Home
ಸುದ್ದಿಜಾಲ

ಗೇಮಿಂಗ್ ಪ್ರಿಯರಿಗೆ ಈ ಹೆಡ್‌ಫೋನ್‌ಗಳು ಅತ್ಯುತ್ತಮ ಆಯ್ಕೆ, ತಲ್ಲೀನಗೊಳಿಸುವ ಅನುಭವ ಪಕ್ಕಾ!

ಸ್ಮಾರ್ಟ್‌ಫೋನ್‌ಗಳು (Smartphone) ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ (Smart device) ಟೆಕ್‌ ವಲಯದಲ್ಲಿ ಎಷ್ಟು ಕ್ರೇಜ್‌ ಇದೆಯೋ ಅಷ್ಟೇ ಪ್ರಮಾಣದಲ್ಲಿ ಹೆಡ್‌ಫೋನ್‌ಗಳಿಗೂ(Headphones) ಬಹಳ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ಹೆಡ್‌ಫೋನ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖವಾಗಿ ಗೇಮರ್‌ಗಳು ನೈಜ ಲೋಕದಲ್ಲಿ ತೇಲುವಂತೆ ಮಾಡುತ್ತವೆ.

ಹೌದು, ಗೇಮಿಂಗ್‌ ಪ್ರಿಯರನ್ನೇ ಕೇಂದ್ರೀಕರಿಸಿಕೊಂಡು ಹಲವು ಹೆಡ್‌ಫೋನ್‌ಗಳನ್ನು ತಯಾರು ಮಾಡಲಾಗುತ್ತದೆ. ಅದರಲ್ಲೂ ಭಾರತದಲ್ಲಿ ವ್ಯಾಪಕ ಶ್ರೇಣಿಯ ಪ್ರೀಮಿಯಂ ಹೆಡ್‌ಫೋನ್‌ಗಳು(Premium headphones) ಲಭ್ಯ ಇದ್ದು, ರೇಜರ್‌, ಲಾಜಿಟೆಕ್ ಹಾಗೂ ಕೋರ್ಸೇರ್ ನಂತಹ ಹಲವಾರು ತಯಾರಕರು ಮಾರುಕಟ್ಟೆಯಲ್ಲಿ ತಮ್ಮ ಅತ್ಯುತ್ತಮ ಹೆಡ್‌ಫೋನ್‌ಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಹಾಗಿದ್ರೆ, ಗೇಮರ್‌ಗಳಿಗೆ ಅಥವಾ ಗೇಮಿಂಗ್‌ ಉದ್ದೇಶಕ್ಕೆ ಯಾವೆಲ್ಲಾ ಹೆಡ್‌ಪೋನ್‌ಗಳು ಬೆಸ್ಟ್‌ ಎಂಬುದನ್ನು ಇಲ್ಲಿ ಗಮನಿಸಿ.

ಗೇಮಿಂಗ್ ಪ್ರಿಯರಿಗೆ ಈ ಹೆಡ್‌ಫೋನ್‌ಗಳು ಅತ್ಯುತ್ತಮ ಆಯ್ಕೆ, ತಲ್ಲೀನಗೊಳಿಸುವ ಅನುಭವ

ಸ್ಟೀಲ್‌ ಸೀರೀಸ್ ಆರ್ಕ್ಟಿಸ್ ಪ್ರೊ: ಈ ಹೆಡ್‌ಫೋನ್ ಅತ್ಯುತ್ತಮ ವಾಯರ್‌ಲೆಸ್‌ ಗೇಮಿಂಗ್ ಹೆಡ್‌ಸೆಟ್ ವಿಭಾಗದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಜೊತೆಗೆ ಇದರಲ್ಲಿ ವೈರ್ಡ್ ಆಯ್ಕೆ ಸಹ ಇದೆ. ಎರಡೂ ಹೆಡ್‌ಫೋನ್‌ಗಳು ಕಪ್ಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ವೈರ್ಡ್ ಒಂದು ಸೂಕ್ಷ್ಮವಾದ ಆರ್‌ಜಿಬಿ ಲೈಟ್‌ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಸೌಂಡ್ ಡ್ರೈವರ್‌ಗಳು ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುತ್ತವೆ. ಇದರ ಬೆಲೆ 20 ಸಾವಿರದಿಂದ ಆರಂಭ ಆಗುತ್ತದೆ.

