಲ್ಲಿ ಹೆಚ್ಚು ಸೇಲ್‌ ಆದ ಫೋನ್‌ಗಳು ಇವೇ.. ಈಗಲೂ ಭಾರೀ ಬೇಡಿಕೆ

ಬಹುಪಾಲು ಎಲ್ಲರ ಬಳಿ ಸ್ಮಾರ್ಟ್‌ಫೋನ್‌ಗಳು (Smartphones) ಇದ್ದರೂ ಸಹ ಅವರು ಆಗಾಗ್ಗೆ ಅಪ್‌ಗ್ರೇಡ್‌ ಆಗುವ ಕಾರಣಕ್ಕೆ ಹೊಸ ಹೊಸ ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಈ ನಡುವೆ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ಪೈಪೋಟಿಯಲ್ಲಿ ವಿವಿಧ ಫೀಚರ್ಸ್‌ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ಈ ವರ್ಷದ ಆರಂಭದಲ್ಲಿ ಸಾಕಷ್ಟು ಫೋನ್‌ಗಳು ಭಾರೀ ಬೇಡಿಕೆ ಪಡೆದುಕೊಂಡಿವೆ.

ಹೌದು, ಸ್ಮಾರ್ಟ್‌ಫೋನ್‌ಗಳಿಗೆ ಇರುವ ಬೇಡಿಕೆ ಇತರೆ ಯಾವ ಡಿವೈಸ್‌ಗಳಿಗೂ ಇಲ್ಲ ಎಂದರೆ ತಪ್ಪಾಗಲಾರದು. ಇದೇ ಕಾರಣಕ್ಕೆ ಒಂದು ವಾರದಲ್ಲೇ ಸಾಕಷ್ಟು ಹೊಸ ಹೊಸ ಫೋನ್‌ಗಳು ಲಾಂಚ್‌ ಆಗುತ್ತವೆ. ಈ ನಡುವೆ ಪ್ರೀಮಿಯಂ ಫೋನ್‌ಗಳನ್ನು (Premium phones) ದೊಡ್ಡ ಮಟ್ಟದಲ್ಲಿ ಖರೀದಿ ಮಾಡಲಾಗಿದೆ. ಹಾಗಿದ್ರೆ, ಕೌಂಟರ್‌ಪಾಯಿಂಟ್ ರಿಸರ್ಚ್‌ನ (Counterpoint Research) ಹೊಸ ವರದಿಯಲ್ಲಿ ಕಂಡು ಬಂದಿದ್ದೇನು?, ಯಾವೆಲ್ಲಾ ಫೋನ್‌ಗಳು ಯಾವ ಸ್ಥಾನ ಪಡೆದಿವೆ ಅನ್ನೋದನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

2024 ರ ಆರಂಭದಲ್ಲಿ ಹೆಚ್ಚು ಸೇಲ್‌ ಆದ ಫೋನ್‌ಗಳು ಇವೇ.. ಈಗಲೂ ಭಾರೀ ಬೇಡಿಕೆ

ಐಫೋನ್‌ಗೆ ಮೊದಲ ಸ್ಥಾನ: ಹೆಚ್ಚು ಸೇಲ್‌ ಆದ ಫೋನ್‌ಗಳ ವಿಭಾಗದಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್‌ (iPhone 15 Pro Max) ಮೊದಲ ಸ್ಥಾನ ಪಡೆದುಕೊಂಡಿದೆ. ಅಂದರೆ ಈ ಫೋನ್ 2024 ರ ಮೊದಲ ಮೂರು ತಿಂಗಳುಗಳಲ್ಲಿ ವಿಶ್ವದಾದ್ಯಂತ ಹೆಚ್ಚು ಸೇಲ್‌ ಆದ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ಹೊಸ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದು ಉನ್ನತ-ಮಟ್ಟದ ಫೀಚರ್ಸ್‌ನಿಂದಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ತೋರಿಸುತ್ತದೆ.

ಪ್ರೀಮಿಯಂ ಐಫೋನ್ 15 ಪ್ರೊ ಮ್ಯಾಕ್ಸ್ ಮಾತ್ರವಲ್ಲದೆ, ಕಳೆದ ವರ್ಷದ ಐಫೋನ್ 14 ಜೊತೆಗೆ ಐಫೋನ್ 15 ಸರಣಿಯ (iPhone 14, iPhone 15 series) ಎಲ್ಲಾ ನಾಲ್ಕು ಮಾದರಿಗಳು ಟಾಪ್ 10 ಹೆಚ್ಚು ಸೇಲ್ ಆದ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ ಎಂದು ವರದಿಯಿಂದ ತಿಳಿದುಬಂದಿದೆ. ಸ್ಮಾರ್ಟ್‌ಫೋನ್ ಖರೀದಿದಾರರು ಅದರ ಹಳೆಯ ಮಾದರಿಗಳ ಜೊತೆಗೆ ಇತ್ತೀಚಿನ ಐಫೋನ್ ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ಇದು ತೋರಿಸುತ್ತದೆ. 2024 ರ ಮೊದಲ ತ್ರೈಮಾಸಿಕದಲ್ಲಿ ಟಾಪ್ 10 ಸ್ಥಾನ ಪಡೆದ ಫೋನ್‌ಗಳ ಲಿಸ್ಟ್ ಇಲ್ಲಿದೆ ನೋಡಿ.

