BSNL ಮತ್ತು JIO ಗ್ರಾಹಕರೇ ಗಮನಿಸಿ; ಈ ಪ್ಲ್ಯಾನ್‌ಗಳಲ್ಲಿ ವರ್ಷಪೂರ್ತಿ ಡೇಟಾ ಚಿಂತೆ ಇರಲ್ಲ!
ಜಿಯೋ ಟೆಲಿಕಾಂ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಹಾಗೆಯೇ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಹ ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರನ್ನು ಸೆಳೆಯುತ್ತ ಮುನ್ನಡೆದಿದೆ. ಈ ಎರಡು ಟೆಲಿಕಾಂಗಳ ಕೆಲವೊಂದು ಯೋಜನೆಗಳು ಗ್ರಾಹಕರಿಗೆ ಭರಪೂರ ಪ್ರಯೋಜನಗಳನ್ನು ಒದಗಿಸುತ್ತವೆ. ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೆಯೇ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯಗಳನ್ನು ಒಳಗೊಂಡಿವೆ. ಆ ಪೈಕಿ ವಾರ್ಷಿಕ ಯೋಜನೆಗಳು ಗ್ರಾಹಕರ ಹುಬ್ಬೇರಿಸುವಂತೆ ಮಾಡಿವೆ.

ಹೌದು, ಜಿಯೋ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂಗಳು ವಾರ್ಷಿಕ ಯೋಜನೆಯ ಆಯ್ಕೆಗಳನ್ನು ಹೊಂದಿವೆ. ಅವುಗಳಲ್ಲಿ ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂನ 2399ರೂ. ಯೋಜನೆಗಳು ಆಕರ್ಷಕ ಪ್ರಯೋಜನಗಳಿಂದ ಗ್ರಾಹಕರನ್ನು ಸೆಳೆದಿವೆ. ಈ ಎರಡು ಯೋಜನೆಗಳು ಪ್ರತಿದಿನ ಡೇಟಾ, ಬಿಗ್ ವ್ಯಾಲಿಡಿಟಿ, ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಪಡೆದಿದೆ. ಹಾಗಾದರೇ ಜಿಯೋ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂಗಳ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಉತ್ತಮವೇ?..ವಾರ್ಷಿಕ ಯೋಜನೆಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 3,499ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 1095 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಬಿಎಸ್‌ಎನ್‌ಎಲ್ 2,399ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್ ಟ್ಯೂನ್ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಜಿಯೋ 2,399ರೂ. ಪ್ರೀಪೇಯ್ಡ್ ಪ್ಲ್ಯಾನ್ ಸೌಲಭ್ಯಗಳು
ರಿಲಾಯನ್ಸ್ ಜಿಯೋ ಟೆಲಿಕಾಂನ 2399ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್ 1212ರೂ. ಪ್ರೀಪೇಯ್ಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್ 1212ರೂ. ಪ್ರೀಪೇಯ್ಡ್ ಪ್ಲ್ಯಾನ್ ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

ಜಿಯೋ 2599ರೂ. ವಾರ್ಷಿಕ ಪ್ರೀಪೇಯ್ಡ್ ಯೋಜನೆ
ಜಿಯೋದ 2,599ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ವಿ ಟೆಲಿಕಾಂ ಟೆಲಿಕಾಂನ ಬಳಕೆದಾರರೇ ಇಲ್ಲಿವೇ ನೋಡಿ ವಾರ್ಷಿಕ ಯೋಜನೆಗಳು:
ವಿ ಟೆಲಿಕಾಂ ಮೂರು ಪ್ರಿಪೇಯ್ಡ್ ಆಕರ್ಷಕ ದೀರ್ಘಾವಧಿಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಅವುಗಳ ಕ್ರಮವಾಗಿ 2,595ರೂ. 2399ರೂ ಮತ್ತು 1499ರೂ. ಆಗಿದೆ. ಅವುಗಳಲ್ಲಿ 2,595ರೂ.ಯೋಜನೆಯು 1.5GB ದೈನಂದಿನ ಡೇಟಾದ ಜೊತೆ 365 ದಿನಗಳ ಮಾನ್ಯತೆ ಪಡೆದಿದೆ ಜೊತೆಗೆ ಹಾಟ್‌ಸ್ಟಾರ್ ಆಪ್ ಸೇವೆ ಲಭ್ಯ. ಹಾಗೆಯೇ 2,399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾವನ್ನು ಸೌಲಭ್ಯ ನೀಡುತ್ತದೆ ಇದರೊಂದಿಗೆ ಜೀ5 ಆಪ್ ಆಕ್ಸಸ್ ಸಿಗಲಿದೆ. ಇನ್ನು ಈ ಎರಡೂ ಯೋಜನೆಗಳು ‘ವೀಕೆಂಡ್ ಡಾಟಾ ರೋಲ್‌ಓವರ್' ಪ್ರಯೋಜನ ಒಳಗೊಂಡಿದೆ. 1499ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪಡೆದಿದೆ.

ಭಾರ್ತಿ ಏರ್‌ಟೆಲ್ ಚಂದಾದಾರರೇ ಈ ವಾರ್ಷಿಕ ಪ್ಲ್ಯಾನ್ ಗಮನಿಸಿ:
ಏರ್‌ಟೆಲ್ ಟೆಲಿಕಾಂನಲ್ಲಿ 2,498ರೂ. 2698ರೂ ಮತ್ತು 1,498ರೂ. ಯೋಜನೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಹೆಚ್ಚು ಗಮನ ಸೆಳೆದಿವೆ. ಏರ್‌ಟೆಲ್ 2,498ರೂ. ಯೋಜನೆಯು 365 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ಪಡೆದಿದೆ. ಹಾಗೆಯೇ 1,498ರೂ.ಗಳ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಒಟ್ಟು 24GB ಡೇಟಾವನ್ನು ಹೊಂದಿದೆ. ಈ ಎರಡೂ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಲಾಭದೊಂದಿಗೆ ಬರುತ್ತವೆ. ಇನ್ನು 2698ರೂ. ಯೋಜನೆಯು ಸಹ 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್ ಆಪ್ ಸೇವೆ ಲಭ್ಯ.


Click it and Unblock the Notifications








