Home
ಸುದ್ದಿಜಾಲ

10 ಸಾವಿರದೊಳಗೆ ಲಭ್ಯ ಈ ಅತ್ಯುತ್ತಮವಾದ ಟ್ರೆಂಡಿಂಗ್‌ ಫೋನ್‌ಗಳು! ಫೀಚರ್ಸ್‌ ಅಂತೂ ಆಕರ್ಷಕ

ಸ್ಮಾರ್ಟ್‌ಫೋನ್‌ಗಳು ಈಗ ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲೂ ಲಭ್ಯ ಇರುತ್ತವೆ. ಈ ಮೂಲಕ ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಈ ನಡುವೆ 10 ಸಾವಿರದೊಳಗೆ ಲಭ್ಯ ಇರುವ ಈ ವಿಶೇಷ ಫೋನ್‌ಗಳು ಎಲ್ಲರ ಗಮನ ಸೆಳೆದಿವೆ.

ಹೌದು, ಅಗ್ಗದ ದರದಲ್ಲಿ ಲಭ್ಯ ಇರುವ ಫೋನ್‌ಗಳನ್ನು ಭಾರತದಲ್ಲಿ ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಅದರಂತೆ ರಿಯಲ್‌ಮಿ, ಇನ್ಫಿನಿಕ್ಸ್‌ ಸೇರಿದಂತೆ ಅನೇಕ ಕಂಪೆನಿಗಳು ಈ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸುತ್ತವೆ. ನೀವೇನಾದರೂ ಈ ವೇಳೆ 10 ಸಾವಿರದೊಳಗೆ ಲಭ್ಯ ಇರುವ ಉತ್ತಮ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದರೆ ಈ ಲೇಖನ ನಿಮಗೆ ಸಹಕಾರಿಯಾಗಲಿದೆ. ಯಾಕೆಂದರೆ ಯಾವ ಫೋನ್‌ ಎಷ್ಟು ಬೆಲೆ ಹೊಂದಿದೆ?, ಫೀಚರ್ಸ್‌ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

10 ಸಾವಿರದೊಳಗೆ ಲಭ್ಯ ಈ ಅತ್ಯುತ್ತಮವಾದ ಟ್ರೆಂಡಿಂಗ್‌ ಫೋನ್‌ಗಳು!

ಪೊಕೊ C55 (4GB RAM 64GB): ಪೊಕೊ ಫೋನ್‌ಗಳು ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವ ಬೀರಿವೆ. ಅದರಲ್ಲೂ ಪೊಕೊ C55 ಫೋನ್‌ನ 4GB RAM 64GB ವೇರಿಯಂಟ್‌ಗೆ 8,443 ರೂ.ಗಳ ಬೆಲೆ ಇದ್ದು, ಈ ಫೋನ್ HD+ ರೆಸಲ್ಯೂಶನ್‌ನೊಂದಿಗೆ 6.71 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದರೊಂದಿಗೆ ಈ ಫೋನ್ 4GB ಅಥವಾ 6GB RAM ಮತ್ತು 64GB ಅಥವಾ 128GB ಯ ಸ್ಟೋರೇಜ್ ಕಾನ್ಫಿಗರೇಶನ್‌ಗಳ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 50MP ಪ್ರಾಥಮಿಕ ಸೆನ್ಸರ್‌ ಅನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದು 10W ಚಾರ್ಜಿಂರ್‌ಗೆ ಬೆಂಬಲ ನೀಡಲಿದೆ. ಈ ಮೂಲಕ ಕಡಿಮೆ ದರದಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ.

