smartphones: 2023 ರಲ್ಲಿ ವಿಶ್ವದಲ್ಲೇ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್‌ಗಳಿವು! ನಿಮ್ಮ ಮೆಚ್ಚಿನ ಫೋನ್ ಇರಬಹುದು ಚೆಕ್ ಮಾಡಿ
ಸ್ಮಾರ್ಟ್‌ಫೋನ್‌ಗಳು (smartphones) ಇಂದು ತಂತ್ರಜ್ಞಾನ ವಲಯವನ್ನು ಆಳುತ್ತಿವೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್‌ಗಳ ಪ್ರಾಬಲ್ಯ ಇದೆ. ಅದರಲ್ಲೂ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಭಿನ್ನ ಫೀಚರ್ಸ್ ಆಯ್ಕೆಯ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇವೆ.
ಹೌದು, ಪ್ರತಿವರ್ಷ ಸಾಕಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಲೇ ಇವೆ. ಆದರೆ ಕೆಲವು ಫೋನ್‌ಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ರೆ ಇನ್ನೂ ಕೆಲವು ಫೋನ್‌ಗಳು ಸದ್ದಿಲ್ಲದೆ ಮರೆಯಾಗುತ್ತವೆ. ಈ ಬೆಳವಣಿಗೆ ನಡುವೆ ಕಳೆದ ವರ್ಷದ ಯಾವೆಲ್ಲಾ ಫೋನ್‌ಗಳು ಜಾಗತಿಕವಾಗಿ ಹೆಚ್ಚು ಸೇಲ್ ಆಗಿವೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಹಾಗಿದ್ರೆ, ಬನ್ನಿ ಕ್ಯಾನಲಿಸ್ ವರದಿ ಪ್ರಕಾರ ಹೆಚ್ಚು ಸೇಲ್ ಆದ ಫೋನ್‌ಗಳ ವಿವರವನ್ನು ನೋಡೋಣ.

2023 ರಲ್ಲಿ ಸೇಲ್ ಆದ ಉತ್ತಮ ಸ್ಮಾರ್ಟ್‌ಫೋನ್‌ಗಳಿವು: 2023 ರಲ್ಲಿ ಆಪಲ್ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್ ಮಾರಾಟದ ಬ್ರಾಂಡ್‌ನ ಶೀರ್ಷಿಕೆಯನ್ನು ಪಡೆದುಕೊಂಡಿದೆ. ಈ ವೇಳೆ ಹೆಚ್ಚು ಸೇಲ್ ಆಗಿರುವ ವೇರಿಯಂಟ್ ಐಫೋನ್ 14 ಪ್ರೊ ಮ್ಯಾಕ್ಸ್ (iPhone 14 Pro Max) ಆಗಿದೆ. ಜೊತೆಗೆ ಐಫೋನ್ 14 ಸರಣಿ ಮತ್ತು ಐಫೋನ್ 15 ಸರಣಿಯ ಫೋನ್‌ಗಳು ಮೊದಲ ಹತ್ತು ಫೋನ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ.
ಈಗಾಗಲೇ ಹೇಳಿದಂತೆ ಐಫೋನ್ 14 ಪ್ರೊ ಮ್ಯಾಕ್ಸ್ 2023 ರಲ್ಲಿ 34 ಮಿಲಿಯನ್ ಯುನಿಟ್‌ಗಳೊಂದಿಗೆ ಹೆಚ್ಚು ಸೇಲ್ ಆದ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ. ಪ್ರಾಯಶಃ, ಹೊಸ ಐಫೋನ್ ಸರಣಿಯ ಬಿಡುಗಡೆಯ ನಂತರ ಈ ಫೋನ್ ಹೆಚ್ಚು ರಿಯಾಯಿತಿ ಪಡೆದ ಹಿನ್ನೆಲೆ ಈ ಮಟ್ಟದ ಸೇಲ್ ಆಗಲು ಕಾರಣ ಎನ್ನಲಾಗಿದೆ. ಹಾಗೆಯೇ 3 ನೇ ಸ್ಥಾನದಲ್ಲಿ ಐಫೋನ್ 14 (29 ಮಿಲಿಯನ್) ಮತ್ತು 4 ನೇ ಸ್ಥಾನದಲ್ಲಿ ಐಫೋನ್ 14 ಪ್ರೊ (29 ಮಿಲಿಯನ್) ಇವೆ.

