ಜಿಯೋದ ಈ ಅಗ್ಗದ ಪ್ಲ್ಯಾನ್‌ಗಳಿಗೆ ಖಂಡಿತಾ ನೀವು ಫಿದಾ ಆಗ್ತೀರಾ?
ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಇತ್ತೀಚೆಗೆ ಮೂರು ತಿಂಗಳ ವ್ಯಾಲಿಡಿಟಿ ಸೌಲಭ್ಯದೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಪ್ರಯೋಜನಗಳನ್ನು ಒಳಗೊಂಡಿರುವ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಬೆಲೆ ಕ್ರಮವಾಗಿ 151ರೂ, 333ರೂ, 583ರೂ ಮತ್ತು 783ರೂ ಆಗಿವೆ. ಈ ಎಲ್ಲಾ ನೂತನ ಯೋಜನೆಗಳು ಅಲ್ಪಾವಧಿ ವ್ಯಾಲಿಡಿಟಿ ಪಡೆದಿದ್ದು, ಜೊತೆಗೆ ಓಟಿಟಿ ಸೌಲಭ್ಯವನ್ನು ಒಳಗೊಂಡಿವೆ.

ಹೌದು, ಜಿಯೋ ಟೆಲಿಕಾಂನ 151ರೂ, 333ರೂ, 583ರೂ ಮತ್ತು 783ರೂ. ಈ ಪ್ರಿಪೇಯ್ಡ್ ಯೋಜನೆಗಳು ಆಕರ್ಷಕ ಎನಿಸಿವೆ. ಇನ್ನು ಈ ಯೋಜನೆಗಳು ಮೂರು ತಿಂಗಳ (Disney+ Hotstar) ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತವೆ. ಇದು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 499ರೂ. ಮೌಲ್ಯದ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುವ ಇತರ ಪ್ರಿಪೇಯ್ಡ್ ಯೋಜನೆಗಳಿಗಿಂತ ಭಿನ್ನವಾಗಿದೆ. ಹಾಗಾದರೇ ಜಿಯೋ 151ರೂ, 333ರೂ, 583ರೂ ಮತ್ತು 783ರೂ. ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಜಿಯೋ 151ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ಜಿಯೋ 151ರೂ. ಯೋಜನೆಯು ಡೇಟಾ ಮಾತ್ರ ಯೋಜನೆಯಾಗಿದ್ದು ಅದು ಬಳಕೆದಾರರಿಗೆ 8ಜಿಬಿ ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಸಹ ನೀಡುತ್ತದೆ.
ಜಿಯೋ 333ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ರಿಲಯನ್ಸ್ ಜಿಯೋದ 333ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 1.5ಜಿಬಿ ಡೇಟಾ ಮತ್ತು 28 ದಿನಗಳವರೆಗೆ 100 ಫ್ರೀ ಎಸ್ಎಂಎಸ್/ದಿನದೊಂದಿಗೆ ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಜಿಯೋ ಅಪ್ಲಿಕೇಶನ್‌ಗಳನ್ನು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಜೋಡಿಸಲಾಗುತ್ತದೆ. ಈ ಯೋಜನೆಯೊಂದಿಗೆ, ಹೊಸ ಗ್ರಾಹಕರಿಗೆ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಜಿಯೋ 583ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ರಿಲಯನ್ಸ್ ಜಿಯೋದ 583ರೂ. ಪ್ಲಾನ್ ಮತ್ತು 783ರೂ. ಪ್ರಿಪೇಯ್ಡ್ ಯೋಜನೆಗಳು ಅವುಗಳ ಮಾನ್ಯತೆಯನ್ನು ಹೊರತುಪಡಿಸಿ 333ರೂ. ಪ್ಲಾನ್‌ನಂತೆಯೇ ಇರುತ್ತವೆ. ಇನ್ನು ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು 56 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.
ಜಿಯೋ 783ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು
ಜಿಯೋ 783ರೂ. ಯೋಜನೆಯಲ್ಲಿ ಬಳಕೆದಾರರು 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಎರಡು ಯೋಜನೆಗಳೊಂದಿಗೆ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುವುದಿಲ್ಲ ಮತ್ತು ಹೊಸ ಬಳಕೆದಾರರಿಗೆ ಪ್ರೈಮ್ ಸದಸ್ಯತ್ವಕ್ಕಾಗಿ ರೂ 100 ಶುಲ್ಕ ವಿಧಿಸಲಾಗುತ್ತದೆ ಎಂಬುದು ಗಮನಾರ್ಹ ವಿಷಯವಾಗಿದೆ.


Click it and Unblock the Notifications








