Home
ಸುದ್ದಿಜಾಲ

ಅತ್ಯುತ್ತಮವಾಗಿ ವಿಡಿಯೋ, ಫೋಟೋ ಸೆರೆಹಿಡಿಯಬೇಕೆ? ಹಾಗಿದ್ರೆ ಈ ಗಿಂಬಲ್‌ ಅವಶ್ಯಕ!

ಸ್ಮಾರ್ಟ್‌ಫೋನ್‌ಗಳು ಕೇವಲ ಮಾಹಿತಿ ಮನರಂಜನೆ ನೀಡುವುದರ ಜೊತೆಗೆ ಕರೆ ಹಾಗೂ ಮೆಸೆಜ್‌ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಅತ್ಯುತ್ತಮ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಹಾಗೂ ಅವುಗಳನ್ನು ಹೊರ ಜಗತ್ತಿಗೆ ಪ್ರಚುರಪಡಿಸುವ ಮೂಲಕ ನಿಮ್ಮ ಸ್ಟೇಟಸ್‌ ಅನ್ನು ಸಹ ಹೆಚ್ಚಿಗೆ ಮಾಡುವ ಕೆಲಸ ಮಾಡುತ್ತವೆ. ಆದರೆ, ಈ ಕೆಲಸ ಇನ್ನಷ್ಟು ಚೆನ್ನಾಗಿರಬೇಕು ಎಂದರೆ ಗಿಂಬಲ್‌ಗಳು ನಿಮ್ಮ ಫೋನ್‌ ಜೊತೆ ಇರಲಿ.

ಹೌದು, ಸ್ಮಾರ್ಟ್‌ಫೋನ್‌ ಬಳಕೆ ಮಾಡಿಕೊಂಡು ನೀವು ಉತ್ತಮವಾಗಿ ಫೋಟೋ ಅಥವಾ ವಿಡಿಯೋ ಸೆರೆಹಿಡಿಯುವ ಹವ್ಯಾಸ ಉಳ್ಳವರಾಗಿದ್ದರೆ ಅಥವಾ ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳಿಗೆ ಅತ್ಯುತ್ತಮ ಫೋಟೋ, ವಿಡಿಯೋ ಅಪ್‌ಲೋಡ್‌ ಮಾಡುವವರಾಗಿದ್ದರೆ ನಿಮಗೆ ಈ ಗ್ಯಾಜೆಟ್‌ ತುಂಬಾನೆ ಅಗತ್ಯ ಎಂದೇ ಹೇಳಬಹುದು. ಅದರಲ್ಲೂ 4000ರೂ.ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಗಿಂಬಲ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಇವು ಸ್ಥಿರವಾದ ವಿಡಿಯೋ ಶೂಟ್ ಮಾಡಲು ಸಹಕರಿಸುತ್ತವೆ. ಹಾಗಿದ್ರೆ, ಬನ್ನಿ ಇವುಗಳ ಬೆಲೆ ಎಷ್ಟು, ಫೀಚರ್ಸ್‌ ಏನು ಎಂಬುದನ್ನು ನೋಡೋಣ.

ಅತ್ಯುತ್ತಮವಾಗಿ ವಿಡಿಯೋ, ಫೋಟೋ ಸೆರೆಹಿಡಿಯಬೇಕೆ? ಹಾಗಿದ್ರೆ ಈ ಗಿಂಬಲ್‌ ಅವಶ್ಯಕ!

ಬ್ಲೆಸೇಬ್‌ BB20 ಗಿಂಬಲ್: ಈ ಗಿಂಬಲ್‌ (Blessbe BB20 Gimbal) ಅನ್ನು ಅಮೆಜಾನ್‌ ಮೂಲಕ ನೀವು ಕೇವಲ 2,199 ರೂ.ಗಳಿಗೆ ಖರೀದಿ ಮಾಡಬಹುದು. ಇದನ್ನು ಬಳಕೆ ಮಾಡಿಕೊಂಡು ಯೂಟ್ಯೂಬ್, ಇನ್‌ಸ್ಟಾ ರೀಲ್ ಮತ್ತು ವ್ಲಾಗಿಂಗ್ ಮಾಡಬಹುದಾಗಿದೆ. ವಿಶೇಷ ಏನೆಂದರೆ ಗಿಂಬಲ್ ನಲ್ಲಿ 360 ಡಿಗ್ರಿ ರೊಟೇಶನ್ ಆಯ್ಕೆ ನೀಡಲಾಗಿದ್ದು, ಸಿನಿಮಾ ಅನುಭವ ಪಡೆದುಕೊಳ್ಳಬಹುದು.

