Home
ಸುದ್ದಿಜಾಲ

ಬಿಗ್ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 1.5GB ಡೇಟಾ ಬೇಕಿದ್ರೆ, ಇವೇ ಬೆಸ್ಟ್‌ ಪ್ಲ್ಯಾನ್ಸ್‌!

ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿದಿನ ಅಧಿಕ ಡೇಟಾ ಸೌಲಭ್ಯ ಪಡೆದಿರುವ ಯೋಜನೆಗಳನ್ನು ರೀಚಾರ್ಜ್ ಮಾಡಲು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ದೇಶದ ಟೆಲಿಕಾಂ ಸಂಸ್ಥೆಗಳು ಅತ್ಯುತ್ತಮ ಡೇಟಾ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್ ಮೂರು ಟೆಲಿಕಾಂಗಳು ಪೈಪೋಟಿಯಲ್ಲಿ ಆಕರ್ಷಕ ಡೇಟಾ ಪ್ರಯೋಜನ ನೀಡುವ ಪ್ಲ್ಯಾನ್‌ ಲಾಂಚ್ ಮಾಡಿವೆ.

ಏರ್‌ಟೆಲ್‌

ಹೌದು, ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್ ಟೆಲಿಕಾಂಗಳು ಭಿನ್ನ ಡೇಟಾ ಪ್ರಯೋಜನದ ಯೋಜನೆಗಳನ್ನು ಹೊಂದಿದೆ. ಅವುಗಳಲ್ಲಿ ಪ್ರತಿದಿನ 1GB, 1.5GB, 2GB ಡೇಟಾ ಸೌಲಭ್ಯದ ಆಯ್ಕೆಗಳಿವೆ. ಗ್ರಾಹಕರು ಅವರ ಅನುಕೂಲಕ್ಕೆ ಅನುಗುಣವಾಗಿ ಡೈಲಿ 1.5GB ಅಥವಾ ಡೈಲಿ 2GB ಸೌಲಭ್ಯದ ಯೋಜನೆ ರೀಚಾರ್ಜ್‌ ಮಾಡಿಸುತ್ತಾರೆ. ಇದರೊಂದಿಗೆ ವಾಯಿಸ್‌ ಕರೆ, ಎಸ್‌ಎಮ್‌ಎಸ್‌ನಂತಹ ಸೌಲಭ್ಯಗಳನ್ನು ಪಡೆದಿದೆ. ಹಾಗಾದರೇ ಜಿಯೋ, ಏರ್‌ಟೆಲ್‌ ಹಾಗೂ ವೊಡಾಫೋನ್ ನಲ್ಲಿ ಪ್ರತಿದಿನ 1.5GB ಪ್ರಯೋಜನದ ಯಾವ ಯೋಜನೆ ಉತ್ತಮ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 555ರೂ. ಯೋಜನೆ

ಜಿಯೋ 555ರೂ. ಯೋಜನೆ

ಜಿಯೋ 555ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಇನ್ನು ಇತರೆ ನೆಟವರ್ಕ್ 3000 ನಿಮಿಷಗಳ ವಾಯಿಸ್‌ ಕರೆಯ ಮಿತಿಯನ್ನು ಒಳಗೊಂಡಿದೆ.

ವಿ ಟೆಲಿಕಾಂ 555ರೂ. ಯೋಜನೆ

ವಿ ಟೆಲಿಕಾಂ 555ರೂ. ಯೋಜನೆ

ವಿ ಟೆಲಿಕಾಂನ ಈ 555ರೂ. ಪ್ರೀಪೇಡ್‌ ಪ್ಲ್ಯಾನ್ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ ಆಗಿದ್ದು, ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡಾಟಾ ಹಾಗೂ 100 ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡಲಿದೆ. ಹಾಗೆಯೇ ಅನಿಯಮಿತ ಕರೆಗಳ ಸೌಲಭ್ಯವನ್ನು ಪಡೆದಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿನ ಮನರಂಜನೆಯ ಸೇವೆಗಳ ಸೌಲಭ್ಯ ಸಹ ಒದಗಿಸಲಿದೆ.

ಏರ್‌ಟೆಲ್‌ 598ರೂ. ಯೋಜನೆ

ಏರ್‌ಟೆಲ್‌ 598ರೂ. ಯೋಜನೆ

ಏರ್‌ಟೆಲ್‌ 598ರೂ. ಪ್ಲ್ಯಾನ್ ಏರ್‌ಟೆಲ್‌ 598ರೂ.ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ.ಹಾಗೂ ರೋಮಿಂಗ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನಗಳು ದೊರೆಯಲಿದೆ.

Best Mobiles in India

English summary
These Jio, Airtel And Vi Prepaid Plans Offers Daily 1.5GB data With Best Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+