Home
ಸುದ್ದಿಜಾಲ

Netflix: ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಣೆಯಾದ ಶೋಗಳಿವು! ಈ ಲಿಸ್ಟ್‌ನಲ್ಲಿ ನಿಮ್ಮಿಷ್ಟದ ಶೋ ಸಹ ಇರಬಹುದು

ಜನರು ಇಂದು ಮಾಹಿತಿ ಹಾಗೂ ಮನರಂಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳಲ್ಲೇ (smartphones) ಇವುಗಳಿಗೆ ಸುಲಭ ಎಂಟ್ರಿ ಬಹುಪಾಲು ಜನರು ಇಂದು ಇದಕ್ಕೆ ಮಾರುಹೋಗಿದ್ದಾರೆ. ಇದೇ ಕಾರಣಕ್ಕೆ ಒಂದು ಓಟಿಟಿ ಪ್ಲಾಟ್‌ಫಾರ್ಮ್‌ಗಳು (OTT platform) ಒಂದಾದ ಮೇಲೊಂದರಂತೆ ತಲೆ ಎತ್ತುತ್ತಿವೆ. ಈ ನಡುವೆ ನೆಟ್‌ಫ್ಲಿಕ್ಸ್‌ (Netflix) ಅನ್ನು ಈ ವರ್ಷ ಹೆಚ್ಚಿನ ಜನ ಬಳಕೆ ಮಾಡಿದ್ದಾರೆ.

ಹೌದು, ನಾವು ಇನ್ನೇನು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ನಡುವೆ ಈ ವರ್ಷ ಜನರು ಏನೆಲ್ಲಾ ಸರ್ಚ್‌ ಮಾಡಿದ್ದಾರೆ ಎಂಬ ವರದಿಯನ್ನು ಗೂಗಲ್‌ (Google) ಕೆಲವು ದಿನಗಳ ಹಿಂದಷ್ಟೇ ಪ್ರಕಟ ಮಾಡಿತ್ತು. ಅದರಂತೆ ಈಗ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಫ್ಲಿಕ್ಸ್‌ ಸಹ ಈ ವರ್ಷದಲ್ಲಿ ಯಾವೆಲ್ಲಾ ಶೋಗಳು ಹೆಚ್ಚು ವೀಕ್ಷಣೆ ಪಡೆದುಕೊಂಡಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಮೂಲಕ ಇವು ನೆಟ್‌ಫ್ಲಿಕ್ಸ್‌ನ 2023 ರ 'ಅತ್ಯಂತ ಜನಪ್ರಿಯ' ಶೋಗಳಾಗಿವೆ.

ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಣೆಯಾದ ಶೋಗಳಿವು! ...

ನೆಟ್‌ಫ್ಲಿಕ್ಸ್ ನಲ್ಲಿನ ಫೇಮಸ್‌ ಶೋಗಳು: ನೆಟ್‌ಫ್ಲಿಕ್ಸ್ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಇನ್ನೂ ಹೆಚ್ಚಿನ ಮನರಂಜನಾ ಕಂಟೆಂಟ್‌ ವೀಕ್ಷಣೆ ಮಾಡಲು ಉತ್ತಮವಾದ ಆಯ್ಕೆಯಾಗಿದೆ. ಬಳಕೆದಾರರ ಆದ್ಯತೆಗೆ ಅನುಗುಣವಾಗಿ ಪ್ಲ್ಯಾನ್‌ಗಳಿದ್ದು, ಈ ಮೂಲಕ ಇಷ್ಟದ ಶೋಗಳನ್ನು ಇದರಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಈ ನಡುವೆ ನೆಟ್‌ಫ್ಲಿಕ್ಸ್‌ನ 'ವಾಟ್ ವಿ ವಾಚ್ಡ್' (What We Watched) ವರದಿಯ ಪ್ರಕಾರ, ಜನವರಿಯಿಂದ ಜೂನ್ 2023 ರವರೆಗೆ ಈ ವರ್ಷದ ಈ ಓಟಿಟಿ ಪ್ಲಾಟ್‌ಫಾರ್ಮ್‌ನ 10 ಅತ್ಯಂತ ಜನಪ್ರಿಯ ಶೋಗಳನ್ನು ಲಿಸ್ಟ್‌ ಮಾಡಲಾಗಿದೆ.

