ನಿಮಗೆ ಪ್ರತಿದಿನ 3GB ಡೇಟಾ ಅಗತ್ಯವೇ? ಹಾಗಿದ್ರೆ, ಈ ಪ್ಲ್ಯಾನ್ ಸೂಪರ್!
ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ( Jio Telecom ) ಸಂಸ್ಥೆಯು ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ತನ್ನ ಚಂದಾದಾರರಿಗೆ ನೀಡಿದೆ. ಆ ಪೈಕಿ ದೈನಂದಿನ 3 GB ಡೇಟಾ ಪ್ರಯೋಜನ ಒದಗಿಸುವ ಜಿಯೋ ರೀಚಾರ್ಜ್ ಯೋಜನೆಗಳು ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಅತ್ಯುತ್ತಮ ಆಗಿವೆ. ಈ ರೀಚಾರ್ಜ್ ಯೋಜನೆಗಳಲ್ಲಿ ಪ್ರತಿದಿನ ಡೇಟಾ ಸೌಲಭ್ಯದ ಜೊತೆಗೆ ಓಟಿಟಿ ಚಂದಾದಾರಿಕೆಯಂತಹ ಸೌಲಭ್ಯ, ಅಲ್ಲದೇ ಕೆಲವು ಹೆಚ್ಚುವರಿ ಪ್ರಯೋಜನಗಳ ಸಹ ಲಭ್ಯ ಆಗಲಿವೆ.
ಹೌದು, ಜನಪ್ರಿಯ ರಿಲಯನ್ಸ್ ಜಿಯೋ ( Jio Telecom ) ಸಂಸ್ಥೆಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಪಡೆದಿದೆ. ಅವುಗಳಲ್ಲಿ ಮುಖ್ಯವಾಗಿ ಪ್ರತಿದಿನ 1 GB ಡೇಟಾ ಪ್ರಯೋಜನ, 2 GB ಡೇಟಾ ಪ್ರಯೋಜನ ಹಾಗೂ 3 GB ಡೇಟಾ ಪ್ರಯೋಜನದ ಪ್ಲ್ಯಾನ್‌ಗಳ ಆಯ್ಕೆ ಇದೆ. ಪ್ರಮುಖವಾಗಿ ಹೆಚ್ಚಿನ ಡೇಟಾ ಸೌಲಭ್ಯ ಪಡೆದಿರುವ ಕೆಲವು ರೀಚಾರ್ಜ್ ಯೋಜನೆಯು ಅಧಿಕ ಜನಪ್ರಿಯತೆ ಪಡೆದಿವೆ. ಹಾಗಾದರೇ 3GB ಡೇಟಾ ಪ್ರಯೋಜನ ಪಡೆದ ಏರ್‌ಟೆಲ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ 499ರೂ. ರೀಚಾರ್ಜ್ ಯೋಜನೆ ಸೌಲಭ್ಯ
ರಿಲಯನ್ಸ್ ಜಿಯೋ ಟೆಲಿಕಾಂನ 499 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 84 GB ಡೇಟಾ ಪ್ರಯೋಜನ ಕೂಡಾ ದೊರೆಯುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಜಿಯೋ ಆಪ್ಸ್ ಸೇವೆ ಸಿಗಲಿದೆ.
ಜಿಯೋ 1199 ರೂ. ರೀಚಾರ್ಜ್ ಯೋಜನೆ ಸೌಲಭ್ಯ
ರಿಲಯನ್ಸ್ ಜಿಯೋ ಟೆಲಿಕಾಂನ 1199 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ, ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 252 GB ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಜಿಯೋ ಆಪ್ಸ್ ಸೇವೆ ಸಿಗಲಿದೆ.
ಜಿಯೋ 1799 ರೂ. ರೀಚಾರ್ಜ್ ಯೋಜನೆ ಸೌಲಭ್ಯ
ರಿಲಯನ್ಸ್ ಜಿಯೋ ( Jio Telecom ) ಟೆಲಿಕಾಂನ 1799 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 252 GB ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಹಾಗೂ ದಿನವೂ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಇದರ ಜೊತೆಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ಸೌಲಭ್ಯದ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್ ಸೇವೆ ದೊರೆಯುತ್ತದೆ.


Click it and Unblock the Notifications