2024 ರ ಆರಂಭದಲ್ಲಿ ಹೆಚ್ಚು ಸೇಲ್‌ ಆದ ಫೋನ್‌ಗಳು ಇವೇ.. ಈಗಲೂ ಭಾರೀ ಬೇಡಿಕೆ
1

ಆಪಲ್‌ ಐಫೋನ್ 15 ಪ್ರೊ ಮ್ಯಾಕ್ಸ್‌

2 ಆಪಲ್‌ ಐಫೋನ್ 15
3 ಆಪಲ್‌ ಐಫೋನ್ 15 ಪ್ರೊ
4 ಆಪಲ್‌ ಐಫೋನ್ 14
5 ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ
6 ಆಪಲ್‌ ಐಫೋನ್ 14 Pro ಮ್ಯಾಕ್ಸ್‌
7 ಆಪಲ್‌ ಐಫೋನ್ 14 ಪ್ರೊ
8 ಸ್ಯಾಮ್‌ಸಂಗ್ ಗ್ಯಾಲಕ್ಸಿ A54
9 ಸ್ಯಾಮ್‌ಸಂಗ್ ಗ್ಯಾಲಕ್ಸಿ S24
10 ಸ್ಯಾಮ್‌ಸಂಗ್ ಗ್ಯಾಲಕ್ಸಿ A24

ಇನ್ನು $500 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಜನಪ್ರಿಯತೆಯು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಟಾಪ್ 10 ಅತ್ಯುತ್ತಮ-ಮಾರಾಟಗಾರರ ಪೈಕಿ ಏಳು ಈ ಪ್ರೀಮಿಯಂ ವರ್ಗಕ್ಕೆ ಸೇರಿದೆ. ಖರೀದಿದಾರರು ಕಡಿಮೆ ಬೆಲೆಗಳಿಗಿಂತ ಸುಧಾರಿತ ಫೀಚರ್ಸ್‌ಗಳು ಮತ್ತು ದೀರ್ಘಾವಧಿಯ ಡಿವೈಸ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಈ ವರದಿಯಿಂದ ತಿಳಿದುಬಂದಿದೆ.

2024 ರ ಆರಂಭದಲ್ಲಿ ಹೆಚ್ಚು ಸೇಲ್‌ ಆದ ಫೋನ್‌ಗಳು ಇವೇ.. ಈಗಲೂ ಭಾರೀ ಬೇಡಿಕೆ

ಆಪಲ್ ಅಗ್ರ ಶ್ರೇಯಾಂಕದಲ್ಲಿ ಪ್ರಾಬಲ್ಯ ಹೊಂದಿದ್ದರೂ, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ 5 ನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಬೇಸ್ ಗ್ಯಾಲಕ್ಸಿ ಎಸ್ 24 ಮಾದರಿಯು 9 ನೇ ಸ್ಥಾನದಲ್ಲಿದೆ. ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವ ವ್ಯಾಪಕ ಪ್ರವೃತ್ತಿಯನ್ನು ಈ ಮೂಲಕ ಈ ವರದಿ ಎತ್ತಿ ತೋರಿಸುತ್ತದೆ. ಖರೀದಿದಾರರು ತಮ್ಮ ಫೋನ್‌ಗಳು ಮುಂಬರುವ ವರ್ಷಗಳಲ್ಲಿ ಪ್ರಸ್ತುತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಪ್ರೀಮಿಯಂ ಫೀಚರ್ಸ್‌ ಇರುವ ಫೋನ್‌ಗಳ ಮೊರೆ ಹೋಗುತ್ತಿದ್ದಾಋಎ ಎಂದು ಕಂಡುಕೊಳ್ಳಲಾಗಿದೆ.

ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಪ್ರೀಮಿಯಂ ಫೋನ್‌ಗಳಿಗೆ ವಿಶೇಷ ಆಫರ್ ಸಹ ನೀಡಲಾಗುತ್ತಿದ್ದು, ಈ ಮೂಲಕ ಭಾರೀ ಹಣ ಉಳಿತಾಯದೊಂದಿಗೆ ನೀವು ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
iPhone 15 Pro Max has taken the first place in the category of most sold phones. This means that this phone has emerged as the best-selling smartphone worldwide in the first three months of 2024, according to a new report by Counterpoint Research.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+