Home
ಸುದ್ದಿಜಾಲ

ಈ ಡಿವೈಸ್‌ಗಳಿಂದ ಎಷ್ಟೇ ಮೈ-ಕೈ ನೋವಿದ್ದರೂ ಸಿಗಲಿದೆ ಮುಕ್ತಿ... ಬೆಲೆ ಬಗ್ಗೆ ಚಿಂತೆಯೇ ಬೇಡ

ಜೀವನ ನಿರ್ವಹಣೆಗೆ ಕೆಲಸ ಪ್ರತಿಯೊಬ್ಬರಿಗೂ ಅನಿವಾರ್ಯ. ಕೆಲಸಕ್ಕಾಗಿ ಜನರು ಎಲ್ಲೆಲ್ಲಿಂದಲೋ ನಗರ ಹಾಗೂ ಮಹಾನಗರಗಳ ಕಡೆ ಮುಖ ಮಾಡುತ್ತಾರೆ. ಈ ನಡುವೆ ಹಲವರಿಗೆ ಕೆಲಸ ಸುಲಭವಿರಬಹುದೇನೋ. ಆದರೆ, ಕೆಲಸಕ್ಕಾಗಿ ಹೋಗುವ ಹಾಗೂ ಬರುವ ಸಮಯ ಮಾತ್ರ ಬಹಳ ಕಷ್ಟಕರವಾಗಿರಲಿದೆ. ಇದರಿಂದಾಗಿ ಮನೆಗೆ ಹೋದ ತಕ್ಷಣ ಹಾಸಿಗೆ ಮೇಲೆ ದುಪ್ಪನೆ ಬೀಳುವಷ್ಟು ಮೈ-ಕೈ ನೋವು (body pain) ಬಂದಿರುತ್ತವೆ.

ಹೌದು, ಅನೇಕ ನಗರಗಳಲ್ಲಿ ಸಂಚಾರ ಮಾಡುವುದೇ ಒಂದು ದೊಡ್ಡ ತ್ರಾಸದಾಯಕ ಕೆಲಸವಾಗಿದೆ. ಇದರಿಂದಾಗಿಯೇ ಉದ್ಯೋಗಿಗಳು ಮೈ-ಕೈ ನೋವಿನಿಂದ ಬಳಲುತ್ತಾರೆ. ಇನ್ನೂ ಕೆಲವರು ಹೆಚ್ಚಿನ ದೈಹಿಕ ಕೆಲಸಗಳನ್ನು ಮಾಡುವುದರಿಂದ ಬಳಲುತ್ತಾರೆ. ಆದರೆ, ಇನ್ಮುಂದೆ ಮೈ-ಕೈ ನೋವು ಎಂದು ನರಳುತ್ತಾ ಇರಬೇಡಿ. ಅದರ ಬದಲಾಗಿ ಈ ಚಿಕ್ಕ ಡಿವೈಸ್‌ಗಳನ್ನು ಖರೀದಿ ಮಾಡಿ. ಹಾಗಿದ್ರೆ, ಯಾವುವು ಈ ಡಿವೈಸ್‌?, ಇವುಗಳಿಂದ ಮೈ-ಕೈ ನೋವಿನ ನಿವಾರಣೆ ಹೇಗೆ?, ಬೆಲೆ ಎಷ್ಟು ಎಂದು ತಿಳಿಯೋಣ ಬನ್ನಿ.

ಈ ಡಿವೈಸ್‌ಗಳಿಂದ ಎಷ್ಟೇ ಮೈ-ಕೈ ನೋವಿದ್ದರೂ ಸಿಗಲಿದೆ ಮುಕ್ತಿ...

ಅಗ್ಗದ ದರದಲ್ಲಿ ಲಭ್ಯ ಈ ಬಾಡಿ ಮಸಾಜ್‌ ಡಿವೈಸ್‌ಗಳು: ಬಾಡಿ ಮಸಾಜ್‌ಡಿವೈಸ್‌ಗಳು(Body Massager device) ಇಂದಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಲ್ಲೂ ಪ್ರಮುಖ ಕಂಪೆನಿಗಳು ಸುಧಾರಿತ ಫೀಚರ್ಸ್‌ ಆಯ್ಕೆಯೊಂದಿಗೆ ಈ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ಮೂಲಕ ಗ್ರಾಹಕರು ತಮ್ಮ ನೋವಿಗೆ ಮುಕ್ತಿ ಹಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇವು ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಕೈಗೆಟಕುವ ದರದಲ್ಲಿ ಇವು ಲಭ್ಯ ಆಗುತ್ತಿವೆ.

