Home
ಸುದ್ದಿಜಾಲ

ವಾರ್ಷಿಕ ವ್ಯಾಲಿಡಿಟಿ ಜೊತೆಗೆ ಡೈಲಿ 2GB ಡೇಟಾ ಬೇಕಿದ್ದರೇ ಇವೇ ಬೆಸ್ಟ್‌ ಪ್ಲ್ಯಾನ್‌!

ಪ್ರಸ್ತುತ ಟೆಲಿಕಾಂ ಬಳಕೆದಾರರು ಡೇಟಾ ಹಾಗೂ ಅಧಿಕ ವ್ಯಾಲಿಡಿಟಿ ಸೌಲಭ್ಯ ಬಯಸುತ್ತಾರೆ. ಈ ನಿಟ್ಟಿನಲ್ಲಿ ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಗಳು ಯೋಜನೆ ಪ್ರತಿದಿನ ಡೇಟಾ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ 2GB ಡೇಟಾದ ಯೋಜನೆಗಳು ಗ್ರಾಹಕರ ಗಮನ ಹೆಚ್ಚಾಗಿ ಸೆಳೆದಿವೆ.

ಏರ್‌ಟೆಲ್‌

ಹೌದು, ಜಿಯೋ, ಏರ್‌ಟೆಲ್‌ ಟೆಲಿಕಾಂಗಳ ಬಹುತೇಕ ಯೋಜನೆಗಳು ಹೆಚ್ಚಿನ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯ ಹೊಂದಿವೆ. ಆದರೆ ಅವುಗಳಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಒಳಗೊಂಡ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ. ಹಾಗೆಯೇ ವಾರ್ಷಿಕ ಯೋಜನೆಗಳು ಅನಿಯಮಿತ ವಾಯಿಸ್‌ ಕರೆಯ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಪಡೆದಿವೆ. ಹಾಗಾದರೇ ಜಿಯೋ, ವೊಡಾಫೋನ್-ಐಡಿಯಾ ಮತ್ತು ಏರ್‌ಟೆಲ್‌ ವಾರ್ಷಿಕ ಪ್ಲ್ಯಾನ್‌ಗಳ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 2498ರೂ. ಯೋಜನೆ

ಏರ್‌ಟೆಲ್‌ 2498ರೂ. ಯೋಜನೆ

ಏರ್‌ಟೆಲ್‌ನ ಹೊಸ 2498ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗುತ್ತದೆ.

ಜಿಯೋ 2599ರೂ. ಯೋಜನೆ

ಜಿಯೋ 2599ರೂ. ಯೋಜನೆ

ಜಿಯೋ 2599ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಜಿಯೋ ಟು ಜಿಯೋ ಅನಿಯಮಿತ ವಾಯಿಸ್‌ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ ಸಹ ಲಭ್ಯವಾಗಲಿವೆ.

ವೊಡಾಫೋನ್-ಐಡಿಯಾದ 2595ರೂ. ಯೋಜನೆ

ವೊಡಾಫೋನ್-ಐಡಿಯಾದ 2595ರೂ. ಯೋಜನೆ

ವೊಡಾಫೋನ್‌-ಐಡಿಯಾದ 2595ರೂ. ಪ್ಲ್ಯಾನ್ ಒಂದು ವಾರ್ಷಿಕ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಹಾಗೂ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಇದರೊಂದಿಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ZEE5 ಪ್ರೀಮಿಯಂ ಆಕ್ಸಸ್‌ ಸೌಲಭ್ಯ ಇದೆ.

Best Mobiles in India

English summary
Airtel, Jio and Vi telecom this plans offer 365-days validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+