ಕಡಿಮೆ ಪ್ರೈಸ್‌ಟ್ಯಾಗನಲ್ಲಿ ಲಭ್ಯವಿರುವ 100Mbps ವೇಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳು!

|

ಪ್ರಸ್ತುತ ಇಂಟರ್ನೆಟ್‌ ಪ್ರತಿಯೊಬ್ಬರ ಅಗತ್ಯ ಸೇವೆ ಆಗಿದ್ದು, ಈ ನಿಟ್ಟಿನಲ್ಲಿ ದೇಶದ ಟೆಲಿಕಾಂ ಸಂಸ್ಥೆಗಳು ಸಹ ಆಕರ್ಷಕ ದರದಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಅವುಗಳಲ್ಲಿ ಮುಖ್ಯವಾಗಿ ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎನ್‌ ಹಾಗೂ ಎಸಿಟಿ ಫೈಬರ್‌ ಕಂಪನಿಗಳು ಗ್ರಾಹಕರ ಗಮನ ಸೆಳೆದಿವೆ. ಬಜೆಟ್‌ ದರಲ್ಲಿ ಹಲವು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅದರಲ್ಲಿ 100mbps ವೇಗದ ಯೋಜನೆಗಳು ಹೆಚ್ಚು ಉಪಯುಕ್ತ ಅನಿಸಿವೆ.

ಜಿಯೋ

ಹೌದು, ಜನಪ್ರಿಯ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವೇಗದ ಸೇವೆಯ ಯೋಜನೆಗಳನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ಏರ್‌ಟೆಲ್‌, ಬಿಎಸ್‌ಎನ್‌ಎಲ್‌, ಜಿಯೋ ಹಾಗೂ ACT ಫೈಬರ್‌ನೆಟ್‌ ಹೆಚ್ಚು ಗಮನ ಸೆಳೆದಿವೆ. ಈ ಸಂಸ್ಥೆಗಳು ಆರಂಭಿಕ ಪ್ಲ್ಯಾನ್‌ ಶುಲ್ಕವು ತಿಂಗಳಿಗೆ 1,000ರೂ.ಆಸುಪಾಸಿನಲ್ಲಿದ್ದು, 100 Mbps ವೇಗದ ಡೇಟಾ ಸೇವೆಯ ಪ್ರಯೋಜನೆ ನೀಡುವುದಾಗಿ ಹೇಳಿವೆ. ಹಾಗಾದರೇ 100Mbps ವೇಗದ ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ದರಗಳೆನು ಮತ್ತು ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್

ಬಿಎಸ್‌ಎನ್ಎಲ್ ಬ್ರಾಡ್‌ಬ್ಯಾಂಡ್

ಬಿಎಸ್‌ಎನ್ಎಲ್ ಸಂಸ್ಥೆಯು ಬ್ರಾಡ್‌ಬ್ಯಾಂಡ್‌ ವಲಯದಲ್ಲಿ ಗುರುತಿಸಿಕೊಂಡಿದ್ದು, ಸಂಸ್ಥೆಯ 1277ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 100 Mbps ವೇಗದ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಲ್ಯಾನಿನಲ್ಲಿ 750GB ಡೇಟಾ ಸೌಲಭ್ಯವು ದೊರೆಯಲಿದ್ದು, ಈ ನಿಗದಿತ ಡೇಟಾ ಮುಗಿದ ಬಳಿಕ 2 Mbps ಸಾಮರ್ಥ್ಯದಲ್ಲಿ ಇಂಟರ್ನೆಟ್‌ ಮುಂದುವರೆವುದು. ಅನಿಯಮಿತ ಲ್ಯಾಂಡ್‌ಲೈನ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ.

ಜಿಯೋ ಬ್ರಾಡ್‌ಬ್ಯಾಂಡ್‌

ಜಿಯೋ ಬ್ರಾಡ್‌ಬ್ಯಾಂಡ್‌

ಜಿಯೋ ಸಂಸ್ಥೆಯು 100 Mbps ನಿಂದ 1 Gbps ವರೆಗಿನ ಹಲವು ಪ್ಲ್ಯಾನ್‌ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಆರಂಭಿಕ ಯೋಜನೆಯು 100mbps ವೇಗದಲ್ಲಿ ಗಮನ ಸೆಳೆದಿದೆ. ಜಿಯೋ 699ರೂ.ಗಳ ಆರಂಭಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 100mbps ವೇಗದ ಸೌಲಭ್ಯವನ್ನು ಪಡೆದಿದ್ದು, ಒಟ್ಟು 1200GB ಡೇಟಾ ಪ್ರಯೋಜನ ಒದಗಿಸಲಿದೆ. ಇದರೊಂದಿಗೆ ಜಿಯೋದ ಇತರೆ ಪ್ರಯೋಜನಗಳು ಸಹ ಲಭ್ಯವಾಗಲಿವೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಅವುಗಳಲ್ಲಿ 799ರೂ. ಪ್ಲ್ಯಾನ್ ಹೆಚ್ಚು ಆಕರ್ಷಿಸಿದೆ. ಈ ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ದೊರೆಯಲಿದ್ದು, ತಿಂಗಳಿಗೆ 150GB FUP ಮಿತಿ ನೀಡಲಾಗಿದೆ. ಈ ಪ್ಯಾನಿನೊಂದಿಗೆ ಏರ್‌ಟೆಲ್ ಎಕ್ಸ್‌ಟ್ರಿಮ್‌ ಸದಸ್ಯತ್ವ ದೊರೆಯಲಿದ್ದು, ಜೊತೆಗೆ ಅನಿಯಮಿತ ಉಚಿತ ಕರೆಗಳು ಪ್ರಯೋಜನ ಸಿಗಲಿದೆ.

ACT ಫೈಬರ್‌ನೆಟ್‌

ACT ಫೈಬರ್‌ನೆಟ್‌

ACT ಫೈಬರ್‌ನೆಟ್‌ ಸಹ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಗಳನ್ನು ಹೊಂದಿದ್ದು, 100 Mbps ವೇಗದ ಆರಂಭಿಕ ಪ್ಲ್ಯಾನ್ 799ರೂ.ಗಳಾಗಿದೆ (ದೆಹಲಿಯಲ್ಲಿ). ಇದೇ ಪ್ಲ್ಯಾನ್‌ ಹೈದ್ರಾಬಾದನಲ್ಲಿ ಟಾಕ್ಸ್‌ ಹೊರತುಪಡಿಸಿ 1,075ರೂ. ಆಗಿದೆ. ಈ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ 1000GB ಡೇಟಾ ಸೌಲಭ್ಯವು ದೊರೆಯಲಿದ್ದು, ನಿಗದಿತ ಡೇಟಾ ಬಳಕೆ ಮುಗಿತ ಬಳಿಕ FUP ವೇಗದ ಮಿತಿಯು 5 Mbps ಸಾಮರ್ಥ್ಯದಲ್ಲಿರಲಿದೆ.

Best Mobiles in India

English summary
These Jio, Bsnl, Airtel And ACT Broadband Plans Offers Attractive Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X