ಹೋಲ್ಡ್‌ ಅಪ್‌ ಗಿಂಬಲ್‌ ಸ್ಟೆಬಿಲೈಸರ್ : ಈ ಗಿಂಬಲ್‌ ಅನ್ನೂ ಸಹ (HOLD UP Gimbal Stabilizer) ಅನ್ನು ಸಹ ನೀವು ಅಮೆಜಾನ್‌ ಮೂಲಕ 2,849ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದನ್ನು ನೀವು ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಈ ಡಿವೈಸ್‌ 360 ಡಿಗ್ರಿ ರೊಟೇಶನ್‌ ಆಯ್ಕೆ, ಆಟೋ ಬ್ಯಾಲನ್ಸ್‌ ಸೌಲಭ್ಯ ಪಡೆದಿದ್ದು, ಇದನ್ನು ಸೆಲ್ಫಿ ಸ್ಟಿಕ್ ಮತ್ತು ಟ್ರೈಪಾಡ್ ಆಗಿಯೂ ಬಳಕೆ ಮಾಡಬಹುದು. ಅಷ್ಟೇ ಅಲ್ಲದೆ ಇದಕ್ಕೆ ಗೋಪ್ರೋ ಅನ್ನು ಸಹ ಜೋಡಿಸಬಹುದಾಗಿದೆ.

ವಿ ಕೂಲ್‌ G1: ಮಗದೊಂದು ಗಿಂಬಲ್‌ ಕಡೆ ಕಣ್ಣಾಯಿಸುವುದಾದರೆ ಈ ವಿ ಕೂಲ್‌ G1 (WeCool G1) ಇದು ವೈರ್‌ಲೆಸ್ ರಿಮೋಟ್‌ನ ಬೆಂಬಲವನ್ನು ಹೊಂದಿದ್ದು, ಬ್ಲೂಟೂತ್ ಸೆಲ್ಫಿ ಮತ್ತು ಟ್ರೈಪಾಡ್ ಆಗಿಯೂ ಬಳಕೆ ಮಾಡಬಹುದಾಗಿದೆ. ಜೊತೆಗೆ 360 ಡಿಗ್ರಿ ಆಟೋ ರೊಟೇಶನ್‌ ಆಯ್ಕೆ ಸಹ ಇದ್ದು, ಅತ್ಯುತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು. ಇದರೊಂದಿಗೆ ನೀವು ಅಮೆಜಾನ್‌ನಲ್ಲಿ 2,499ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಅಮೆಜಾನ್ ಬೇಸಿಕ್ಸ್ ಮಿನಿ ಗಿಂಬಲ್: ಈ ಗಿಂಬಲ್‌ಗೆ (Amazon Basics Mini Gimbal) ಮಾರುಕಟ್ಟೆಯಲ್ಲಿ ಬಾರೀ ಬೇಡಿಕೆ ಇದೆ. ಇದನ್ನು ಸೆಲ್ಫಿ ಸ್ಟಿಕ್, ಟ್ರೈಪಾಡ್ ಮತ್ತು ಸಿಂಗಲ್ ಗಿಂಬಲ್ ಸ್ಟೇಬಿಲೈಸರ್ ಆಗಿಯೂ ಬಳಕೆ ಮಾಡುವಂತೆ ತಯಾರಿಸಲಾಗಿದೆ. ಇದು ಬ್ಲೂಟೂತ್ 4.2 ಅನ್ನು ಬೆಂಬಲಿಸುವುದರ ಜೊತೆಗೆ ರಿಮೋಟ್ ಆಯ್ಕೆ ಹೊಂದಿದ್ದು, ಗಿಂಬಲ್‌ ಶೋ ಆಪ್‌ ಮೂಲಕ ಶೂಟಿಂಗ್ ಮೋಡ್ ಗೆ ಎಂಟ್ರಿ ನೀಡಬಹುದಾಗಿದೆ. ಇದನ್ನು 2000ರೂ.ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು.

ಅತ್ಯುತ್ತಮವಾಗಿ ವಿಡಿಯೋ, ಫೋಟೋ ಸೆರೆಹಿಡಿಯಬೇಕೆ? ಹಾಗಿದ್ರೆ ಈ ಗಿಂಬಲ್‌ ಅವಶ್ಯಕ!

ಐಸ್ಟೆಡಿ ಕ್ಯೂ: ಈ ಗಿಂಬಲ್‌ (iSteady Q) ಅಮೆಜಾನ್‌ನಲ್ಲಿ 3,490 ರೂ.ಗಳಿಗೆ ಮಾರಾಟ ಆಗುತ್ತಿದೆ. ಈ ಗಿಂಬಲ್ ಸ್ಟೆಬಿಲೈಸರ್ ಮೂಲಕ 360 ಡಿಗ್ರಿ ವಿಡಿಯೋ ರೆಕಾರ್ಡ್ ಮಾಡಬಹುದು. ಜೊತೆಗೆ ಹ್ಯಾಂಡ್ಹೆಲ್ಡ್ ಗಿಂಬಲ್, ಸೆಲ್ಫಿ ಸ್ಟಿಕ್ ಮತ್ತು ಟ್ರೈಪಾಡ್ ಆಗಿಯೂ ಬಳಕೆ ಮಾಡಬಹುದಾಗಿದೆ. ಇದು ತುಂಬಾ ಹಗುರವಾಗಿದ್ದು, ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ.

Best Mobiles in India

English summary
If you are fond of capturing photos or videos using a smartphone or uploading great photos and videos to YouTube, Instagram, Facebook and other platforms, than you need these gimbal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+