ಅಗ್ಗದ ಬೆಲೆಗೆ ಪ್ರತಿದಿನ 1GB ಡೇಟಾ ನೀಡುವ ಬೆಸ್ಟ್ ಪ್ಲ್ಯಾನ್‌ಗಳು!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಪ್ರೀಪೇಡ್ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡಿ ಶಾಕ್ ನೀಡಿದವು. ಆದಾದ ಮೇಲೆ ಗ್ರಾಹಕರು ಕಡಿಮೆ ಬೆಲೆಗೆ ಯಾವ ಪ್ಲ್ಯಾನಿನಲ್ಲಿ ಪ್ರತಿದಿನ ಡೇಟಾ, ಉಚಿತ ಕರೆ ಹಾಗೂ ಅಧಿಕ ವ್ಯಾಲಿಡಿಟಿ ಪ್ರಯೋಜನಗಳಿವೆ ಎಂದು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಸಹ ಡೇಟಾ, ವಾಯಿಸ್ ಕರೆ ಮತ್ತು ವ್ಯಾಲಿಡಿಟಿ ಸೌಲಭ್ಯದ ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ.

ಹೌದು, ಪ್ರಸ್ತುತ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಚಂದಾದಾರರರು ಪ್ರತಿದಿನ 1GB ಡೇಟಾ ಪ್ರಯೋಜನ ಒಳಗೊಂಡಿರುವ ಪ್ರೀಪೇಡ್ ಪ್ಲ್ಯಾನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇನ್ನು ಕೆಲವು ಚಂದಾದಾರರು ವ್ಯಾಲಿಡಿಟಿ ಕಡಿಮೆ ಇದ್ದರೂ ಪ್ರತಿದಿನ 1GB ಡೇಟಾ ಮತ್ತು ಉಚಿತ ವಾಯಿಸ್ ಕರೆಗಳ ಸೌಲಭ್ಯಗಳಿರುವ ಅಗ್ಗದ ಪ್ರೀಪೇಡ್ ಪ್ಲ್ಯಾನ್‌ಗಳಿಗೆ ಅನಿವಾರ್ಯವಾಗಿ ಮನಸೋಲುತ್ತಿದ್ದಾರೆ. ಸದ್ಯ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂಗಳಲ್ಲಿ ಪ್ರತಿದಿನ 1GB ಡೇಟಾ ಮತ್ತು ವಾಯಿಸ್ ಕರೆ ಸೌಲಭ್ಯಗಳಿರುವ ಅಗ್ಗದ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ರಿಲಾಯನ್ಸ್ ಜಿಯೋ 149ರೂ. ಪ್ಲ್ಯಾನ್
ರಿಲಾಯನ್ಸ್ ಜಿಯೋ ಪ್ರತಿದಿನ 1GB ಡೇಟಾ ಸೌಲಭ್ಯ ಒಳಗೊಂಡಿರುವ ಹಲವು ಪ್ಲ್ಯಾನ್‌ಗಳಿವೆ. ಅವುಗಳಲ್ಲಿ ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ 149ರೂ ಪ್ಲ್ಯಾನ್ ಇದೆ. ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಪ್ರತಿದಿನ 1GB ಡೇಟಾ, ಜಿಯೋ ಟು ಜಿಯೋ ಅನಿಯಮಿತ ಉಚಿತ ವಾಯಿಸ್ ಕರೆಗಳ ಮತ್ತು ಜಿಯೋದಿಂದ ಇತರೆ ಟೆಲಿಕಾಂಗಳಿಗೆ 300 ಉಚಿತ ನಿಮಿಷಗಳ ಸೌಲಭ್ಯಗಳಿವೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಪ್ರಯೋಜನ ಇದ್ದು, ಜಿಯೋ ಟಿವಿ ಸೇವೆಯು ಸಿಗಲಿದೆ.

ವೊಡಾಫೋನ್ ಅಗ್ಗದ 1GB ಡೇಟಾ ಪ್ಲ್ಯಾನ್‌ಗಳು
ವೊಡಾಫೋನ್ ಟೆಲಿಕಾಂ ಸಹ ಪ್ರತಿದಿನ 1GB ಡೇಟಾ ಒದಗಿಸುವ ಅಗ್ಗದ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಹೊಂದಿದೆ. ಅವುಗಳಲ್ಲಿ 199ರೂ ಮತ್ತು 219ರೂ. ಪ್ರೀಪೇಡ್ ಪ್ಲ್ಯಾನ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. 199ರೂ. ಪ್ರೀಪೇಡ್ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಅದೇ ರೀತಿ 219ರೂ. ಪ್ರೀಪೇಡ್ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಎರಡು ಪ್ಲ್ಯಾನ್‌ಗಳು ವ್ಯಾಲಿಡಿಟಿ ಅವಧಿಯಲ್ಲಿ ಪ್ರತಿದಿನ 1GB ಡೇಟಾ ಹಾಗೂ 100ಎಸ್ಎಮ್ಎಸ್ ಪ್ರಯೋಜನ ಒದಗಿಸಲಿದೆ. ಹಾಗೆಯೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಒದಗಿಸಲಿದೆ.

ಏರ್‌ಟೆಲ್ 219ರೂ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂ ಸಹ 219ರೂ ಪ್ರೀಪೇಡ್ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್ ಪ್ರತಿದಿನ 1GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಯಾವುದೇ ಟೆಲಿಕಾಂಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನ ಹೊಂದಿದ್ದು, ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಪ್ರೀಪೇಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.


Click it and Unblock the Notifications








