Home
ಸುದ್ದಿಜಾಲ

ಈ ತಿಂಗಳು ಬಿಡುಗಡೆ ಆಗಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಮೊಬೈಲ್‌ ಮಾರುಕಟ್ಟೆಗೆ ಪ್ರತಿ ತಿಂಗಳು ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತವೆ. ಪ್ರಮುಖ ಮೊಬೈಲ್‌ ಸಂಸ್ಥೆಗಳು ಅತ್ಯುತ್ತಮ ಫೀಚರ್ಸ್‌ ಒಳಗೊಂಡ ಫೋನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಕಳೆದ ಏಪ್ರಿಲ್‌ನಲ್ಲಿಯೂ ಸಹ ಕೆಲವು ಅತ್ಯುತ್ತಮ ಫೋನ್‌ಗಳು ಎಂಟ್ರಿ ಕೊಟ್ಟಿವೆ. ಹಾಗೆಯೇ ಪ್ರಸಕ್ತ ಮೇ ತಿಂಗಳಿನಲ್ಲಿಯೂ ಪ್ರಮುಖ ಮೊಬೈಲ್‌ ಸಂಸ್ಥೆಗಳ ಕೆಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೌದು, ಮೇ ತಿಂಗಳಿನಲ್ಲಿ ಗೂಗಲ್‌, ಒನ್‌ಪ್ಲಸ್‌, ಆಸುಸ್‌, ರಿಯಲ್‌ಮಿ, ವಿವೋ, ಶಿಯೋಮಿ ಸೇರಿದಂತೆ ಇತರೆ ಕೆಲವು ಬ್ರ್ಯಾಂಡ್‌ಗಳು ತಮ್ಮ ನೂತನ ಫೋನ್‌ಗಳನ್ನು ಲಾಂಚ್ ಮಾಡಲಿವೆ. ಗೂಗಲ್‌ I/O 2023 ರಲ್ಲಿ ಗೂಗಲ್‌ ನೂತನ ಫೋಲ್ಡ್‌ ಮಾದರಿಯ ಫೋನ್‌ ಅನಾವರಣ ಆಗುವ ನಿರೀಕ್ಷೆಗಳಿವೆ. ಈ ತಿಂಗಳು ಬಿಡುಗಡೆ ಆಗಲಿವೆ ಎಂದು ನಿರೀಕ್ಷಿಸಲಾದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಈ ತಿಂಗಳು ಬಿಡುಗಡೆ ಆಗಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಗೂಗಲ್‌ ಪಿಕ್ಸಲ್‌ 7a : ಗೂಗಲ್‌ ಪಿಕ್ಸಲ್‌ 7 ಸರಣಿಯ ಮುಂದುವರಿದ ಭಾಗವಾಗಿ ಗೂಗಲ್‌ ಪಿಕ್ಸಲ್‌ 7a ಫೋನ್ ಮೇ 2023 ರಲ್ಲಿ ಲಾಂಚ್ ಆಗಲಿದೆ. ಮೇ 10 ರಂದು ನಡೆಯಲಿರುವ ಗೂಗಲ್‌ I/O 2023 ರ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇದು ಪಿಕ್ಸಲ್‌ 6a ಗಿಂತ ಸಣ್ಣ ಅಪ್‌ಗ್ರೇಡ್‌ಗಳೊಂದಿಗೆ ಬರಲಿದ್ದು, ದೊಡ್ಡ ಬ್ಯಾಟರಿ, 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಪ್ಯಾನಲ್, ಉತ್ತಮ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ ಎಂಬ ಊಹಾಪೋಹಗಳಿವೆ.