ಲಾಜಿಟೆಕ್ ಜಿ ಪ್ರೊ ಎಕ್ಸ್: ಇದರಲ್ಲೂ ಸಹ ವೈರ್ಡ್ ಮತ್ತು ವಾಯರ್‌ಲೆಸ್ ಹೆಡ್‌ಫೋನ್ ಆಯ್ಕೆ ಇದ್ದು, 50 ಮಿಲಿಮೀಟರ್ ಡ್ರೈವರ್ ಆಯ್ಕೆ ನೀಡಲಾಗಿದೆ. ಈ ಹೆಡ್‌ಫೋನ್‌ಗಳ ಧ್ವನಿ ಗುಣಮಟ್ಟ ಅತ್ಯುತ್ತಮವಾಗಿದ್ದು, ಹಗುರವಾದ ವಿನ್ಯಾಸದೊಂದಿಗೆ ಇನ್ನಷ್ಟು ಆಕರ್ಷಕವಾಗಿದೆ. ಇದರೊಂದಿಗೆ ಹೆಡ್‌ಬ್ಯಾಂಡ್‌ನ ಮೇಲ್ಭಾಗದಲ್ಲಿ ಪ್ಯಾಡಿಂಗ್ ಆಯ್ಕೆ ನೀಡಲಾಗಿದ್ದು, ಲೆದರ್ ಇಯರ್ ಕಪ್‌ಗಳು ಮೃದು ಅನುಭವ ನೀಡುತ್ತವೆ. ಈ ಹೆಡ್‌ಸೆಟ್‌ ಬೆಲೆ 13 ಸಾವಿರದಿಂದ ಆರಂಭ ಆಗುತ್ತದೆ.

ಅಸುಸ್‌ ರೋಗ್ ಡೆಲ್ಟಾ S ಅನಿಮೇಟ್: ಪ್ರೀಮಿಯಂ ಪ್ರೊಡಕ್ಟ್‌ ವಿಷಯಕ್ಕೆ ಬಂದಾಗ ಈ ಹೆಡ್‌ಸೆಟ್‌ ಅತ್ಯುತ್ತಮ ಆಯ್ಕೆ ಆಗಿದೆ. ಇದು ಅಸುಸ್‌ ಗೇಮಿಂಗ್ ಮಾರುಕಟ್ಟೆಯಲ್ಲಿ ಅಗ್ರ ಬ್ರಾಂಡ್‌ಗಳಲ್ಲಿ ಒಂದಾಗಿದ್ದು, ಈ ಡಿವೈಸ್‌ ವಿಶಿಷ್ಟವಾದ ಡಾಟ್ ಮ್ಯಾಟ್ರಿಕ್ಸ್ ಡಿಸ್‌ಪ್ಲೇ ಆಯ್ಕೆಯನ್ನು ಪಡೆದುಕೊಂಡಿದೆ. ಇದರಲ್ಲಿ ಪಠ್ಯ ಅಥವಾ ಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಜೊತೆಗೆ ಆರ್‌ಜಿಬಿ ಲೈಟ್‌ ಆಯ್ಕೆ ಸಹ ಇದ್ದು, ಗೇಮಿಂಗ್‌ ಪ್ರಿಯರಿಗೆ ಈ ಡಿವೈಸ್‌ ಅತ್ಯುತ್ತಮ ಆಯ್ಕೆ ಆಗಿದೆ. ಇದರ ಆರಂಭಿಕ ಬೆಲೆ 21 ಸಾವಿರ.

ಸ್ಟೀಲ್‌ಸೀರೀಸ್ ಆರ್ಕ್ಟಿಸ್ 7 ವಾಯರ್‌ಲೆಸ್: ಈ ಡಿವೈಸ್‌ 3D ಸರೌಂಡ್ ಸೌಲಭ್ಯ ಹೊಂದಿದ್ದು, ಹೆಚ್ಚು ತಲ್ಲೀನಗೊಳಿಸುವ ಅನುಭವವನ್ನು ಪಡೆದುಕೊಳ್ಳಬಹುದು. ವಾಯರ್‌ಲೆಸ್‌ ವಿಭಾಗದಲ್ಲಿನ ಹೆಡ್‌ಫೋನ್ ಉತ್ತಮ ಸಿಗ್ನಲ್ ಅನ್ನು ಹೊಂದಿದ್ದು, ಫೋನ್ ಅನ್ನು ಮನೆಯಲ್ಲಿ ಇಟ್ಟು ಹೊರ ಬಂದರೂ ಅತ್ಯುತ್ತಮವಾದ ಸೌಂಡ್‌ ಕ್ವಾಲಿಟಿ ಲಭ್ಯ ಇರಲಿದೆ. ಇದರೊಂದಿಗೆ ಪ್ಲಾಸ್ಟಿಕ್ ಇಯರ್ ಕಪ್‌ಗಳ ಮೇಲೆ ಆಹ್ಲಾದಕರವಾದ ರಬ್ಬರ್ ಆಯ್ಕೆ ನೀಡಲಾಗಿದೆ. ಈ ಹೆಡ್‌‌ಫೋನ್ ಬೆಲೆ 36 ಸಾವಿರದಿಂದ ಆರಂಭ ಆಗುತ್ತದೆ.

