ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇಂತಹ ತಪ್ಪು ಕೆಲಸಗಳನ್ನು ಎಂದಿಗೂ ಮಾಡಬೇಡಿ!

|

ಸದ್ಯ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅತೀ ಅವಶ್ಯ ಡಿವೈಸ್ ಆಗಿದೆ. ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತಿದ್ದು, ಮತ್ತೆ ಕೆಲ ಕೆಲಸಗಳಿಗೆ ಸ್ಮಾರ್ಟ್‌ಫೋನೇ ಆಧಾರವಾಗಿರುತ್ತದೆ. ಆದರೆ ಒಂದು ವೇಳೆ ಅಚಾನಕ್ ಆಗಿ ಸ್ಮಾರ್ಟ್‌ಫೋನ್ ಕೈ ಕೊಟ್ಟರೇ? ಬಳಕೆದಾರರ ಗೊಂದಲಕ್ಕೆ ಒಳಗಾಗುವುದು ಸಹಜ ಅಲ್ಲವೇ.? ಹೀಗಾಗಿ ಸ್ಮಾರ್ಟ್‌ಫೋನ್ ಕಾಳಜಿಬಹಿಸುವುದು ಮುಖ್ಯವಾಗಿದ್ದು, ಅದಕ್ಕಾಗಿ ಕೆಲವು ಕೆಲಸಗಳನ್ನು ಮಾಡಲೇ ಬಾರದು.

ಕಾರ್ಯವೈಖರಿಯನ್ನು

ಹೌದು, ಪ್ರಸ್ತುತ ಬಳಕೆದಾರರಿಗೆ ಸ್ಮಾರ್ಟ್‌ಫೋನ್ ಬಹು ಉಪಯುಕ್ತ ಸಾಧನ ಆಗಿದೆ. ಈ ನಿಟ್ಟಿನಲ್ಲಿ ಫೋನಿನ ಕಾರ್ಯವೈಖರಿಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಸಹ ಅಗತ್ಯ ಆಗಿದೆ. ಆದರೆ ಬಳಕೆದಾರರು ಕೆಲವೊಮ್ಮೆ ಅವಸರದಲ್ಲಿ ನಕಲಿ ಚಾರ್ಜರ್ ಬಳಿಸಿ ಚಾರ್ಜ್ ಮಾಡುವುದು, ಥರ್ಡ್‌ಪಾರ್ಟಿ ಮೂಲಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಸೇರಿದಂತೆ ಫೋನಿಗೆ ಹಾನಿ ಆಗುವಂತಹ ಕೆಲಸಗಳನ್ನು ಮಾಡಿದಾಗ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಕಾಣಿಸುವ ಸಾಧ್ಯತೆಗಳಿರುತ್ತವೆ. ಫೋನಿನ ಕಾರ್ಯ ಚುರುಕಾಗಿ ಇರಲು ಕೆಲ ಕೆಲಸಗಳನ್ನು ಮಾಡದೆ ಇರುವುದು ಒಳಿತು. ಆ ಬಗ್ಗೆ ಮುಂದೆ ಓದಿರಿ.

ಥರ್ಡ್‌ಪಾರ್ಟಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಲೇಬೇಡಿ

ಥರ್ಡ್‌ಪಾರ್ಟಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಲೇಬೇಡಿ

ಸ್ಮಾರ್ಟ್‌ಫೋನ್ ಬಳಕೆದಾರರು ಮಾಡುವ ಮೊದಲ ತಪ್ಪು ಎಂದರೆ, ಥರ್ಡ್‌ಪಾರ್ಟಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿಕೊಳ್ಳುವುದು. ಗೂಗಲ್‌ ಪ್ಲೇ ಸ್ಟೋರ್‌ ಹೊರತುಪಡಿಸಿ ಥರ್ಡ್‌ಪಾರ್ಟಿ ಆಪ್‌ಗಳ ಇನ್‌ಸ್ಟಾಲ್‌ ಫೋನ್‌ಗಳ ಕಾರ್ಯಕ್ಕೆ ಧಕ್ಕೆ ತರುವ ಸಂಭವ ಹೆಚ್ಚು. APK ಅಂತಹ ಲಿಂಕ್‌ಗಳಿಂದ ಆಪ್‌ ಡೌನ್‌ಲೋಡ್ ಮಾಡಿದರೆ ಅದು ಮಾಲ್‌ವೇರ್‌ನೊಂದಿಗೆ ಬರಬಹುದು. ಹೀಗಾಗಿ ಥರ್ಡ್‌ಪಾರ್ಟಿ ಆಪ್ಸ್‌ ಇನ್‌ಸ್ಟಾಲ್ ಮಾಡಲೇಬೇಡಿ.