ಬೀಟ್‌ಎಕ್ಸ್‌ಪಿ, ಅಗಾರೊ ಮತ್ತು ಸೋರ್ಬಸ್, ಜೆಎಸ್‌ಬಿ ಸೇರಿದಂತೆ ಅನೇಕ ಕಂಪೆನಿಗಳ ಬಾಡಿ ಮಸಾಜ್‌ಗಳು ಅಮೆಜಾನ್‌ನಲ್ಲಿ ಅತ್ಯಂತ ಅಗ್ಗದ ದರದಲ್ಲಿ ಕಾಣಿಸಿಕೊಂಡಿವೆ. ಈ ಎಲೆಕ್ಟ್ರಿಕ್ ಮಸಾಜ್‌ ಡಿವೈಸ್‌ಗಳು ಸ್ನಾಯುಗಳು ಮತ್ತು ದೇಹದ ನೋವುಗಳಿಗೆ ತ್ವರಿತ ಪರಿಹಾರವನ್ನು ನೀಡುತ್ತವೆ. ಈ ಮೂಲಕ ತಕ್ಷಣವೇ ವಿಶ್ರಾಂತಿ ಸಿಗಲಿದ್ದು, ಉತ್ತಮ ನಿದ್ದೆಗೂ ಇವು ಸಹಕಾರಿಯಾಗಲಿವೆ.

ಬಾಡಿ ಮಸಾಜರ್‌ ಬಳಕೆ ಮಾಡಲು ಯಾರ ಸಹಾಯವೂ ಬೇಡ: ಈ ಡಿವೈಸ್‌ಗಳನ್ನು ಬಳಕೆ ಮಾಡಲು ನಿಮಗೆ ಯಾರ ಸಹಾಯವೂ ಸಹ ಬೇಕಿಲ್ಲ. ನೀವೇ ಅದನ್ನು ಬೇಕಾದಾಗ ಸುಲಭವಾಗಿ ಬಳಸಬಹುದಾಗಿದೆ. ಅದರಲ್ಲೂ ಇವು ಪೋರ್ಟಬಲ್‌ ಆಗಿರುತ್ತದೆ. ಮನೆಯಲ್ಲಿಈ ಒಂದು ಡಿವೈಸ್‌ ಇದ್ದರೆ ಸಾಕು ಮಕ್ಕಳಿಂದ ಹಿರಿಯರ ವರೆಗೂ ಬಳಕೆ ಮಾಡಬಹುದಾಗಿದೆ.

ಇನ್ನು ಗನ್ ಮಸಾಜ್, ಬಾಡಿ ಮಸಾಜ್, ಬೆನ್ನು ನೋವು ಮಸಾಜ್, ನೋವು ನಿವಾರಕ ಮಸಾಜ್ ಸೇರಿದಂತೆ ಅನೇಕ ಮಸಾಜ್‌ ಡಿವೈಸ್‌ಗಳ ಆಯ್ಕೆಗಳಿದ್ದು, ಪ್ರತಿ ಡಿವೈಸ್‌ಗಳು ಸಹ ವಿಭಿನ್ನ ಫೀಚರ್ಸ್‌ ಹೊಂದಿದ್ದು, ಗ್ರಾಹಕರು ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಬನ್ನಿ ನಾವಿಲ್ಲಿ ಕೆಲವು ಡಿವೈಸ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ತಿಳಿದುಕೊಳ್ಳಿ.

