Home
ಸುದ್ದಿಜಾಲ

WhatsApp: ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರವೇ ಈ ಆಕರ್ಷಕ ಫೀಚರ್ಸ್‌ ಲಭ್ಯ!

ಪ್ರಮುಖ ಮೆಸೆಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ನಲ್ಲಿ (WhatsApp) ಆಗಾಗ್ಗೆ ವಿಶೇಷ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದ್ದು, ಈ ನಡುವೆ ಕೆಲವೇ ದಿನಗಳಲ್ಲಿ ಮಗದೊಂದು ಆಕರ್ಷಕ ಫೀಚರ್ಸ್‌ ಈ ಆಪ್‌ಗೆ ಸೇರಲಿದೆ. ಇದು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡಲಿದೆ.

ಹೌದು, ಮೆಸೆಜಿಂಗ್‌ಆಪ್‌ ವಾಟ್ಸಾಪ್‌ನಲ್ಲಿ ಬಳಕೆದಾರರ ಅನುಭವವನ್ನು ಈ ಹೊಸ ಫೀಚರ್ಸ್‌ ಅನ್ನು ನೀಡಲಾಗುತ್ತಿದೆ. WABetaInfo ಪ್ರಕಾರ, ಕಂಪನಿಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಫೀಚರ್ಸ್‌ ಏನೆಂದರೆ ಒಂದು ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿ ಲಾಕ್ ಮಾಡಿದ ಚಾಟ್‌ಗಳು, 1 ನಿಮಿಷದ ಸ್ಟೇಟಸ್ ಅಪ್‌ಡೇಟ್‌, ಹೊಸ ಚಾನಲ್‌ಗಳನ್ನು ಅನ್ವೇಷಿಸಿ, ಅನಿಮೇಟೆಡ್ ಚಿತ್ರ ಮತ್ತು ಗುಪ್ತ ಕಮ್ಯೂನಿಟಿ ಗ್ರೂಪ್‌ ಚಾಟ್‌ಗಳನ್ನು ಅನ್ವೇಷಿಸಿ ಎಂಬ ವಿವಿಧ ಫೀಚರ್ಸ್‌ ಕಾಣಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರೋಣ.

WhatsApp: ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರವೇ ಈ ಆಕರ್ಷಕ ಫೀಚರ್ಸ್‌ ಲಭ್ಯ!

ಈಗಾಗಲೇ ಮೇಲೆ ತಿಳಿಸಿದ ಕೆಲವು ಫೀಚರ್ಸ್‌ಗಳು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ, ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿ ಲಾಕ್ ಮಾಡಿದ ಚಾಟ್‌ ಫೀಚರ್ಸ್‌ ಬಳಕೆದಾರರು ತಮ್ಮ ಲಿಂಕ್ ಮಾಡಿದ ಡಿವೈಸ್‌ಗಳಿಂದ ತಮ್ಮ ಸಂಭಾಷಣೆಗಳನ್ನು ರಕ್ಷಿಸಲು ಅನುಮತಿಸುತ್ತದೆ. ಆದರೆ ಇಲ್ಲಿ ಬಳಕೆದಾರರು ತಮ್ಮ ಲಿಂಕ್ ಮಾಡಲಾದ ಡಿವೈಸ್‌ಗಳಿಂದ ಲಾಕ್ ಆಗಿರುವ ಚಾಟ್‌ಗಳ ಫೋಲ್ಡರ್ ಅನ್ನು ತೆರೆಯಲು ರಹಸ್ಯ ಕೋಡ್ ಅನ್ನು ರಚಿಸುವ ಅಗತ್ಯ ಇದೆ.

ಮತ್ತೊಂದು ಫೀಚರ್ಸ್‌ ಆಗಿರುವ '1 ನಿಮಿಷದ ಸ್ಟೇಟಸ್‌ ಅಪ್‌ಡೇಟ್‌'ನಲ್ಲಿ ಇನ್ಮುಂದೆ ಬಳಕೆದಾರರು 1 ನಿಮಿಷದವರೆಗಿನ ವಿಡಿಯೋವನ್ನು ಶೇರ್‌ ಮಾಡಬಹುದಾಗಿದೆ. ಈ ಹಿಂದೆ 30 ಸೆಕೆಂಡುಗಳ ವಿಡಿಯೋವನ್ನು ಮಾತ್ರ ಶೇರ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಫೀಚರ್ಸ್‌ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದ್ದು, ಮುಂಬರುವ ವಾರಗಳಲ್ಲಿ ಹೆಚ್ಚಿನ ಜನರಿಗೆ ತಲುಪಲಿದೆ ಎಂದು ತಿಳಿದುಬಂದಿದೆ.

WhatsApp: ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರವೇ ಈ ಆಕರ್ಷಕ ಫೀಚರ್ಸ್‌ ಲಭ್ಯ!

