Home
ಸುದ್ದಿಜಾಲ

Gmailನಲ್ಲಿರುವ ಈ ಅಚ್ಚರಿಯ ಫೀಚರ್ಸ್‌ ನೀವು ಎಂದಾದರೂ ಬಳಕೆ ಮಾಡಿದ್ದಿರಾ?

ಇಂದಿನ ಡಿಜಿಟಲ್ ಯುಗದಲ್ಲಿ ಮಿಂಚಂಚೆ (ಇ-ಮೇಲ್) ಪ್ರಮುಖ ಪಾತ್ರ ವಹಿಸಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಸಂದೇಶ ಸೇರಬೇಕಾದ ಸ್ಥಳ ಸೇರಿರುತ್ತದೆ. ಗೂಗಲ್ ಒಡೆತನದ ಜಿ-ಮೇಲ್ ಹೆಚ್ಚು ಬಳಕೆಯಲ್ಲಿರುವ ಮೇಲ್ ಸೇವೆ ಆಗಿದೆ. ಇನ್ನು ಜಿ-ಮೇಲ್ ಬಳಕೆದಾರರಿಗೆ ಅನುಕೂಲವಾಗಲೆಂದು ಹಲವು ಮಹತ್ತರ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದ್ದು, ಬಳಕೆದಾರರ ಕೆಲಸ ಹಗುರಾಗಿಸಿವೆ. ಹಾಗೆಯೇ ಇನ್ನಷ್ಟು ರಹಸ್ಯ ಆಯ್ಕೆಗಳನ್ನು ಜಿ-ಮೇಲ್ ಹೊಂದಿದ್ದು, ಅವುಗಳ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.

ಕುತೂಹಲಕಾರಿ

ಹೌದು, ಗೂಗಲ್ ಸಂಸ್ಥೆಯ ಹಲವು ಜನಪ್ರಿಯ ಸೇವೆಗಳಲ್ಲಿ 'ಜಿ ಮೇಲ್' ಸಹ ಒಂದಾಗಿದೆ. ಬಹು ಉಪಯುಕ್ತವಾಗಿರುವ ಜಿ ಮೇಲ್‌ ಅಕೌಂಟ್‌ ಅನ್ನು ಬಳಕೆದಾರರು ಹಲವು ಸಂದರ್ಭಗಳಲ್ಲಿ ಬಳಕೆ ಮಾಡುತ್ತಲೇ ಇರುತ್ತಾರೆ. ಅದಾಗ್ಯೂ ಜಿ-ಮೇಲ್‌ನಲ್ಲಿರುವ ಕೆಲವು ಕುತೂಹಲಕಾರಿ ಫೀಚರ್ಸ್‌ಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೂ ಅವುಗಳನ್ನು ಬಳಕೆ ಮಾಡಿರುವ ಸಾಧ್ಯತೆಗಳು ಕಡಿಮೆ ಎನ್ನಬಹುದು. ಹಾಗಾದರೇ ಈ ಲೇಖನದಲ್ಲಿ ಜಿ ಮೇಲ್‌ನಲ್ಲಿರುವ ಕೆಲವು ಅಚ್ಚರಿಯ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಟೋ ಅಡ್ವಾನ್ಸ್ ಆಯ್ಕೆ

ಆಟೋ ಅಡ್ವಾನ್ಸ್ ಆಯ್ಕೆ

ಇನ್‌ಬಾಕ್ಸ್‌ಗೆ ಬರುವ ಪ್ರತಿಯೊಂದು ಮೇಲ್ ಪರಿಶೀಲಿಸುವುದು ಬೇಸರದ ಸಂಗತಿ ಆಗಿರುತ್ತದೆ. ಈ ನಿಟ್ಟಿನಲ್ಲಿ ಆಟೋ ಅಡ್ವೈಸ್‌ ಆಯ್ಕೆ ಸಕ್ರಿಯ ಮಾಡಿಕೊಳ್ಳುವ ಮೂಲಕ ಹೊಸತನ ಪಡೆಯಬಹುದು. ಇದನ್ನು ಆಕ್ಟೀವ್ ಮಾಡಲು ಸೆಟ್ಟಿಂಗ್ಸ್ -> ಅಡ್ವಾನ್ಸ್ಡ್ - ಆಟೋ ಅಡ್ವಾನ್ಸ್ ಆಯ್ಕೆ ಸಕ್ರಿಯ -> ಸೇವ್ ಚೇಂಜ್ಸ್‌.