ಇನ್ನು ಐಫೋನ್ 15 ಸರಣಿಯು ಸೆಪ್ಟೆಂಬರ್ 2023 ರಲ್ಲಿ ಒಂದೆರಡು ತಿಂಗಳ ಹಿಂದೆ ಬಿಡುಗಡೆ ಆಗಿದ್ದರೂ ಸಹ ಉತ್ತಮವಾಗಿ ಸೌಂಡ್ ಮಾಡುತ್ತಿದೆ. ಅಂದರೆ ಐಫೋನ್ 15 ಪ್ರೊ ಮ್ಯಾಕ್ಸ್ ಈ ಲಿಸ್ಟ್‌ನಲ್ಲಿ 2 ನೇ ಸ್ಥಾನ ಪಡೆದಿದ್ದು, ಈ ಮೂಲಕ 33 ಮಿಲಿಯನ್ ಯುನಿಟ್‌ಗಳು ಸೇಲ್ ಆಗಿವೆ. ಜೊತೆಗೆ ಐಫೋನ್ 15 ಪ್ರೊ 21 ಮಿಲಿಯನ್ ಯುನಿಟ್‌ಗಳನ್ನು ರವಾನಿಸುವುದರೊಂದಿಗೆ 7 ನೇ ಸ್ಥಾನದಲ್ಲಿದೆ.
ಹಾಗೆಯೇ ಐಫೋನ್ 15 ಫೋನ್ 17 ಮಿಲಿಯನ್ ಯುನಿಟ್‌ಗಳನ್ನು ಸೇಲ್ ಮಾಡುವ ಮೂಲಕ 10 ನೇ ಸ್ಥಾನದಲ್ಲಿದೆ. ಈ ಲಿಸ್ಟ್ ಗಮನಿಸಿದ್ರೆಇತರ ಐಫೋನ್‌ಗಳಿಗೆ ಹೋಲಿಸಿದರೆ ಐಫೋನ್ 14 ಪ್ಲಸ್ ಅಥವಾ ಐಫೋನ್ 15 ಪ್ಲಸ್ ಎರಡೂ ಫೋನ್‌ಗಳು ಹೆಚ್ಚು ಸೇಲ್ ಆಗುಲ್ಲ ಅನ್ನೋದನ್ನು ನಾವಿಲ್ಲಿ ಗಮನಿಸಬಹುದಾಗಿದೆ.
ಆಪಲ್ ಹೊರತುಪಡಿಸಿ ಇತರೆ ಫೋನ್‌ಗಳ ಕಡೆ ಕಣ್ಣಾಯಿಸುವುದಾದರೆ ಸ್ಯಾಮ್‌ಸಂಗ್ ಲಿಸ್ಟ್‌ನಲ್ಲಿ ಕನಿಷ್ಠ ಮೂರು ಗ್ಯಾಲಕ್ಸಿ ಫೋನ್‌ಗಳನ್ನು ಹೊಂದಿದೆ. ಗ್ಯಾಲಕ್ಸಿ A14 4G 21 ಮಿಲಿಯನ್ ಯುನಿಟ್‌ಗಳು 6 ನೇ ಸ್ಥಾನದಲ್ಲಿ ಸೇಲ್ ಆಗಿವೆ. ಹಾಗೆಯೇ ಗ್ಯಾಲಕ್ಸಿ A54 20 ಮಿಲಿಯನ್ 8 ನೇ ಸ್ಥಾನದಲ್ಲಿದ್ದರೆ ಗ್ಯಾಲಕ್ಸಿ A14 5G ಫೋನ್ 19 ಮಿಲಿಯನ್ ಯುನಿಟ್ ಸೇಲ್ ಆಗುವ ಮೂಲಕ 9 ನೇ ಸ್ಥಾನ ಪಡೆದಿವೆ. ಅದರಲ್ಲೂ ಸಾಕಷ್ಟು ಜನರು 5G ಫೋನ್‌ಗಿಂತ 4G ಫೋನ್ ಅನ್ನೇ ಹೆಚ್ಚು ಖರೀದಿ ಮಾಡಿದ್ದಾರೆ.

ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಲಿಸ್ಟ್‌ನಲ್ಲಿ ಯಾವುದೇ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ಗಳು ಕಂಡುಬಂದಿಲ್ಲ. ಗ್ಯಾಲಕ್ಸಿ ಎಐ ಫೀಚರ್ಸ್ ಮತ್ತು ಇತರ ನವೀಕರಣಗಳೊಂದಿಗೆ ಗ್ಯಾಲಕ್ಸಿ S24 ಸರಣಿ ಫೋನ್‌ಗಳನ್ನು ಅನಾವರಣ ಮಾಡಿದ್ದರಿಂದಾಗಿ ಈ ರೀತಿ ಆಗಿರಬಹುದು ಎಂದು ಹೇಳಲಾಗುತ್ತಿದೆ.


Click it and Unblock the Notifications