ಇನ್ನು ಮಗದೊಂದು ಫೀಚರ್ಸ್‌ ಆಗಿರುವ 'ಹೊಸ ಚಾನಲ್‌ಗಳನ್ನು ಅನ್ವೇಷಿಸಿ' ಫೀಚರ್ಸ್‌ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ. ತ್ವರಿತವಾಗಿ ಗೋಚರಿಸುವ ಮತ್ತು ಪ್ರವೇಶಿಸುವ ಗುರಿಯೊಂದಿಗೆ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತದೆ. ಇದಕ್ಕಾಗಿ ಹೊಸ ಶಾರ್ಟ್‌ಕಟ್ ಅನ್ನು ಸಹ ಕಾಣಬಹುದಾಗಿದೆ. ವರದಿಯ ಪ್ರಕಾರ, ಚಾನಲ್‌ಗಳನ್ನು ಅನ್ವೇಷಿಸುವ ಸಾಮರ್ಥ್ಯವನ್ನು ಹೆಚ್ಚು ಗೋಚರವಾಗುವಂತೆ ಮಾಡುವುದು ಕಂಟೆಂಟ್ ಅನ್ವೇಷಣೆಯೊಂದಿಗೆ ಬಳಕೆದಾರರನ್ನು ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುವ ಪ್ರಯೋಜನವನ್ನು ಈ ಮೂಲಕ ನೀಡಲಾಗುತ್ತಿದೆ.

ಇದರೊಂದಿಗೆ ಕೆಲವೇ ದಿನಗಳಲ್ಲಿ ಆಪ್ ಸೆಟ್ಟಿಂಗ್‌ಗಳಲ್ಲಿಯೇ 'ಅನಿಮೇಟೆಡ್ ಇಮೇಜ್‌ಗಳ ಸ್ವಯಂಪ್ಲೇ' ಅನ್ನು ಕಾಣಬಹುದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಫೀಚರ್ಸ್‌ ಎಮೋಜಿಗಳು, ಸ್ಟಿಕ್ಕರ್‌ಗಳು ಮತ್ತು ಅವತಾರಗಳಿಗಾಗಿ ಎಲ್ಲಾ ಅನಿಮೇಷನ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅವರ ಚಾಟ್ ಅನುಭವದ ಮೇಲೆ ವರ್ಧಿತ ಕಂಟ್ರೋಲ್‌ ಅನ್ನು ನೀಡುತ್ತದೆ. ಪ್ರಸ್ತುತ, ಈ ಫೀಚರ್ಸ್‌ಗಳು ಅಭಿವೃದ್ಧಿ ಹಂತದಲ್ಲಿದ್ದು, ಭವಿಷ್ಯದ ನವೀಕರಣದಲ್ಲಿ ಇವು ಲಭ್ಯ ಇರಲಿವೆ ಎಂದು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ.

WhatsApp: ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರವೇ ಈ ಆಕರ್ಷಕ ಫೀಚರ್ಸ್‌ ಲಭ್ಯ!

ಇದೆಲ್ಲದರ ಜೊತೆಗೆ ವಾಟ್ಸಾಪ್‌ನಲ್ಲಿ ಮಗದೊಂದು ಆಕರ್ಷಕ ಫೀಚರ್ಸ್‌ ಸಹ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಅದುವೇ 'ಕಮ್ಯೂನಿಟಿ ಗ್ರೂಪ್‌ ಚಾಟ್‌ಗಳನ್ನು ಹೈಡ್‌ ಮಾಡುವುದು'. ಇದು ಸಾಕಷ್ಟು ಬಳಕೆದಾರರಿಗೆ ಅಗತ್ಯ ಎನಿಸುವ ಫೀಚರ್ಸ್‌ ಆಗಿದ್ದು, ಮುಂಬರುವ ಅಪ್‌ಡೇಟ್‌ನಲ್ಲಿ ಈ ಫೀಚರ್ಸ್‌ ಸಹ ಬಳಕೆದಾರರಿಗೆ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರು ವಿಶೇಷ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ಬಂಧನ: ವಾಟ್ಸಾಪ್‌ ಕೇವಲ ವಿಶೇಷ ಫೀಚರ್ಸ್‌ನಿಂದ ಮಾತ್ರ ಸದ್ದು ಮಾಡುವುದಲ್ಲದೇ ಜನರು ಬಳಕೆ ಮಾಡುವ ರೀತಿಯಲ್ಲೂ ಸಹ ಇದು ಯಾವಾಗಲೂ ಸುದ್ದಿಯಲ್ಲಿ ಆಗ್ರಸ್ಥಾನದಲ್ಲಿ ಇರುತ್ತದೆ. ಪತ್ನಿಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ಬಂಧನ ಮಾಡಲಾಗಿದ್ದು, ಈ ಘಟನೆ ತೆಲಂಗಾಣದಲ್ಲಿ ನಡೆದಿದೆ. ತನ್ನ ಮೊದಲ ಪತ್ನಿ ಜಾಸ್ಮೀನ್‌ಗೆ ನಿಷೇಧಿತ ತ್ರಿವಳಿ ತಲಾಖ್ ಘೋಷಿಸುವ ವಾಟ್ಸಾಪ್ ವಾಯ್ಸ್‌ ಮೆಸೆಜ್‌ ಅನ್ನು ಕಳುಹಿಸಿದ್ದಕ್ಕಾಗಿ ಅಬ್ದುಲ್ ಅತೀಕ್ ಎಂಬ ವ್ಯಕ್ತಿಯನ್ನು ಮೇ 19 ರ ಬಂಧನ ಮಾಡಲಾಗಿದೆ.

Best Mobiles in India

English summary
These new features are being offered to improve the user experience on the messaging app WhatsApp. According to WABetaInfo these various features will be available in a few days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+