ದೊಡ್ಡ ಗಾತ್ರದ ಫೈಲ್ ಸೆಂಡ್ ಮಾಡಬಹುದು

ದೊಡ್ಡ ಗಾತ್ರದ ಫೈಲ್ ಸೆಂಡ್ ಮಾಡಬಹುದು

ಜಿ ಮೇಲ್ ಪೂರ್ವನಿಯೋಜಿತವಾಗಿ ಬಳಕೆದಾರರಿಗೆ 25MB ಗಾತ್ರದ ಫೈಲ್ ಅಟ್ಯಾಚ್ ಮಾಡಿ ಕಳುಹಿಸಲು ಅನುಮತಿಸುತ್ತದೆ. ಆದಾಗ್ಯೂ, ಬಳಕೆದಾರರು ದೊಡ್ಡ ಗಾತ್ರದ ಫೈಲ್‌ಗಳನ್ನು ಅಟ್ಯಾಚ್ ಮಾಡಿ ಸೆಂಡ್ ಮಾಡಬಹುದಾಗಿದೆ. ಇದಕ್ಕಾಗಿ ಗೂಗಲ್ ಡ್ರೈವ್ ಬಳಕೆ ಮಾಡಬಹುದು.

ಶೆಡ್ಯುಲ್ ಇ ಮೇಲ್

ಶೆಡ್ಯುಲ್ ಇ ಮೇಲ್

ಜಿ ಮೇಲ್ ಬಳಕೆದಾರರು ಇ ಮೇಲ್ ರಚಿಸಿ ಸಿದ್ಧ ಮಾಡಿಕೊಂಡು ಬೇಕಾದ ಸಮಯಕ್ಕೆ ಆಟೋ ಸೆಂಡ್ ಆಗಲು ಇ ಮೇಲ್ ಶೆಡ್ಯುಲ್ ಮಾಡುವ ಆಯ್ಕೆ ಇದೆ. ಈ ಆಯ್ಕೆ ಬಳಕೆ ಮಾಡಲು ಹೀಗೆ ಮಾಡಿ: ಇ ಮೇಲ್ ರಚಿಸಿ ಮತ್ತು ಸೆಂಡ್ ಬಟನ್ ಜೊತೆಗೆ ಕೆಳಗಿನ ಎರೋ ಬಟನ್ ಮೇಲೆ ಟ್ಯಾಪ್ ಮಾಡಿ. ನಂತರ ಕಳುಹಿಸು ವೇಳಾಪಟ್ಟಿಯನ್ನು ಆರಿಸಿ. ಈಗ, ಪ್ರಿಸೆಟ್ ಆಯ್ಕೆಯಿಂದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ. ತದ ನಂತರ ಪಿಕ್ ಡೇಟ್ ಮತ್ತು ಟೈಮ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮದೇ ಆಯ್ಕೆ ಮಾಡಿ.

ಇಂಟರ್ನೆಟ್ ಇಲ್ಲದೆ ಜಿ ಮೇಲ್ ಬಳಸಬಹುದು

ಇಂಟರ್ನೆಟ್ ಇಲ್ಲದೆ ಜಿ ಮೇಲ್ ಬಳಸಬಹುದು

ಗೂಗಲ್‌ನ ಕೆಲವು ಸೇವೆಗಳು ಆಫ್‌ಲೈನ್‌ ಮೋಡ್ ಆಯ್ಕೆ ಪಡೆದಿವೆ. ಅದೇ ರೀತಿ ಜಿ-ಮೇಲ್ ಸಹ ಆಫ್‌ಲೈನ್ ಪ್ರವೇಶ ಮೋಡ್‌ ಆಯ್ಕೆ ಒಳಗೊಂಡಿದೆ. ಇದರ ಅರ್ಥವೇನೆಂದರೆ, ನೀವು ಇಂಟರ್ನೆಟ್ ಸಂಪರ್ಕವಿಲ್ಲದೆ ಜಿ-ಮೇಲ್‌ ಅನ್ನು ಓದಬಹುದು, ಪ್ರತಿಕ್ರಿಯಿಸಬಹುದು ಮತ್ತು ಸರ್ಚ್ ಸಹ ಮಾಡಬಹುದಾಗಿದೆ. ಇದಕ್ಕಾಗಿ mail.google.com ಅನ್ನು ಬುಕ್‌ಮಾರ್ಕ್ ಮಾಡುವುದು. ಈ ಫೀಚರ್‌ ಕ್ರೋಮ್ ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಿ.

