ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಲು ಜಿಯೋದ ಈ ಪ್ಲ್ಯಾನ್ ಬೆಸ್ಟ್!
ಪ್ರಸ್ತುತ ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ಸಹ ದೈನಂದಿನ ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಜೊತೆಗೆ ದೀರ್ಘಾವಧಿ ವ್ಯಾಲಿಡಿಟಿ ಬಯಸುತ್ತಾರೆ. ಈ ನಿಟ್ಟಿನಲ್ಲಿ ಜಿಯೋ, ಏರ್ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಗ್ರಾಹಕ ಸ್ನೇಹಿ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಅವುಗಳಲ್ಲಿ ಜಿಯೋ ಟೆಲಿಕಾಂ ಕೆಲವು ದೀರ್ಘಾವಧಿ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಪ್ರಯೋಜನಗಳ ಯೋಜನೆಗಳನ್ನು ಹೊಂದಿದೆ.

ಹೌದು, ರಿಲಯನ್ಸ್ ಜಿಯೋ ಟೆಲಿಕಾಂ ಅಧಿಕ ಡೇಟಾದ ಹಲವು ಯೋಜನೆಗಳನ್ನು ಒಳಗೊಂಡಿವೆ. ಅವುಗಳಲ್ಲಿ ಪ್ರತಿದಿನ 2GB ಹಾಗೂ 3GB ಡೇಟಾ ಪ್ರಯೋಜನ ನೀಡುವ ಪ್ರೀಪೇಯ್ಡ್ ಯೋಜನೆಗಳು ಬಹುತೇಕ ಗ್ರಾಹಕರ ಗಮನ ಸೆಳೆದಿವೆ. ಇದರೊಂದಿಗೆ ಈ ಪ್ರೀಪೇಯ್ಡ್ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಸೌಲಭ್ಯ ಮತ್ತು ಅಧಿಕ ದಿನಗಳ ವ್ಯಾಲಿಡಿಟಿ ಸೌಲಭ್ಯಗಳನ್ನು ಪಡೆದಿವೆ. ಇನ್ನು ಕೆಲವು ಯೋಜನೆಗಳು ಡೈಲಿ ಡೇಟಾ ಮಿತಿ ಇರದ ಜೊತೆಗೆ ಓಟಿಟಿ ಪ್ರಯೋಜನಗಳನ್ನು ಪಡೆದಿವೆ. ದೈನಂದಿನ ಮಿತಿ ಇರದ ಅತ್ಯುತ್ತಮ ಡೇಟಾ ಪ್ರಯೋಜನ ಪಡೆದ ಜಿಯೋ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ 447ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 447ರೂ ಫ್ರೀಡಂ ರೀಚಾರ್ಜ್ ಯೋಜನೆಯಲ್ಲಿ ಒಟ್ಟು 60 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ. ಈ ಅವಧಿಗೆ ಒಟ್ಟು 50 ಜಿಬಿ ಡೇಟಾ ಪ್ರಯೋಜನ ನೀಡುತ್ತದೆ. ಇದರೊಂದಿಗೆ ಅನಿಯಲಿತ ವಾಯಿಸ್ ಕರೆ, ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಜಿಯೋ ಆಪ್ಸ್‌ಗಳ ಪ್ರಯೋಜನ ಸಿಗಲಿದೆ. ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ಇಲ್ಲ.

ಜಿಯೋ 597ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ 597ರೂ. ಪ್ರೀಪೇಯ್ಡ್ ಪ್ಲಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ ಒಟ್ಟು 75GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಡೇಟಾ ಬಳಕೆಗೆ ಯಾವುದೇ ದೈನಂದಿನ ಮಿತಿ ಇಲ್ಲ.

ಜಿಯೋ 2397ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ 2397ರೂ. ಫ್ರೀಡಂ ಪ್ಲ್ಯಾನ್ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಒಟ್ಟು 365GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಯೋಜನೆಯು ದೈನಂದಿನ ಡೇಟಾ ಮಿತಿಯನ್ನು ಹೊಂದಿಲ್ಲ, ಆದ್ದರಿಂದ ಬಳಕೆದಾರರು ಯಾವುದೇ ಮಿತಿಯಿಲ್ಲದೆ ಅಗತ್ಯವಿರುವ ಡೇಟಾವನ್ನು ಬಳಸುವುದು ಸೂಕ್ತವಾಗಿದೆ.

ಜಿಯೋ 247ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 25GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಿಗಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯವು ಲಭ್ಯ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಹೆಚ್ಚುವರಿಯಾಗಿ ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್, ಜಿಯೋ ಟಿವಿ ಸೇವೆಗಳು ದೊರೆಯುತ್ತವೆ.


Click it and Unblock the Notifications