ಅಗಾರೊ ಆಟಮ್ ಎಲೆಕ್ಟ್ರಿಕ್ ಮಸಾಜರ್: ಈ ಮಸಾಜರ್‌ ಅನ್ನು ನೀವು ಕೇವಲ 845ರೂ.ಗಳಿಗೆ ಅಮೆಜಾನ್‌ನಲ್ಲಿ (Amazon) ಖರೀದಿ ಮಾಡಬಹುದು. ಅಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ ಹಾಗೂ ಇತರೆ ಆಫರ್‌ ಸಹ ಇದೆ. ಇದರಿಂದಾಗಿ ಇನ್ನೂ ಕಡಿಮೆ ಬೆಲೆಗೆ ಈ ಡಿವೈಸ್‌ ಲಭ್ಯ ಇರಲಿದೆ. ಈ ಡಿವೈಸ್‌ ನಿಮ್ಮ ಬೆನ್ನು, ಭುಜಗಳು, ತೊಡೆಗಳು ಮತ್ತು ಪಾದಗಳನ್ನು ಮಸಾಜ್ ಮಾಡಲಿದೆ. ಖರೀದಿ ಮೇಲೆ ಒಂದು ವರ್ಷದ ವಾರಂಟಿ ಇದೆ.

ಬೀಟ್‌ಎಕ್ಸ್‌ಪಿ ಬೋಲ್ಟ್ ಡೀಪ್ ಟಿಶ್ಯೂ ಮಸಾಜರ್: ಈ ಮಸಾಜ್ ಡಿವೈಸ್‌ ಅನ್ನು ಅಮೆಜಾನ್‌ ಮೂಲಕ 1,499 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಮಸಾಜರ್‌ ಸಹಾಯದಿಂದ ದೇಹದ ಕೀಲುಗಳು, ಎದೆ ಮತ್ತು ಭುಜಗಳನ್ನು ಸುಲಭವಾಗಿ ಮಸಾಜ್ ಮಾಡಿಕೊಳ್ಳಬಹುದು. ಇದು ಎಂಥಹುದೇ ನೋವನ್ನು ಸುಲಭವಾಗಿ ಶಮನ ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ.

ಸೋರ್ಬಸ್ ಬಾಡಿ ಮಸಾಜರ್: ಇನ್ನು ಮತ್ತೊಂದು ಡಿವೈಸ್‌ ಸೋರ್ಬಸ್ ಬಾಡಿ ಮಸಾಜರ್ ನಿಮಗೆ ಕೇವಲ 249ರೂ.ಗಳಿಗೆ ಲಭ್ಯ ಇದೆ. ಇದರ ಸಾಮಾನ್ಯ ದರ 999ರೂ.ಆಗಿದೆ. ಇದು 8 ಮೋಡ್‌ಗಳು ಮತ್ತು 19 ಸ್ಟ್ರೆಂಥ್‌ ಲೆವೆಲ್‌ ಆಯ್ಕೆಯೊಂದಿಗೆ ವೈರ್‌ಲೆಸ್‌ ಪೋರ್ಟಬಲ್ ಆಗಿದೆ. ಇದು ಭುಜ, ತೋಳುಗಳು, ಕಾಲುಗಳ ನೋವಿಗೆ ಮುಕ್ತಿ ನೀಡಲಿದೆ.

ಈ ಡಿವೈಸ್‌ಗಳಿಂದ ಎಷ್ಟೇ ಮೈ-ಕೈ ನೋವಿದ್ದರೂ ಸಿಗಲಿದೆ ಮುಕ್ತಿ...

ಎಸ್‌ಬಿ HF103 ಐ ಮಸಾಜರ್ : ಇನ್ನು ಮತ್ತೊಂದು ಡಿವೈಸ್‌ ಬಗ್ಗೆ ಹೇಳುವುದಾದರೆ ಈ ಎಸ್‌ಬಿ HF103 ಐ ಮಸಾಜರ್‌ ಬೆಲೆಯಲ್ಲಿ ಕೊಂಚ ಹೆಚ್ಚು ಎಂದೇ ಹೇಳಬಹುದು. ಅಂದರೆ ಇದು ಅಮೆಜಾನ್‌ನಲ್ಲಿ 8,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 53% ಡಿಸ್ಕೌಂಟ್‌ ಪಡೆಯುವ ಮೂಲಕ 4,269ರೂ.ಗಳಿಗೆ ಕಾಣಿಸಿಕೊಂಡಿದೆ. ಈ ಡಿವೈಸ್ ಮೂಕ ನಿಮ್ಮ ಕಣ್ಣುಗಳನ್ನು ಮಸಾಜ್ ಮಾಡಿಕೊಳ್ಳಬಹುದು.

Best Mobiles in India

English summary
Body massager devices are getting more popular these days. Especially, leading companies are unveiling these devices with advanced feature selection, through which customers are getting relief from their pain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+