ಜಿಯೋ ಫೋನ್ ರೀಚಾರ್ಜ್ ಮಾಡಬೇಕೆ?..ಇಲ್ಲಿವೇ ನೋಡಿ ಆಕರ್ಷಕ ಪ್ಲ್ಯಾನ್‌ಗಳು!
ರಿಲಾಯನ್ಸ್ ಜಿಯೋ ಟೆಲಿಕಾಂ ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಜಿಯೋ ಟೆಲಿಕಾಂ ಚಂದಾದಾರರಿಗೆ ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳ ಲಿಸ್ಟ್ ಅನ್ನು ಪರಿಚಯಿಸಿದೆ. ಅವುಗಳಲ್ಲಿ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳು ಸೇರಿವೆ. ಹಾಗೆಯೇ ಜಿಯೋ ಫೋನ್ ಬಳಕೆದಾರರಿಗಾಗಿ ಕೆಲವು ಪ್ರತ್ಯೇಕ ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ.

ಹೌದು, ಜಿಯೋ ಸಂಸ್ಥೆಯು ತನ್ನ ಜಿಯೋ ಫೋನ್ ಬಳಕೆದಾರರಿಗೆ ಕೆಲವು ರೀಚಾರ್ಜ್ ಆಯ್ಕೆಗಳನ್ನು ನೀಡಿದೆ. ಅವುಗಳಲ್ಲಿ ಪ್ರತಿದಿನ ಡೇಟಾ ಸೌಲಭ್ಯದ ಯೋಜನೆಗಳು ಸೇರಿದ್ದು, ಅತ್ಯುತ್ತಮ ವ್ಯಾಲಿಡಿಟಿಯ ಆಯ್ಕೆ ಸಹ ಪಡೆದಿವೆ. ಆರಂಭಿಕ 75ರೂ.ಗಳಿಂದ ಒಂದು ತಿಂಗಳ ವ್ಯಾಲಿಡಿಟಿಯ ಯೋಜನೆಯ ಆಯ್ಕೆಗಳು ಇವೆ. ಪ್ರತಿ ಯೋಜನೆಯು ವಾಯಿಸ್ ಕರೆ ಸೌಲಭ್ಯವನ್ನು ಪಡೆದಿದೆ. ಹಾಗಾದರೇ ಜಿಯೋ ಫೋನ್ ಗ್ರಾಹಕರಿಗೆ ರೀಚಾರ್ಜ್ ಮಾಡಿಸಲು ಲಭ್ಯ ಇರುವ ಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 75ರೂ. ಪ್ಲಾನ್
ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 125ರೂ. ಪ್ಲಾನ್
ಜಿಯೋದ ಈ 125ರೂ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 14GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 155ರೂ. ಪ್ಲಾನ್
ಜಿಯೋದ ಈ 155ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 28GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 1GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋ 185ರೂ. ಪ್ಲಾನ್
ಜಿಯೋದ ಈ 185ರೂ. ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪ್ರತಿದಿನ 2GB ಡೇಟಾ ಬಳಕೆ ಮಾಡಬಹುದು. ಇದರೊಂದಿಗೆ ಪ್ರತಿದಿನ ಒಟ್ಟು 100 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಜಿಯೋ ಟು ಜಿಯೋ ಉಚಿತ ಕರೆಗಳ ಸೌಲಭ್ಯ ಪಡೆದಿದ್ದು, ಇತರೆ ನೆಟ್ವರ್ಕ್‌ಗಳಿಗೆ 500 ನಿಮಿಷಗಳ ಕರೆ ಮಿತಿಯನ್ನು ಪಡೆದಿದೆ. ಇನ್ನು ಈ ಪ್ಲಾನ್ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.


Click it and Unblock the Notifications








