ಅಗ್ರ ಸ್ಥಾನದಲ್ಲಿರುವ ಸ್ಮಾರ್ಟ್‌ಫೋನ್ ಕಂಪೆನಿಗಳಿವು, ನಿಮಗೆ ಯಾವ ಸಂಸ್ಥೆಯ ಫೋನ್‌ಗಳಂದ್ರೆ ಇಷ್ಟ?
ಸ್ಮಾರ್ಟ್‌ಫೋನ್‌ಗಳು ಇಂದು ಅಗತ್ಯ ಡಿವೈಸ್ ಆಗಿದ್ದು, ಈ ಸ್ಮಾರ್ಟ್‌ಫೋನ್‌ಗಳನ್ನು ಹಿಡಿಯದ ಕೈಗಳೇ ಇಲ್ಲ ಎಂದರೆ ತಪ್ಪಾಗಲಾರದು. ಈ ನಡುವೆ ವಿವಿಧ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಸುಧಾರಿತ ಫೀಚರ್ಸ್ ಮೂಲಕ ಹೊಸ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುತ್ತಿದ್ದು, ಯಾವ ಕಂಪೆನಿಗಳು ಅಗ್ರಸ್ಥಾನದಲ್ಲಿವೆ ಎಂಬುದು ನಿಮಗೆ ಗೊತ್ತಾ?
ಹೌದು, ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗ ಹಲವಾರು ಮಾನದಂಡಗಳು ಇರುತ್ತವೆ. ಅದರಲ್ಲಿ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ ಫೀಚರ್ಸ್. ಈ ಎಲ್ಲಾ ಮಾನದಂಡಗಳ ಜೊತೆಗೆ ಯಾವ ಕಂಪೆನಿಯ ಫೋನ್ ಎಂದು. ಅಂದರೆ ವಿವಿಧ ಕಂಪೆನಿಗಳು ತಮ್ಮದೇ ಆದ ಫೋನ್‌ಗಳನ್ನು ಆಗಾಗ್ಗೆ ಲಾಂಚ್ ಮಾಡಿಕೊಂಡು ಬರುತ್ತಿದ್ದು, ಈ ವಿಭಾಗದಲ್ಲಿ ಜನಪ್ರಿಯತೆ ಪಡೆಯಲು ಸದಾ ಹಾತೊರೆಯುತ್ತಿರುತ್ತವೆ. ಅದರಂತೆ ಈಗ ಐದು ಪ್ರಮುಖ ಕಂಪೆನಿಗಳು ಸ್ಮಾರ್ಟ್‌ಫೋನ್ ಜಗತ್ತನ್ನು ಆಳುತ್ತಿವೆ.

ಇನ್ನು ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕುಸಿಯುತ್ತಲೇ ಇದ್ದು, ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್‌ನ ವರದಿಯ ಪ್ರಕಾರ ಮಾರುಕಟ್ಟೆಯು ಸತತ ಎಂಟು ತ್ರೈಮಾಸಿಕಗಳಲ್ಲಿ ಕುಸಿತದ ವರದಿ ಮಾಡಿದೆ. ಈ ನಡುವೆ ಅಂದರೆ 2023 ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್), ಜಾಗತಿಕ ಸ್ಮಾರ್ಟ್‌ಫೋನ್ ಸಾಗಣೆಗಳು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 8% ಮತ್ತು ವರ್ಷದಿಂದ ವರ್ಷಕ್ಕೆ 5% ರಷ್ಟು ಕಡಿಮೆಯಾಗಿದೆ. ಅದಾಗ್ಯೂ ಈ ಕಂಪೆನಿಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿವೆ.
ಸ್ಯಾಮ್‌ಸಂಗ್: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಫೋನ್‌ಗಳು ಇಂದು ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಈ ಕಾರಣಕ್ಕಾಗಿಯೇ ಈಗ ಸ್ಯಾಮ್‌ಸಂಗ್ ಮೊದಲ ಸ್ಥಾನ ಪಡೆದುಕೊಂಡಿದೆ. ಅಂತೆಯೇ ಕಂಪನಿಯು 22% ನಲ್ಲಿ ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದ್ದು, ವಿಶ್ವಾದ್ಯಂತ ಅದರ ಗ್ಯಾಲಕ್ಸಿ ಎ ಸರಣಿಗೆ ಭಾರಿ ಬೇಡಿಕೆ ಇದೆ.
ಎರಡನೇ ಸ್ಥಾನದಲ್ಲಿ ಆಪಲ್: ಆಪಲ್ ಫೋನ್‌ಗಳಿಗೆ ಅಥವಾ ಆಪಲ್‌ನ ಯಾವುದೇ ಡಿವೈಸ್‌ಗಳಿಗೂ ಸಹ ಈ ಕ್ಷಣಕ್ಕೂ ಬೇಡಿಕೆ ಹೆಚ್ಚುತ್ತಲೇ ಇದೆ. ಆದಾಗ್ಯೂ ಆಪಲ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಆದರೂ ಸಹ ಅತ್ಯಧಿಕ Q2 ಮಾರುಕಟ್ಟೆ ಪಾಲನ್ನು ಸಾಧಿಸಿದೆ. 2023 ರ Q2 ರಲ್ಲಿ ಪ್ರೀಮಿಯಂ ವಿಭಾಗವು ಉಲ್ಬಣಗೊಂಡಿದ್ದು, ಒಟ್ಟಾರೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತನ್ನ ಅತಿದೊಡ್ಡ ಕೊಡುಗೆಯನ್ನು ನೀಡಿದೆ. 20% ಕ್ಕಿಂತ ಹೆಚ್ಚು ಮಾರಾಟ ಪ್ರಕ್ರಿಯೆ ನಡೆಸಿದೆ. ಅದರಲ್ಲೂ ಭಾರತದಲ್ಲಿ ಇದೇ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ದೊಡ್ಡ ಬೆಳವಣಿಗೆಯನ್ನು ಸಾಧಿಸುತ್ತಿದೆ.
ಶೀಯೋಮಿ: ಶೀಯೋಮಿ ಭಾರತದಲ್ಲಿ ಈ ಹಿಂದೆ ಅಗ್ರಸ್ಥಾನ ಪಡೆದುಕೊಂಡಿತ್ತು. ಕಾಲಾನಂತರದಲ್ಲಿ ಕೆಲವು ಸಮಸ್ಯೆಗಳಿಂದ ಹಿನ್ನೆಡೆ ಅನುಭವಿಸುತ್ತಿದೆ. ಅದರಲ್ಲೂ ಈಗ ಜಾಗತಿಕವಾಗಿ ಇದು ಮೂರನೇ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಚೀನಾದಲ್ಲೂ ಸಹ ಭಾರೀ ಹಿನ್ನೆಲೆ ಅನುಭವಿಸಿದ ಹಿನ್ನೆಲೆ ಇದೀಗ ಎಚ್ಚೆತ್ತುಕೊಂಡು ಅದರ ಉತ್ಪನ್ನಗಳ ಪೋರ್ಟ್‌ಫೋಲಿಯೊವನ್ನು ರಿಫ್ರೆಶ್ ಮಾಡುವ ಮೂಲಕ ಎಲ್ಲಾ ಕಡೆ ಪಸರಿಸಲು ಮುಂದಾಗಿದೆ.

