Software update: ಸಾಫ್ಟ್‌ವೇರ್ ಅಪ್‌ಡೇಟ್ ವಿಷಯದಲ್ಲಿ ಈ ಮೂರು ಬ್ರ್ಯಾಂಡ್‌ಗಳೇ ಟಾಪ್!
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ (Software update) ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಇತ್ತೀಚೆಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಇತರೆ ಫೀಚರ್ಸ್ ಆಯ್ಕೆಯ ಜೊತೆಗೆ ಇಂತಿಷ್ಟು ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆಯನ್ನೂ ನೀಡುವ ಮೂಲಕ ಜನರನ್ನು ಆಕರ್ಷಿಸುತ್ತಿವೆ.
ಹೌದು, ಸಾಫ್ಟ್‌ವೇರ್ ಅಪ್‌ಡೇಟ್ ಅನ್ನೋ ವಿಚಾರ ಈಗ ಮುನ್ನೆಯಲ್ಲಿದೆ. ಸ್ಮಾರ್ಟ್‌ಫೋನ್ ಟ್ರೆಂಡ್‌ಗಳಲ್ಲಿ ಇದೂ ಸಹ ಪ್ರಮುಖವಾಗಿದ್ದು, ಬಳಕೆದಾರರಿಗೆ ದೀರ್ಘಾವಧಿಯ ಸಾಫ್ಟ್‌ವೇರ್ ಅಪ್‌ಡೇಟ್ ಪ್ರಯೋಜನ ನೀಡಲಾಗುತ್ತಿದೆ. ಈ ವಿಷಯದಲ್ಲಿ ಈವರೆಗೆ ಆಪಲ್ ಮತ್ತು ಗೂಗಲ್ ಪ್ರಮುಖ ಸ್ಥಾನದಲ್ಲಿದ್ದವು. ಆದರೆ, ಇದ್ದಕ್ಕಿದ್ದಂತೆ ಸ್ಯಾಮ್‌ಸಂಗ್ ಐದು ವರ್ಷಗಳ ನವೀಕರಣದ ಆಯ್ಕೆ ನೀಡುವ ಮೂಲಕ ದೊಡ್ಡ ಸಂಚಲನವನ್ನೇ ಉಂಟು ಮಾಡಿಬಿಟ್ಟಿತು. ಹೀಗಂದ ಮಾತ್ರಕ್ಕೆ ಸ್ಯಾಮ್‌ಸಂಗ್ ಟಾಪ್ ಸ್ಥಾನದಲ್ಲಿದೆ ಎಂದುಕೊಳ್ಳಬೇಡಿ. ಹಾಗಿದ್ರೆ, ಈ ವಿಭಾಗದಲ್ಲಿ ಯಾರು ಟಾಪ್?, ಯಾವುವು ಆ ಮೂರು ಪ್ರಮುಖ ಬ್ರ್ಯಾಂಡ್‌ಗಳು ಅನ್ನೋ ವಿವರ ಇಲ್ಲಿದೆ ನೋಡಿ.

ಸಾಫ್ಟ್‌ವೇರ್ ಅಪ್‌ಡೇಟ್: ಮುಂದಿನ ವರ್ಷಗಳಲ್ಲಿ ಈ ದೀರ್ಘಕಾಲದವರೆಗೆ ಸಾಫ್ಟ್‌ವೇರ್ ನವೀಕರಣಗಳನ್ನು ಸ್ಮಾರ್ಟ್‌ಫೋನ್‌ಗಳು ಪಡೆಯುವುದು ಖಂಡಿತಾ ಸಾಮಾನ್ಯವಾದ ವಿಷಯವಾಗಿರಲಿದೆ. ಆದರೆ ಸದ್ಯಕ್ಕೆ ಇದು ಅಸಾಮಾನ್ಯ ವಿಷಯ. ಇದೀಗ ಗೂಗಲ್ ಮತ್ತು ಸ್ಯಾಮ್‌ಸಂಗ್ ಎರಡೂ ಬರೋಬ್ಬರಿ ಏಳು ವರ್ಷಗಳ ನವೀಕರಣದ ಭರವಸೆ ನೀಡುತ್ತಿವೆ. ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಆಂಡ್ರಾಯ್ಡ್ ಅಥಾರಿಟಿ (Android Authority) ಸಮೀಕ್ಷೆಯೊಂದನ್ನು ನಡೆಸಿದ್ದು, ಅಚ್ಚರಿ ವಿಷಯವನ್ನು ಕಂಡುಕೊಂಡಿದೆ. ಈ ಸಮೀಕ್ಷೆಗಾಗಿ 3,000 ಕ್ಕೂ ಹೆಚ್ಚು ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಸಾಫ್ಟ್‌ವೇರ್ ಅಪ್‌ಟೇಟ್ ವಿಷಯದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್‌ಗಳು
ಗೂಗಲ್: ಗೂಗಲ್ (Google) ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಗೂಗಲ್ ಜಾಗತಿಕವಾಗಿ ಹೆಚ್ಚು ಜನಪ್ರಿಯ ಆಂಡ್ರಾಯ್ಡ್ ಫೋನ್ ತಯಾರಕರಾಗಿಲ್ಲದಿದ್ದರೂ ಸಹ ಸಮೀಕ್ಷೆಯಲ್ಲಿ ಭಾಗಿಯಾದವರು ಸಾಫ್ಟ್‌ವೇರ್ ಅಪ್‌ಡೇಟ್ ಹಿನ್ನೆಲೆ ಹೆಚ್ಚು ನಂಬುವ ಬ್ರ್ಯಾಂಡ್ ಎಂದು ಮತ ಹಾಕಿದ್ದಾರೆ. 3,067 ಮತಗಳಲ್ಲಿ ಮೂರನೇ ಒಂದು ಭಾಗದಷ್ಟು ಮತಗಳು ಪಿಕ್ಸೆಲ್ ಫೋನ್‌ಗಳಿಗೆ ಬಿದ್ದಿವೆಯಂತೆ. ಇನ್ನು ಗೂಗಲ್ ತನ್ನ ಪಿಕ್ಸೆಲ್ 8 ಫೋನ್‌ಗಳಿಗಾಗಿ (Pixel 8 phone) ಇದೀಗ ಏಳು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ನೀಡುತ್ತದೆ.

