ನೀವು ಜಿಯೋ ಗ್ರಾಹಕರಾಗಿದ್ದರೇ ಈ ಪ್ಲ್ಯಾನ್‌ಗಳಲ್ಲಿ ಒಂದನ್ನು ಆಯ್ದುಕೊಳ್ಳಿರಿ!
ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್ ಜಿಯೋ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಹಲವು ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರನ್ನು ಆಕರ್ಷಿಸಿದೆ. ಜಿಯೋ ಟೆಲಿಕಾಂನ ಬಹುತೇಕ ಪ್ರೀಪೇಯ್ಡ್ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ಪ್ರತಿದಿನದ ಡೇಟಾ ಸೌಲಭ್ಯವನ್ನು ಪಡೆದಿವೆ. ಮುಖ್ಯವಾಗಿ ಬಜೆಟ್ ಬೆಲೆಯಲ್ಲಿನ ದೀರ್ಘಾವಧಿ ಯೋಜನೆಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ.

ಹೌದು, ಜಿಯೋ ಕಂಪನಿಯು ಇತ್ತೀಚಿಗೆ ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದ್ದು, ಇದರೊಂದಿಗೆ ಕಡಿಮೆ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳಲ್ಲಿಯೂ ಸಹ ಹೆಚ್ಚುವರಿ ಡೇಟಾ, ಉಚಿತ ಕರೆ, ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಹೆಚ್ಚಿನ ಚಂದಾದಾರರು 56 ಅಥವಾ 84 ದಿನಗಳ ವ್ಯಾಲಿಡಿಟಿ ಅವಧಿಯ ಯೋಜನೆಗಳನ್ನು ರೀಚಾರ್ಜ್ ಮಾಡಿಸಲು ಮನಸು ಮಾಡುತ್ತಾರೆ. ಹಾಗಾದರೇ ಜಿಯೋ ಟೆಲಿಕಾಂನ ಜನಪ್ರಿಯ ಪ್ರೀಪೇಡ್ ಪ್ಲ್ಯಾನ್‌ಗಳು ಯಾವುವು ಮತ್ತು ಅವುಗಳ ಸೌಲಭ್ಯಗಳೆನು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 399ರೂ. ಪ್ರೀಪೇಯ್ಡ್ ಪ್ಲಾನ್
ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

ಜಿಯೋ 444ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ.

ಜಿಯೋ 555ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 599ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.


Click it and Unblock the Notifications








