ಜಿಯೋದ ಈ ವಾರ್ಷಿಕ ಪ್ಲ್ಯಾನ್ ರೀಚಾರ್ಜ್‌ನಲ್ಲಿ ಭರ್ಜರಿ ಪ್ರಯೋಜನಗಳು!
ಭಾರತದ ಟೆಲಿಕಾಂ ವಲಯದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ರಿಲಾಯನ್ಸ್ ಜಿಯೋ, ಹಲವು ಬಿಗ ಡೇಟಾ ಯೋಜನೆ ಪರಿಚಯಿಸಿದೆ. ಹಾಗೆಯೇ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಡೇಟಾ ಜೊತೆ ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಜಿಯೋ ವಾರ್ಷಿಕ ಯೋಜನೆಗಳನ್ನು ಲಾಂಚ್ ಮಾಡಿದ್ದು, ಅವುಗಳಲ್ಲಿ ಜಿಯೋ 2599ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ಗಮನ ಸೆಳೆದಿದೆ.

ಹೌದು, ಜಿಯೋ ಟೆಲಿಕಾಂನ 2599ರೂ. ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಒಟ್ಟು 740GB ಡೇಟಾ ಪ್ರಯೋಜನ, ವಾಯಿಸ್ ಕರೆ, ಎಸ್‌ಎಮ್ಎಸ್ ಸೌಲಭ್ಯ ಸೇರಿದಂತೆ ಹೆಚ್ಚುವರಿ ಕೊಡುಗೆಗಳು ಲಭ್ಯ ಇವೆ. ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಪ್ರಯೋಜನ ಬಯಸುವ ಗ್ರಾಹಕರಿಗೆ ಈ ಯೋಜನೆ ಯೋಗ್ಯವೇ?..ಇಲ್ಲಿದೆ ಮಾಹಿತಿ.

ಜಿಯೋ 2599ರೂ.ಪ್ಲ್ಯಾನ್ ಪ್ರಯೋಜನಗಳೆನು
ಜಿಯೋ ಹೊಸ 2599ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಜಿಯೋ ಟು ಜಿಯೋ ಅನಿಯಮಿತ ವಾಯಿಸ್ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ಹಾಟ್‌ಸ್ಟಾರ್ ಡಿಸ್ನಿ ಪ್ಲಸ್ ಚಂದಾದಾರಿಕೆ ಲಭ್ಯ. ಜಿಯೋದ ಇತರೆ ದೀರ್ಘಾವಧಿಯ ಯೋಜನೆಗಳ ಬಗ್ಗೆ ಮುಂದೆ ನೊಡೋಣ ಬನ್ನಿರಿ.

ಜಿಯೋ 2399ರೂ. ಪ್ಲಾನ್
ಜಿಯೋ ಹೊಸ 2,399ರೂ. ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಜಿಯೋ ಟು ಜಿಯೋ ಅನಿಯಮಿತ ವಾಯಿಸ್ ಕರೆಗಳು ಸೇರಿದಂತೆ ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಸೌಲಭ್ಯ ಪಡೆದಿದೆ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ 4999ರೂ. ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ ದೊಡ್ಡ ಮೊತ್ತದ ಪ್ಲ್ಯಾನ್ ಆಗಿದ್ದು, ಒಟ್ಟು 360 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 350GB ಡೇಟಾ ಸೌಲಭ್ಯ ಇರುತ್ತದೆ. ಹಾಗೆಯೇ ಜಿಯೋ ಟು ಜಿಯೋ ಕರೆಗಳು ಉಚಿತವಾಗಿರುತ್ತವೆ ಹಾಗೂ ಇತರೆ ಟೆಲಿಕಾಂ ಕರೆಗಳಿಗೆ 12000 ನಿಮಿಷಗಳ ಉಚಿತ ವಾಯಿಸ್ ಕರೆ ಮಿತಿ ಇರುತ್ತದೆ. ಉಳಿದಂತೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳು ಲಭ್ಯವಾಗುತ್ತವೆ.


Click it and Unblock the Notifications