ರಿಯಲ್‌ಮಿ C33 (3GB RAM, 32GB) : ಮತ್ತೊಂದು ಫೋನ್‌ನ ವಿಚಾರಕ್ಕೆ ಬಂದರೆ ರಿಯಲ್‌ಮಿ C33 ಫೋನ್ 8,936 ರೂ.ಗಳ ಬೆಲೆಗೆ ಲಭ್ಯ ಇದೆ. ಈ ಫೋನ್ HD+ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್‌ ನೊಂದಿಗೆ 6.2 ಇಂಚಿನ LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಯುನಿಸೊಕ್‌ನ T612 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇಷ್ಟೇ ಅಲ್ಲದೆ ಫೋಟೋಗಳನ್ನು ಸೆರೆಹಿಡಿಯಲು ಅದರ 50MP ಪ್ರಾಥಮಿಕ ಸೆನ್ಸರ್‌ ಆಯ್ಕೆ ಇದರಲ್ಲಿದ್ದು, 5MP ಸೆಲ್ಫಿ ಕ್ಯಾಮೆರಾ ಆಯ್ಕೆ ಸಹ ವಿಶೇಷ ಎನಿಸಿದೆ. ಇದರೊಂದಿಗೆ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಇನ್ಫಿನಿಕ್ಸ್ ಹಾಟ್‌ 30i (4GB RAM, 64GB GBS ): ಇನ್ಫಿನಿಕ್ಸ್ ಹಾಟ್‌ 30i ಫೋನ್‌ ನಿಮಗೆ 7,999 ರೂ.ಗಳಿಗೆ ದೊರೆಯುತ್ತದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 90Hz ರಿಫ್ರೆಶ್ ರೇಟ್ ಇರುವ ಡಿಸ್‌ಪ್ಲೇ ಇದರಲ್ಲಿದ್ದು, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಂಯೋಜಿಸುತ್ತದೆ. ಉಳಿದಂತೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಈ ಫೋನ್‌ ಪ್ಯಾಕ್‌ ಆಗಿದೆ.

ರೆಡ್ಮಿ 9 (4GB RAM, 64GB ): ರೆಡ್ಮಿ ಫೋನ್‌ಗಳು ಸಹ ಅಗ್ಗದ ದರದಲ್ಲಿ ಲಭ್ಯ ಆಗುತ್ತವೆ. ಅದರಂತೆ ರೆಡ್ಮಿ 9 ಫೋನ್‌ನ 4GB RAM, 64GB ವೇರಿಯಂಟ್‌ಗೆ 9,499ರೂ.ಗಳನ್ನು ನಿಗದಿ ಮಾಡಲಾಗಿದ್ದು, ಈ ಫೋನ್ 60Hz IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಮೀಡಿಯಾಟೆಕ್‌ ಹಿಲಿಯೋ G35 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ.

10 ಸಾವಿರದೊಳಗೆ ಲಭ್ಯ ಈ ಅತ್ಯುತ್ತಮವಾದ ಟ್ರೆಂಡಿಂಗ್‌ ಫೋನ್‌ಗಳು!

ರಿಯಲ್‌ಮಿ ನಾರ್ಜೋ N53 (4GB RAM, 64GB): ಈ ಫೋನ್ ಸಹ ನಿಮಗೆ ಹತ್ತುಸಾವಿರ ಒಳಗೆ ಲಭ್ಯ ಇದೆ. ಅಂದರೆ ಇದನ್ನು ನೀವು 8,999ರೂ.ಗಳಿಗೆ ಖರೀದಿ ಮಾಡಬಹುದು. ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಉತ್ತಮ 5G ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಫೋನ್ 8MP ಸೆಲ್ಫಿ ಕ್ಯಾಮೆರಾ ಹಾಗೂ 50MP ರಿಯರ್‌ ಕ್ಯಾಮೆರಾ ಆಯ್ಕೆ ಮೂಲಕ ವಿಶೇಷ ಎನಿಸಿದ್ದು, ಯೂನಿಸೋಕ್ T612 SoC ನಲ್ಲಿ ಕಾರ್ಯನಿರ್ವಹಿಸುತ್ತದೆ.
Best Mobiles in India

English summary
smartphone available at cheap rates are often purchased in India. Accordingly, many companies including Realme, Infinix introduce smartphone at this price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+