ಒಪ್ಪೋ: ಒಪ್ಪೋ ಕಂಪೆನಿಗಳ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಈ ನಡುವೆ ಇದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಭಾರತ ಮತ್ತು ಚೀನಾದಲ್ಲಿ ಈ ಫೋನ್‌ಗಳಿಗೆ ದೊಡ್ಡ ಬೇಡಿಕೆ ಇದೆ. ಅದರಂತೆ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಆಗಿರುವ ಈ ಒಪ್ಪೋ ಚೀನಾ ಮತ್ತು ಭಾರತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯಾದರೂ ಪಶ್ಚಿಮ ಯುರೋಪ್‌ನಲ್ಲಿ ನಷ್ಟ ಅನುಭವಿಸಿದೆ.
ವಿವೋ: ಇನ್ನು ಈ ಲಿಸ್ಟ್‌ನಲ್ಲಿ ಕೊನೇ ಸ್ಥಾನ ಪಡೆದುಕೊಂಡಿರುವುದು ವಿವೋ ಸಂಸ್ಥೆ. ಇದು 2022 ರ ಎರಡನೇ ತ್ರೈಮಾಸಿಕದಲ್ಲಿ ದೃಢವಾದ ಕಾರ್ಯಕ್ಷಮತೆಯನ್ನು ಹೊಂದಿತ್ತು. ಆದರೆ ವಿವೋ ಮತ್ತು ಐಕ್ಯೂ ಎರಡೂ ಚೀನಾದಲ್ಲಿ ಗಮನಾರ್ಹ ಬೆಳವಣಿಗೆಯ ಕುಸಿತವನ್ನು ಕಂಡವು. ಇದಕ್ಕೆ ಪ್ರಮುಖ ಕಾರಣ ಇದಕ್ಕೆ ಸ್ಯಾಮ್‌ಸಂಗ್ ಹಾಗೂ ಒಪ್ಪೋ ತೀವ್ರ ಪೈಪೋಟಿ ನೀಡಿವೆ. ಈ ತೀವ್ರ ಸ್ಪರ್ಧೆಯ ಕಾರಣದಿಂದಾಗಿ ಭಾರತ ಮತ್ತು ಆಗ್ನೇಯ ಏಷ್ಯಾದ ಆಫ್‌ಲೈನ್ ಮಾರುಕಟ್ಟೆಗಳಲ್ಲಿ ಸೋಲುವಂತಾಗಿದೆ.
ಇನ್ನು ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ತುಂಬಾ ಭಿನ್ನವಾಗಿದೆ. ಇಲ್ಲಿ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುವ ಜನರಿದ್ದು, ಕೆಲವು ಕಂಪೆನಿಯನ್ನು ಕೆಂದ್ರೀಕರಿಸಿದ್ದರೆ ಇನ್ನೂ ಕೆಲವರು ಬ್ಯಾಟರಿ ಹಾಗೂ ಕ್ಯಾಮೆರಾಗಳಿಗೆ ಮಹತ್ವ ನೀಡುತ್ತಾರೆ, ಇನ್ನೂ ಕೆಲವರು ಅಗ್ಗದ ಬೆಲೆಗೆ ಲಭ್ಯವಾಗುತ್ತಾ ಎನ್ನುವುದನ್ನು ಗಮನಿಸಿತ್ತಾರೆ. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಇರುವ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಭಾರತದತ್ತ ತಿರುಗಿ ನೋಡುತ್ತಿವೆ.


Click it and Unblock the Notifications