ಬ್ಯಾಟರಿ ಸೇವರ್ ಅಪ್ಲಿಕೇಶನ್ ಅನಗತ್ಯ

ಬ್ಯಾಟರಿ ಸೇವರ್ ಅಪ್ಲಿಕೇಶನ್ ಅನಗತ್ಯ

ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಬ್ಯಾಟರಿ ಪಡೆಯುವುದಕ್ಕಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಇನ್‌ಸ್ಟಾಲ್‌ ಮಾಡಬಯಸುತ್ತಾರೆ. ಆದರೆ ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿಕಾರಕವೆಂದು ಬಹುತೇಕರಿಗೆ ತಿಳಿದಿಲ್ಲ. ಈ ಆಪ್‌ಗಳು ಫೋನಿನ ಬ್ಯಾಟರಿಯನ್ನು ಬ್ಯಾಕ್‌ಗ್ರೌಂಡ್‌ ಕಬಳಿಸುತ್ತವೆ. ಹೀಗಾಗಿ ಇಂತಹ ಅಪ್ಲಿಕೇಶನ್‌ಗಳು ಯಾವುದೇ ಪ್ರಯೋಜನವಿಲ್ಲ.

ಅಗ್ಗದ USB ಕೇಬಲ್ ಬಳಕೆ ಎಂದಿಗೂ ಮಾಡಬೇಡಿ

ಅಗ್ಗದ USB ಕೇಬಲ್ ಬಳಕೆ ಎಂದಿಗೂ ಮಾಡಬೇಡಿ

ಬಳಕೆದಾರರು ದುಬಾರಿ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಿರುತ್ತಾರೆ. ಆದರೆ ಕೆಲವು ಅವಸರದ ಸಂದರ್ಭಗಳಲ್ಲಿ ಫೋನ್ ಚಾರ್ಜ್ ಮಾಡುವಾಗ ಮೂಲ ಚಾರ್ಜರ್ ಬಳಕೆ ಮಾಡುವುದನ್ನು ಎಷ್ಟು ಸಾರಿ ಮರೆತು ಬಿಡುತ್ತಾರೆ. ಯಾವುದೋ ಅಗ್ಗದ USB ಕೇಬಲ್ ಬಳಕೆ ಮಾಡುತ್ತಾರೆ. ಆದರೆ ಅಗ್ಗದ USB ಕೇಬಲ್ ಬಳಸಿ ಫೋನ್ ಚಾರ್ಜ್ ಮಾಡಿದರೇ ಫೋನಿಗೆ ಧಕ್ಕೆ ಆಗುವ ಸಂಭವ ಅಧಿಕ.

ಅಪ್‌ಡೇಟ್ ಮಾಡುವುದನ್ನು ಮರೆಯದಿರಿ

ಅಪ್‌ಡೇಟ್ ಮಾಡುವುದನ್ನು ಮರೆಯದಿರಿ

ಸ್ಮಾರ್ಟ್‌ಫೋನ್ ಹಾಗೂ ಫೋನಿನಲ್ಲಿ ನಾವು ಇನ್‌ಸ್ಟಾಲ್ ಮಾಡಿಕೊಂಡಿರುವ ಹಲವು ಆಪ್‌ಗಳು ಕೆಲವು ವೇಳೆ ಅಪ್‌ಡೇಟ್ ಕೇಳುತ್ತವೆ. ಆದರೆ ಬಹುತೇಕರು ಅಪ್‌ಡೇಟ್ ನೋಟಿಫೀಕೇಶನ್‌ ಅನ್ನು ತಿರಸ್ಕರಿಸುತ್ತಾರೆ. ಫೋನಿನ ಕಾರ್ಯದ ದೃಷ್ಠಿಯಿಂದ ಹಾಗೂ ಆಪ್‌ಗಳಲ್ಲಿನ ನೂತನ ಫೀಚರ್ಸ್‌ಗಳ ಸೌಲಭ್ಯ ಪಡೆಯಲು ಅಪ್‌ಡೇಟ್ ಮಾಡುವುದು ಉತ್ತಮ.

ಫೋನ್ ರೀಸ್ಟಾರ್ಟ್‌ ಮಾಡುವುದುದನ್ನು ಕಡೆಗಣಿಸದಿರಿ

ಫೋನ್ ರೀಸ್ಟಾರ್ಟ್‌ ಮಾಡುವುದುದನ್ನು ಕಡೆಗಣಿಸದಿರಿ

ಸದಾ ಜೊತೆಗೆ ಇರುವ ಸ್ಮಾರ್ಟ್‌ಫೋನ್‌ಗೂ ಸ್ಪಲ್ಪ ವಿಶ್ರಾಂತಿ ಅಗತ್ಯ ಇರುತ್ತವೆ. ಹೀಗಾಗಿ ತಿಂಗಳಿಗೆ ಎರಡು ಬಾರಿಯಾದರೂ ಫೋನ್‌ ಅನ್ನು ರೀಸ್ಟಾರ್ಟ್‌ ಮಾಡುವುದು ಉತ್ತಮ. ಫೋನ್ ರೀಸ್ಟಾರ್ಟ್‌ ಮಾಡುವುದರಿಂದ ಫೋನಿನ ಕಾರ್ಯ ಉತ್ತಮವಾಗಿರಿಸಬಹುದು.

Most Read Articles
Best Mobiles in India

English summary
These five Things that you should never do with your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X