ಯಾವೆಲ್ಲಾ ಶೋಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ:
ಒಂದನೇ ಸ್ಥಾನದಲ್ಲಿ ದಿ ನೈಟ್ ಏಜೆಂಟ್ ಸೀಸನ್ 1 ಇದೆ (The Night Agent: Season 1). ಈ ಶೋವನ್ನು 81,21,00,000 ಗಂಟೆಗಳ ಕಾಲ ವೀಕ್ಷಣೆ ಮಾಡಲಾಗಿದೆ. ಜಾಗತಿಕವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ನೈಟ್ ಏಜೆಂಟ್ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು, ಇದರೊಂದಿಗೆ ಗಿನ್ನಿ ಮತ್ತು ಜಾರ್ಜಿಯಾ: ಸೀಸನ್ 2 (​Ginny & Georgia: Season 2) ಎರಡನೇ ಸ್ಥಾನ ಪಡೆದುಕೊಂಡಿದೆ. ಅಂದರೆ ಈ ಶೋವನ್ನು 66,51,00,000 ಗಂಟೆಗಳ ವೀಕ್ಷಣೆಯೊಂದಿಗೆ ಲಿಸ್ಟ್‌ ಮಾಡಲಾಗಿದೆ.

ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಣೆಯಾದ ಶೋಗಳಿವು! ...

ಇನ್ನು ಮೂರನೇ ಸ್ಥಾನದಲ್ಲಿ ದಿ ಗ್ಲೋರಿ: ಸೀಸನ್ 1 (The Glory: Season 1) ಇದೆ. ಇದು ಬರೋಬ್ಬರಿ 62,28,00,000 ಗಂಟೆಗಳ ವೀಕ್ಷಣೆಯೊಂದಿಗೆ ದಾಖಲೆ ಮಾಡಿದ್ದು, ಇದರೊಂದಿಗೆ ವೆಡ್‌ನಸ್‌ಡೇ ಸೀಸನ್ 1 (Wednesday: Season 1) ನಾಲ್ಕನೇ ಸ್ಥಾನ ಪಡೆದುಕೊಳ್ಳುವ ಮೂಲಕ 50,77,00,000 ಗಂಟೆಗಳ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಐದನೇ ಸ್ಥಾನದಲ್ಲಿ ಕ್ವೀನ್ ಷಾರ್ಲೆಟ್: ಎ ಬ್ರಿಡ್ಜರ್ಟನ್ ಸ್ಟೋರಿ (Queen Charlotte: A Bridgerton Story) ಇದೆ. ಇದನ್ನು ಈ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ 50,30,00,000 ಗಂಟೆಗಳ ವೀಕ್ಷಣೆ ಪಡೆದಿದ್ದು, ಹೆಚ್ಚು ಜನಪ್ರಿಯವಾಗಿದೆ.

ಇದರೊಂದಿಗೆ ಆರನೇ ಸ್ಥಾನವನ್ನು ಯು ಸೀಸನ್ 4 (You: Season 4) ಪಡೆದಿದೆ. ಈ ಶೋವನ್ನು ಜನರು ನೆಟ್‌ಫ್ಲಿಕ್ಸ್‌ನಲ್ಲಿ 44,06,00,000 ಗಂಟೆಗಳ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಇದೂ ಸಹ ಹೆಚ್ಚು ಟಾಕ್‌ ಆದ ಶೋ ಆಗಿ ಗುರುತಿಸಿಕೊಂಡಿದೆ. ಇದಾದ ನಂತರದ ಸ್ಥಾನವನ್ನು ಲಾ ರೀನಾ ಡೆಲ್ ಸುರ್: ಸೀಸನ್ 3 (​La Reina del Sur: Season 3 )ಪಡೆದುಕೊಂಡಿದೆ. ಈ ಶೋವನ್ನು 42,96,00,000 ಗಂಟೆಗಳ ವೀಕ್ಷಣೆ ಮಾಡಲಾಗಿದೆ.

ಈ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ವೀಕ್ಷಣೆಯಾದ ಶೋಗಳಿವು! ...

ಹಾಗೆಯೇ ಔಟರ್ ಬ್ಯಾಂಕ್ಸ್ ಸೀಸನ್ 3 ಕಾರ್ಯಕ್ರಮ (​Outer Banks: Season 3) ನೆಟ್‌ಫ್ಲಿಕ್ಸ್‌ನಲ್ಲಿ 40,25,00,000 ಗಂಟೆಗಳ ವೀಕ್ಷಣೆಯೊಂದಿಗೆ ಎಂಟನೇ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಗುರುತಿಸಿಕೊಂಡರೆ ಗಿನ್ನಿ ಜಾರ್ಜಿಯಾ ಸೀಸನ್ 1 ಶೋ (​Ginny & Georgia: Season 1) 30,21,00,000 ಗಂಟೆಗಳ ವೀಕ್ಷಣೆಯೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ ಹಾಗೂ ಫುಬಾರ್: ಸೀಸನ್ 1 (FUBAR: Season 1) ಕಾರ್ಯಕ್ರಮ ಹತ್ತನೇ ಸ್ಥಾನ ಪಡೆದಿದ್ದು, ಈ ಶೋವನ್ನು 26,62,00,000 ಗಂಟೆಗಳ ವೀಕ್ಷಣೆ ಮಾಡಲಾಗಿದೆ.

Best Mobiles in India

English summary
Netflix has now revealed the most watched shows of the year. Here are Netflix's 'most popular' shows of 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+