Home
ಸುದ್ದಿಜಾಲ

ನಿಮಗೆ ದಿನವು 3GB ಡೇಟಾ ಅಗತ್ಯವಿದ್ದರೇ, ರೀಚಾರ್ಜ್‌ಗೆ ಇವೇ ಬೆಸ್ಟ್‌ ಪ್ಲ್ಯಾನ್ಸ್‌!

ಭಾರತದ ಟೆಲಿಕಾಂ ವಲಯದಲ್ಲಿ ಜಿಯೋ, ವೊಡಾಫೋನ್-ಐಡಿಯಾ(ವಿ) ಮತ್ತು ಏರ್‌ಟೆಲ್‌ ಸಂಸ್ಥೆಗಳು ಪರಸ್ಪರ ಸ್ಪರ್ಧಾತ್ಮಕವಾಗಿ ಮುನ್ನುಗುತ್ತಿವೆ. ಈ ಮೂರು ಟೆಲಿಕಾಂಗಳು ಈಗಾಗಲೇ ಪ್ರತಿದಿನ ಅಧಿಕ ಡೇಟಾ ಪ್ರಯೋಜನದ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಬಹುತೇಕ ಯೋಜನೆಗಳು ಡೇಟಾ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ, ಅನಿಯಮಿತ ಕರೆ ಸೌಲಭ್ಯಗಳನ್ನು ಒಳಗೊಂಡಿವೆ. ಆ ಪೈಕಿ ಡೈಲಿ 3GB ಡೇಟಾದ ಯೋಜನೆಗಳು ಹೆಚ್ಚು ಅಟ್ರ್ಯಾಕ್ಟ್‌ ಮಾಡಿವೆ.

ಜಿಯೊ, ವಿ ಮತ್ತು ಏರ್‌ಟೆಲ್

ಹೌದು, ಜಿಯೊ, ವಿ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಪ್ರತಿದಿನ 3GB ಡೇಟಾ ಪ್ರಯೋಜನ ಒದಗಿಸುವ ಕೆಲವು ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿವೆ. ಈ ಯೋಜನೆಗಳಲ್ಲಿ ಬಳಕೆದಾರರಿಗೆ ಪ್ರತಿದಿನ ಡೇಟಾ ಸೌಲಭ್ಯದ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ, ಎಸ್‌ಎಮ್‌ಎಸ್‌ ಪ್ರಯೋಜನ ಹಾಗೂ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಸಹ ಲಭ್ಯವಾಗಲಿವೆ. ಅಧಿಕ ಡೇಟಾ ಬಯಸುವ ಗ್ರಾಹಕರು ಜಿಯೋ, ವಿ ಮತ್ತು ಏರ್‌ಟೆಲ್‌ನ 3GB ಡೇಟಾ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾದರೇ ಜಿಯೋ, ವಿ ಮತ್ತು ಏರ್‌ಟೆಲ್ ಟೆಲಿಕಾಂಗಳ 3GB ಡೇಟಾ ಸೌಲಭ್ಯದ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಜಿಯೋ 349ರೂ. ಪ್ಲ್ಯಾನ್

ಜಿಯೋ 349ರೂ. ಪ್ಲ್ಯಾನ್

ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಿದ್ದು, ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯುತ್ತದೆ. ಇದರೊಂದಿದೆ ವಾಯಿಸ್‌ ಕರೆಗಾಗಿ ಒಟ್ಟು 1000 ನಿಮಿಷಗಳ ಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಜಿಯೋ 999ರೂ.ಪ್ಲ್ಯಾನ್

ಜಿಯೋ 999ರೂ.ಪ್ಲ್ಯಾನ್

ಜಿಯೋ 999ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟವರ್ಕ್ ಕರೆಗಳಿಗೆ 3,000 ನಿಮಿಷಗಳ ಮಿತಿ ಇರಲಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆಪ್ ಸೇವೆಗಳು ಸಹ ಸಿಗುತ್ತವೆ.

ಜಿಯೋ 401ರೂ. ಪ್ಲ್ಯಾನ್

ಜಿಯೋ 401ರೂ. ಪ್ಲ್ಯಾನ್

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಏರ್‌ಟೆಲ್‌ 558ರೂ. ಪ್ಲ್ಯಾನ್‌

ಏರ್‌ಟೆಲ್‌ 558ರೂ. ಪ್ಲ್ಯಾನ್‌

ಏರ್‌ಟೆಲ್‌ನ 558ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಲಿದೆ. ಹಾಗೆಯೇ ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಸಿಗಲಿದೆ.

ಏರ್‌ಟೆಲ್‌ 398ರೂ. ಪ್ಲ್ಯಾನ್‌

ಏರ್‌ಟೆಲ್‌ 398ರೂ. ಪ್ಲ್ಯಾನ್‌

ಏರ್‌ಟೆಲ್‌ನ 398ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಲಿದೆ. ಹಾಗೆಯೇ ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನ ಸಹ ಸಿಗಲಿದೆ. ಹೆಚ್ಚುವರಿ ಸೇವೆಗಳು ಲಭ್ಯ.

ವಿ ಟೆಲಿಕಾಂ 299ರೂ. ಪ್ಲ್ಯಾನ್

ವಿ ಟೆಲಿಕಾಂ 299ರೂ. ಪ್ಲ್ಯಾನ್

ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸೌಲಭ್ಯ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 499ರೂ. ಪ್ಲ್ಯಾನ್

ವಿ ಟೆಲಿಕಾಂ 499ರೂ. ಪ್ಲ್ಯಾನ್

ವಿ ಟೆಲಿಕಾಂನ 499ರೂ. ಪ್ಲ್ಯಾನ್‌ ಸಹ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ವಿ ಟೆಲಿಕಾಂ 699ರೂ. ಪ್ಲ್ಯಾನ್

ವಿ ಟೆಲಿಕಾಂ 699ರೂ. ಪ್ಲ್ಯಾನ್

ವಿ ಟೆಲಿಕಾಂನ 699ರೂ. ಪ್ಲ್ಯಾನ್‌ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ. ಸದ್ಯ ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

Best Mobiles in India

English summary
Airtel, Jio, and Vi offer several plans offering a 3GB daily data benefit for less than Rs 1000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+