ಜಿಯೋ ಟೆಲಿಕಾಂನಲ್ಲಿ ಬೆಸ್ಟ್ ಸೆಲ್ಲರ್ ಟ್ಯಾಗ್ ಪಡೆದ ಪ್ಲ್ಯಾನ್‌ಗಳು ಯಾವುವು ಗೊತ್ತಾ?
ರಿಲಾಯನ್ಸ್ ಜಿಯೋ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಅಗ್ಗದ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಜೊತೆಗೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಜಿಯೋ ತನ್ನ ಚಂದಾದಾರರ ಅನುಕೂಲಕ್ಕಾಗಿ ಅಲ್ಪಾವಧಿಯ ಯೋಜನೆಗಳು ಸೇರಿದಂತೆ ಹಲವು ದೀರ್ಘಾವಧಿಯ ಯೋಜನೆಗಳ ಆಯ್ಕೆಗಳನ್ನು ಒಳಗೊಂಡಿದೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಪ್ರಿಪೇಯ್ಡ್ ಯೋಜನೆಗಳು ಹೆಚ್ಚು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಅವು ಯಾವುವು ಅಂತೀರಾ?

ಹೌದು, ಜಿಯೋ ಟೆಲಿಕಾಂ ಪ್ರತಿದಿನ 1GB, 1.5GB, 2GB ಮತ್ತು 3GB ಡೇಟಾ ಪ್ರಯೋಜನದ ಯೋಜನೆಗಳನ್ನು ಹೊಂದಿದೆ. ಅಲ್ಲದೇ ಅಧಿಕ ವ್ಯಾಲಿಡಿಟಿ ಇರುವ ಯೋಜನೆಗಳು ಇವೆ. ಇನ್ನು ಬಹುತೇಕ ಎಲ್ಲ ಪ್ರಿಪೇಯ್ಡ್ ಯೋಜನೆಗಳು ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಪಡೆದಿದ್ದು, ಇದರೊಂದಿಗೆ ಎಸ್‌ಎಮ್‌ಎಸ್ ಪ್ರಯೋಜನವನ್ನು ಪಡೆದಿವೆ. ಕೆಲವು ಪ್ಲ್ಯಾನ್‌ಗಳಲ್ಲಿ ಹೆಚ್ಚುವರಿಯಾಗಿ ಓಟಿಟಿ ಆಪ್‌ಗಳ ಆಕ್ಸಸ್ ಸೌಲಭ್ಯ ಸಹ ಇದೆ. ಆದರೆ ಕೆಲವು ಯೋಜನೆಗಳು ಅತ್ಯುತ್ತಮ ಡೇಟಾ, ಆಕರ್ಷಕ ವ್ಯಾಲಿಡಿಟಿ ಸೌಲಭ್ಯಗಳನ್ನು ಒಟ್ಟಾಗಿ ಪಡೆದಿವೆ. ಹಾಗಾದರೇ ಜಿಯೋ ಟೆಲಿಕಾಂನಲ್ಲಿ ಬೆಸ್ಟ್ ಸೆಲ್ಲರ್ ಟ್ಯಾಗ್ ಪಡೆದ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋದ 199ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 199ರೂ ಪ್ರೀಪೇಯ್ಡ್ ಯೋಜನೆ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಸಿಗಲಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 42GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಜಿಯೋ ಟು ಜಿಯೋ ಹಾಗೂ ಜಿಯೋ ದಿಂದ ಇತರೆ ಟೆಲಿಕಾಂ ನೆಟವರ್ಕ ವಾಯಿಸ್ ಕರೆಗಳು ಅನಿಯಮಿತ ಉಚಿತವಾಗಿವೆ. ಜಿಯೋ ಆಪ್ಸ್ ಸೇವೆ ಲಭ್ಯ.

ಜಿಯೋ 249ರೂ. ಪ್ರೀಪೇಯ್ಡ್ ಯೋಜನೆ
ಜಿಯೋದ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100ಎಸ್ಎಮ್ಎಸ್ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 56GB ಡೇಟಾ ಸಿಗಲಿದ್ದು, ಜಿಯೋ ಆಪ್ಸ್ ಸಹ ಲಭ್ಯ.

ಜಿಯೋ 555ರೂ. ಪ್ರೀಪೇಯ್ಡ್ ಯೋಜನೆ
ಜಿಯೋ 555ರೂ. ಪ್ರೀಪೇಯ್ಡ್ ಯೋಜನೆ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 599ರೂ. ಪ್ರೀಪೇಯ್ಡ್ ಯೋಜನೆ
ಜಿಯೋ 599ರೂ. ಪ್ರೀಪೇಯ್ಡ್ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 2399ರೂ. ಪ್ರೀಪೇಯ್ಡ್ ಯೋಜನೆ
ಜಿಯೋ ಹೊಸ 2,399ರೂ. ಯೋಜನೆ ಒಂದು ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 2GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ.


Click it and Unblock the Notifications