ಲಾಜಿಟೆಕ್ G733: ಈ ಹೆಡ್‌ಫೋನ್‌ನ ಹೆಡ್‌ಬ್ಯಾಂಡ್ ಸಾಕಷ್ಟು ಫ್ಲೆಕ್ಸ್ ಆಗಿದ್ದು, ಯಾರಿಗಾದರೂ ಹೊಂದಿಕೊಳ್ಳುತ್ತದೆ. ಜೊತೆಗೆ 7.1 ಸರೌಂಡ್ ಸೌಂಡ್ ಆಯ್ಕೆ ಪಡೆದುಕೊಂಡಿದ್ದು, ಸಾಫ್ಟ್‌ವೇರ್‌ನಲ್ಲಿ ನೀವು ನಿಮಗೆ ಇಷ್ಟಬಂದ ಹಾಗೆ EQ ಮಾಡಬಹುದಾಗಿದೆ. ಇದರೊಂದಿಗೆ ಡಿಟ್ಯಾಚೇಬಲ್ ಮೈಕ್ ಆಯ್ಕೆ ಸಹ ನೀಡಲಾಗಿದ್ದು, ಉಳಿದಂತೆ ಪೂರ್ಣ ಚಾರ್ಜಿಂಗ್‌ನಲ್ಲಿ 28 ಗಂಟೆಗಳ ಕಾಲ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ. ಈ ಡಿವೈಸ್‌ನ ಆರಂಭಿಕ ಬೆಲೆ 11 ಸಾವಿರ.

ಗೇಮಿಂಗ್ ಪ್ರಿಯರಿಗೆ ಈ ಹೆಡ್‌ಫೋನ್‌ಗಳು ಅತ್ಯುತ್ತಮ ಆಯ್ಕೆ, ತಲ್ಲೀನಗೊಳಿಸುವ ಅನುಭವ

ರೇಜರ್ ಬ್ಲ್ಯಾಕ್‌ಶಾರ್ಕ್ V2 ಪ್ರೊ ವಾಯರ್‌ಲೆಸ್‌ ಮತ್ತು ವೈರ್ಡ್: ಈ ಡಿವೈಸ್‌ 50 ಮಿಲಿಮೀಟರ್ ಟೈಟಾನಿಯಂ ಡ್ರೈವರ್‌ಗಳನ್ನು ಹೊಂದಿದ್ದು ಅದ್ಭುತ ಧ್ವನಿ ಗುಣಮಟ್ಟವನ್ನು ನೀಡುತ್ತದೆ. ಜೊತೆಗೆ ಮೈ ನವಿರೇಳಿಸುವ ಬೇಸ್‌ ಸೌಲಭ್ಯ ನೀಡಲಾಗಿರುವುದರಿಂದ ಗೇಮಿಂಗ್‌ ನಲ್ಲಿ ಹೆಚ್ಚು ತಲ್ಲೀನವಾಗುವಂತೆ ಮಾಡುತ್ತದೆ. ಜೊತೆಗೆ 9.9 ಮಿಲಿಮೀಟರ್ ಹೈಪರ್ ಕ್ಲಿಯರ್ ಸೂಪರ್-ಕಾರ್ಡಿಯೊಯ್ಡ್ ಮೈಕ್ರೊಫೋನ್ ಆಯ್ಕೆಯನ್ನೂ ಸಹ ಹೊಂದಿದೆ. ಈ ಡಿವೈಸ್‌ನ ಆರಂಭಿಕ ಬೆಲೆ 11 ಸಾವಿರ.

Best Mobiles in India

English summary
There are many headphones available in the market that are made with a focus on gaming enthusiasts. Here is a list of the most important headphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+