ಜಿ-ಮೇಲ್‌ ಖಾತೆಯಲ್ಲಿಯೇ ಗೂಗಲ್‌ ಟ್ರಾನ್ಸ್‌ಲೇಟ್ ಮಾಡಿ

ಜಿ-ಮೇಲ್‌ ಖಾತೆಯಲ್ಲಿಯೇ ಗೂಗಲ್‌ ಟ್ರಾನ್ಸ್‌ಲೇಟ್ ಮಾಡಿ

ಬಳಕೆದಾರರು ಜಿ-ಮೇಲ್ ಖಾತೆಯಲ್ಲಿಯೇ ಗೂಗಲ್‌ ಟ್ರಾನ್ಸ್‌ಲೇಟ್ ಬಳಕೆ ಮಾಡಬಹುದಾಗಿದೆ. ಈ ಆಯ್ಕೆಯು ಬಳಕೆದಾರರಿಗೆ ಸಂಪೂರ್ಣ ಇ-ಮೇಲ್ ಅನ್ನು ಆದ್ಯತೆಯ ಭಾಷೆಗೆ ಭಾಷಾಂತರಿಸಲು ಅನುಮತಿಸುತ್ತದೆ. ಈ ಆಯ್ಕೆ ಸೆಟ್ ಮಾಡಲು ಬಳಕೆದಾರರು ಮೊದಲು ಟ್ರಾನ್ಸ್‌ಲೇಟ್ ಮಾಡ ಬಯಸುವ ಇಮೇಲ್ ಅನ್ನು ತೆರೆಯಬೇಕು.> ನಂತರ ಪುಟದ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ > ಟ್ರಾನ್ಸ್‌ಲೇಟ್ ಮಾಡುವ ಮೆಸೆಜ್‌ ಆಯ್ಕೆಯನ್ನು ಆರಿಸಿ > ಮೇಲ್ ಬಾಡಿ ಮೇಲ್ಭಾಗದಲ್ಲಿ ಹೊಸ ಬಾರ್ ಕಾಣಿಸಿಕೊಳ್ಳುತ್ತದೆ. ಆಗ ಟ್ರಾನ್ಸ್‌ಲೇಟ್ ಮಾಡ ಬಯಸುವ ನಿಮ್ಮ ಆಯ್ಕೆಯ ಭಾಷೆಯನ್ನು ಸೆಲೆಕ್ಟ್ ಮಾಡಬಹುದು.

ಮೇಲ್‌ಗಳಿಗೆ ಲೇಬಲ್‌ ರಚಿಸುವ ಆಯ್ಕೆ

ಮೇಲ್‌ಗಳಿಗೆ ಲೇಬಲ್‌ ರಚಿಸುವ ಆಯ್ಕೆ

ಜಿ ಮೇಲ್‌ನಲ್ಲಿ ಬಳಕೆದಾರರು ಸುಲಭ ಕೆಲಸದ ಅನುಕೂಲಕ್ಕಾಗಿ ಮೇಲ್‌ಗಳಿಗೆ ಲೇಬಲ್ ರಚಿಸಬಹುದಾಗಿದೆ. ಲೇಬಲ್ ರಚಿಸುವುದರಿಂದ ಇನ್‌ಬಾಕ್ಸ್‌ನಲ್ಲಿ ಅಗತ್ಯ ಮೇಲ್‌ಗಳನ್ನು ಬೇಗನೆ ಹುಡುಕಬಹುದು.

Best Mobiles in India

English summary
These Few Very Useful Features Of Gmail You Might Not Have Found Yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+