Home
ಸುದ್ದಿಜಾಲ

ಜಿಯೋ ಟೆಲಿಕಾಂನ ಈ ಕ್ರಿಕೆಟ್‌ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಆಕರ್ಷಕ ಪ್ರಯೋಜನ!

ದೇಶದ ಟೆಲಿಕಾಂ ಸಂಸ್ಥೆಗಳು ಸದ್ಯದ ದಿನಗಳಲ್ಲಿ ಅಧಿಕ ಡೇಟಾ, ಹೆಚ್ಚಿನ ವ್ಯಾಲಿಡಿಟಿ ಸೌಲಭ್ಯ ನೀಡಿ ಚಂದಾದಾರರನ್ನು ಆಕರ್ಷಿಸುತ್ತಿವೆ. ಇದರೊಂದಿಗೆ ಜೊತೆಗೆ ಕೆಲವು ಆಯ್ದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಹೆಚ್ಚುವರಿಯಾಗಿ OTT ಓಟಿಟಿ ಸೇವೆಗಳ ಪ್ರಯೋಜನ ಲಭ್ಯ ಮಾಡಿವೆ. ಆ ಪೈಕಿ ಜಿಯೋ ಟೆಲಿಕಾಂ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ ಉಚಿತ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ನೀಡಿದೆ. ಈ ಯೋಜನೆಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆ ಜೊತೆಗೆ ಇತರೆ ಹೆಚ್ಚುವರಿ ಪ್ರಯೋಜನ ಗಳನ್ನು ಹೊಂದಿವೆ.

ಜಿಯೋ ಟೆಲಿಕಾಂನ ಈ ಕ್ರಿಕೆಟ್‌ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಆಕರ್ಷಕ ಪ್ರಯೋಜನ!

ಹೌದು, ಜಿಯೋ ಟೆಲಿಕಾಂ ಜನಪ್ರಿಯ ಓಟಿಟಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯ ಕ್ರಿಕೆಟ್‌ (CRICKET PLAN) ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ಹೊಂದಿವೆ. ಆ ಪೈಕಿ ಕೆಲವು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಯೋಜನೆಗಳು ಬಜೆಟ್‌ ದರದಲ್ಲಿ ಕಾಣಿಸಿಕೊಂಡಿದ್ದರೆ, ಮತ್ತೆ ಕೆಲವು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ದುಬಾರಿ ಪ್ರೈಸ್‌ಟ್ಯಾಗ್‌ ಪಡೆದಿವೆ. ಜಿಯೋ ಟೆಲಿಕಾಂಗಳು ಭಿನ್ನ ದರದಲ್ಲಿ ಯೋಜನೆಯ ಆಯ್ಕೆ ಹೊಂದಿದ್ದು, ಹಾಗೆಯೇ ಭಿನ್ನ ವ್ಯಾಲಿಡಿಟಿ, ಡೇಟಾ ಪ್ರಯೋಜನದ ಸೌಲಭ್ಯದ ಆಯ್ಕೆಗಳನ್ನು ಪಡೆದಿವೆ. ಹಾಗಾದರೇ ದುಬಾರಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸೌಲಭ್ಯದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ಓದಿರಿ.

ಜಿಯೋ 499ರೂ. ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು
ಜಿಯೋ 499ರೂ. ಪ್ರಿಪೇಯ್ಡ್ ಪ್ಲಾನ್‌ ದೈನದಿನ 2GB ಡೇಟಾ ಮತ್ತು ಡೈಲಿ 100 SMS ಪ್ರಯೋಜನ ನೀಡಲಿದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಈ ಪ್ಲಾನ್‌ ನಿಮಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಿದೆ. ಇದು ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ಗೆ ಒಂದು ವರ್ಷದ ಪ್ರವೇಶವನ್ನು ನೀಡುತ್ತದೆ. ಹಾಗೆಯೇ ಜಿಯೋ ಸಿನಿಮಾ ಮತ್ತು ಜಿಯೋಟಿವಿ ಅಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಿದೆ.

ಜಿಯೋ ಟೆಲಿಕಾಂನ ಈ ಕ್ರಿಕೆಟ್‌ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಆಕರ್ಷಕ ಪ್ರಯೋಜನ!

ಜಿಯೋ 2999ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಒಟ್ಟು ಪೂರ್ಣ ಅವಧಿಗೆ 912.5GB ಡೇಟಾ ಪ್ರಯೋಜನ ಸಿಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸೌಲಭ್ಯ ಸಿಗಲಿದೆ. ಜಿಯೋದ ಇತರೆ ಆಪ್‌ಗಳ ಸೇವೆ ಲಭ್ಯವಾಗಲಿವೆ.

ಜಿಯೋ 3119ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ರಿಲಾಯನ್ಸ್‌ ಜಿಯೋ ಟೆಲಿಕಾಂನ 3119 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ (ಹೆಚ್ಚುವರಿ 10 GB ಸಿಗಲಿದೆ) ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 740 GB ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ ಜಿಯೋ ಟೆಲಿಕಾಂ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ.

Best Mobiles in India

English summary
These Jio Cricket Plan Offers Disney+ Hotstar Subscription and Daily Data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+