Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ ಈ ಎರಡು ಅಗ್ಗದ ಪ್ಲ್ಯಾನ್‌ಗಳಲ್ಲಿ ಭರ್ಜರಿ ಡೇಟಾ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂ ಅಗ್ಗದ ಪ್ರೈಸ್‌ನಿಂದ ಹೈ ಎಂಡ್‌ ಪ್ರೈಸ್‌ನ ಬೆಲೆಯ ವರೆಗೂ ಹಲವು ಭಿನ್ನ ಪ್ರಿಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಆ ಪೈಕಿ ಬಿಎಸ್‌ಎನ್‌ಎಲ್‌ ತನ್ನ ಎರಡು ಅತೀ ಅಗ್ಗದ ರೀಚಾರ್ಜ್ ಯೋಜನೆಗಳಲ್ಲಿ ಭರ್ಜರಿ ಡೇಟಾ ಪ್ರಯೋಜನದ ಕೊಡುಗೆಯನ್ನು ನೀಡಿ ಗ್ರಾಹಕರನ್ನು ಸೆಳೆದಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯ 50ರೂ. ಒಳಗಿನ ಎರಡು ರೀಚಾರ್ಜ್‌ ಯೋಜನೆಗಳಲ್ಲಿ ಆಕರ್ಷಕ ಡೇಟಾ ಪ್ರಯೋಜನ ಸಿಗಲಿದೆ. ಅವುಗಳು ಕ್ರಮವಾಗಿ ಬಿಎಸ್‌ಎನ್‌ಎಲ್‌ 18ರೂ ಮತ್ತು ಬಿಎಸ್‌ಎನ್‌ಎಲ್‌ 29ರೂ. ಆಗಿದೆ. ಈ ಎರಡು ಯೋಜನೆಗಳು ಸಿಮೀತ ಅವಧಿಯ ವ್ಯಾಲಿಡಿಟಿ ಅನ್ನು ಪಡೆದಿದ್ದು, ಡೇಟಾ ಸೌಲಭ್ಯದ ಜೊತೆಗೆ ಇತರೆ ಪ್ರಯೋಜನಗಳನ್ನು ಒಳಗೊಂಡ ಯೋಜನೆಗಳಾಗಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ 18ರೂ ಮತ್ತು ಬಿಎಸ್‌ಎನ್‌ಎಲ್‌ 29ರೂ. ರೀಚಾರ್ಜ್ ಯೋಜನೆಗಳ ಪ್ರಯೋಜನಗಳೇನು ಹಾಗೂ ಇತರೆ ಯೋಜನೆಗಳ ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 18ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 18ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ತನ್ನ ಅಗ್ಗದ 18ರೂ. ಯೋಜನೆಯಲ್ಲಿ 2 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ನೀಡುತ್ತದೆ. ಇದರರ್ಥ ಬಳಕೆದಾರರು ಈ ಯೋಜನೆ ಮತ್ತು ಅದರ ಪ್ರಯೋಜನಗಳನ್ನು ಬಳಸಲು ಪ್ರತಿ ದಿನ ಸುಮಾರು 9 ರೂ. ಖರ್ಚು ತಗಲುತ್ತದೆ. ಬಳಕೆದಾರರು ಅನಿಯಮಿತ ವಾಯಿಸ್ ಕರೆ ಮತ್ತು ವೀಡಿಯೊ ಕರೆಗಳೊಂದಿಗೆ 1GB ದೈನಂದಿನ ಡೇಟಾವನ್ನು (ಒಟ್ಟು ಮಾನ್ಯತೆಯ ಪ್ರಕಾರ 2GB) ಪಡೆಯುತ್ತಾರೆ. ದಿನದ ನ್ಯಾಯೋಚಿತ ಬಳಕೆ ನೀತಿ (FUP) ಡೇಟಾ ಬಳಕೆ ಮಾಡಿದ ನಂತರ, ಇಂಟರ್ನೆಟ್ ವೇಗವು 80 Kbps ಗೆ ತಗ್ಗುತ್ತದೆ.

ಬಿಎಸ್‌ಎನ್‌ಎಲ್‌ 29ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 29ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 29ರೂ. ಯೋಜನೆಯು ಒಟ್ಟು 5 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಒಳಗೊಂಡಿದೆ. ಈ ಯೋಜನೆಯು ದೈನಂದಿನ ಡೇಟಾವನ್ನು ನೀಡುವುದಿಲ್ಲ. ಆದರೆ ಬಳಕೆದಾರರು ಒಟ್ಟು 1GB ಡೇಟಾ ಪ್ರಯೋಜನದ ಜೊತೆಗೆ ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳನ್ನು ಪಡೆಯುತ್ತಾರೆ. ತಮ್ಮ ಸಿಮ್ ಅನ್ನು ಸಕ್ರಿಯವಾಗಿಡಲು ಬಯಸುವ ಜನರಿಗೆ ಇದು ಸೂಕ್ತವಾದ ಯೋಜನೆಯಾಗಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಇತರೆ ಅಗ್ಗದ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಬಿಎಸ್‌ಎನ್‌ಎಲ್‌ 184ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 184ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 184ರೂ. ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ Lystn ಪಾಡ್‌ಕ್ಯಾಸ್ಟ್‌ನ ಹೆಚ್ಚುವರಿ ಸಿಗಲಿದೆ.

ಬಿಎಸ್‌ಎನ್‌ಎಲ್‌ 185ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 185ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 185ರೂ. ಯೋಜನೆಯು ಸಹ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಗ್ರಾಹಕರು M/S ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್‌ ಟ್ಯೂನ್ಸ್‌ನಿಂದ ಪ್ರೋಗ್ರೆಸ್ಸಿವ್ ವೆಬ್ APP (PWA) ನಲ್ಲಿ ಸವಾಲುಗಳ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಪಡೆಯುತ್ತಾರೆ.

ಬಿಎಸ್‌ಎನ್‌ಎಲ್‌ 186ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 186ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 186ರೂ. ಯೋಜನೆಯು ಸಹ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 1GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಹಾರ್ಡಿ ಗೇಮ್ಸ್ ಮತ್ತು BSNL ಟ್ಯೂನ್‌ಗಳ ಹೆಚ್ಚುವರಿ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 347ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ 347ರೂ. ಯೋಜನೆಯ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ ಟೆಲಿಕಾಂನ 347ರೂ. ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯು 2GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಗ್ರಾಹಕರು M/S ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್‌ ಟ್ಯೂನ್ಸ್‌ನಿಂದ ಪ್ರೋಗ್ರೆಸ್ಸಿವ್ ವೆಬ್ APP (PWA) ನಲ್ಲಿ ಸವಾಲುಗಳ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಪಡೆಯುತ್ತಾರೆ.

Best Mobiles in India

English summary
These Bsnl Recharge Plans offering Best Benefits with Data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+