ಈ ತಿಂಗಳು ಬಿಡುಗಡೆ ಆಗಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ರಿಯಲ್‌ಮಿ 11 ಪ್ರೊ : ರಿಯಲ್‌ಮಿ 10 ಸರಣಿಯ ಅಪ್‌ಗ್ರೇಡ್‌ ಆವೃತ್ತಿ ರಿಯಲ್‌ಮಿ 11 ಇದೇ ಮೇ ತಿಂಗಳಿನಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಇವೆ. ಈ ಸರಣಿಯ ಫೋನ್‌ಗಳು ಮೀಡಿಯಾ ಟೆಕ್‌ ಡೈಮೆನ್ಸಿಟಿ 7000 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವುದು ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಪ್ರೊ+ ಫೋನ್‌ 200 ಮೆಗಾ ಪಿಕ್ಸಲ್‌ ಕ್ಯಾಮೆರಾ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ 6.7 ಇಂಚಿನ FHD+ ಅಮೊಲೆಡ್‌ ಪ್ಯಾನೆಲ್, 16 ಎಂಪಿ ಮುಂಭಾಗದ ಕ್ಯಾಮರಾ ಮತ್ತು 80W ಅಥವಾ 100W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರಬಹುದು.

ಗೂಗಲ್‌ ಪಿಕ್ಸಲ್‌ ಫೋಲ್ಡ್‌ : ಗೂಗಲ್‌ ಸಂಸ್ಥೆಯು ಫೋಲ್ಡ್‌ ಮಾದರಿಯ ಫೋನ್‌ ಅನ್ನು ಗೂಗಲ್‌ I/O 2023 ರ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಇನ್ನು ಲೀಕ್ ಮಾಹಿತಿಗಳ ಪ್ರಕಾರ ಗೂಗಲ್‌ ಪಿಕ್ಸಲ್‌ ಫೋನ್‌ ಮಡಿಸಿದಾಗ 5.8 ಇಂಚಿನ ಡಿಸ್‌ಪ್ಲೇ ಮತ್ತು ತೆರೆದಾಗ 7.6 ಇಂಚಿನ ಸ್ಕ್ರೀನ್‌ ಅನ್ನು ಹೊಂದಿರಲಿದೆ. ಇನ್ನು ಇದು ಫೋಲ್ಡಬಲ್ ಗೂಗಲ್ ಟೆನ್ಸರ್ ಜಿ2 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಭಾರತದಲ್ಲಿ ಇದರ ಬೆಲೆ ಸುಮಾರು 1,40,000 ರೂ. ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.

ಈ ತಿಂಗಳು ಬಿಡುಗಡೆ ಆಗಲಿರುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಒನ್‌ಪ್ಲಸ್‌ ನಾರ್ಡ್‌ 3 : ಒನ್‌ಪ್ಲಸ್‌ ಸಂಸ್ಥೆಯು ಮೇ ಕೊನೆಯಲ್ಲಿ ಅಥವಾ ಜೂನ್ ಆರಂಭದಲ್ಲಿ ಒನ್‌ಪ್ಲಸ್‌ ನಾರ್ಡ್‌ 3 ಅನ್ನು ಲಾಂಚ್ ಮಾಡಲು ಯೋಜಿಸಿದೆ. ಬರಲಿರುವ ಹೊಸ ಒನ್‌ಪ್ಲಸ್‌ ನಾರ್ಡ್‌ 3 ಫೋನ್‌ 4500 mAh ಅಥವಾ 5000 mAh ಬ್ಯಾಟರಿ ಸಾಮರ್ಥ್ಯ ದೊಂದಿಗೆ ಲಗ್ಗೆ ಇಡಬಹುದು ಜೊತೆಗೆ 100W ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿರಲಿದೆ ಎನ್ನಲಾಗಿದೆ. ಇದು 120Hz ರಿಫ್ರೆಶ್ ದರ ಮತ್ತು FHD+ ರೆಸಲ್ಯೂಶನ್ ಹೊಂದಿರುವ ಅಮೊಲೆಡ್‌ ಪ್ಯಾನೆಲ್ ಅನ್ನು ಹೊಂದಿರುತ್ತದೆ.

Best Mobiles in India

English summary
Want to buy a new Mobile? Here are the upcoming smartphones that are expected to be launched in May 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+