ಸ್ಯಾಮ್‌ಸಂಗ್: ಎರಡನೇ ಸ್ಥಾನವನ್ನು ಸ್ಯಾಮ್‌ಸಂಗ್‌ಗೆ (Samsung) ನೀಡಲಾಗಿದೆ. ಯಾಕೆಂದರೆ 26.06% ಓದುಗರು ಗ್ಯಾಲಕ್ಸಿಗೆ ಮತ ಹಾಕಿದ್ದಾರೆ. ಈ ಮೂಲಕ ಅಪ್‌ಡೇಟ್‌ಗಾಗಿ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ತಯಾರಕ ಎಂದು ತಿಳಿಸಿದ್ದಾರೆ. ಸ್ಯಾಮ್‌ಸಂಗ್ 2022 ರಲ್ಲಿ ಅಪ್‌ಡೇಟ್ ಗ್ಯಾಲಕ್ಸಿ ಎಸ್ 24 ಸರಣಿಯ (Galaxy S24 series) ಮೂಲಕ ಏಳು ವರ್ಷಗಳ ಅಪ್‌ಡೇಟ್ ಅನ್ನು ಘೋಷಣೆ ಮಾಡಿದೆ.
ಆಪಲ್: ಈ ಸಮೀಕ್ಷೆಯಲ್ಲಿ ಆಪಲ್ (Apple) ಮೂರನೇ ಸ್ಥಾನ ಪಡೆದುಕೊಂಡಿದೆ. ಅಂದರೆ 11.99% ಮತಗಳೊಂದಿಗೆ ಈ ಫಲಿತಾಂಶ ಹೊರಬಿದ್ದಿದೆ. 10 ಪ್ರತಿಸ್ಪಂದಕರಲ್ಲಿ ಒಬ್ಬರು ಅಪ್‌ಡೇಟ್ ಸಂಬಂಧ ಆಪಲ್ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂದು ತಿಳಿಸಿದ್ದಾರೆ. ದೀರ್ಘಾವಧಿಯ ಅಪ್‌ಡೇಟ್ ವಿಷಯದಲ್ಲಿ ಆಪಲ್ ಸಾಮಾನ್ಯವಾಗಿ ನಿರ್ದಿಷ್ಟ ಭರವಸೆಯನ್ನು ನೀಡುವುದಿಲ್ಲ. ಆದರೂ ಐದು ಅಥವಾ ಆರು ವರ್ಷಗಳ ನವೀಕರಣಗಳನ್ನು ಇದರಲ್ಲಿ ನಿರೀಕ್ಷೆ ಮಾಡಬಹುದಾಗಿದೆ.
ಹಾಗಿದ್ರೆ ಇತರೆ ಬ್ರ್ಯಾಂಡ್‌ಗಳ ಕಥೆ ಏನು ಎಂದು ನೀವು ಕೇಳಬಹುದು. ಈ ಸಮೀಕ್ಷೆಯಲ್ಲಿ ಇತರೆ ಬ್ರ್ಯಾಂಡ್‌ಗಳಿಗೂ ಸಹ ಮತಹಾಕಲಾಗಿದೆ. ಆದರೆ,ಹೇಳಿಕೊಳ್ಳುವಷ್ಟು ಮತ ಬಿದ್ದಿಲ್ಲ. ಅಂದರೆ ಮೊಟೊರೊಲಾ ಹಾಗೂ ಶಿಯೋಮಿ (Motorola and Xiaomi) 100 ಕ್ಕೂ ಕಡಿಮೆ ಮತಗಳನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಪಡೆದುಕೊಂಡಿವೆ.

ಆದರೆ ಆಂಡ್ರಾಯ್ಡ್ ಅಥಾರಿಟಿ ಇತರೆ ಎಂಬ ಆಯ್ಕೆಯನ್ನೂ ಸಹ ನೀಡಿದ್ದು, ಅಲ್ಲಿಗೆ 108 ಮತಗಳನ್ನು ಹಾಕಲಾಗಿದೆ. ಆದರೆ ಅಲ್ಲಿ ಯಾವ ಬ್ರ್ಯಾಂಡ್ ಹೆಸರನ್ನೂ ಸಹ ಉಲ್ಲೇಖ ಮಾಡಿಲ್ಲ. ಉಳಿದಂತೆ ಕಡಿಮೆ ಜನಪ್ರಿಯ ಬ್ರ್ಯಾಂಡ್‌ಗಳಾದ ಹೆಚ್‌ಎಮ್‌ಡಿ 19 ಮತಗಳು, ರಿಯಲ್‌ಮಿ 30 ಮತಗಳು ಫೈರ್‌ಫೋನ್ 36 ಮತಗಳನ್ನು ಪಡೆದುಕೊಂಡಿವೆ.


Click it and Unblock the Notifications








