ನಿಮ್ಮ ಬಳಿ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಇದ್ರೆ, ಮೊದಲು ಈ ಕೆಲಸ ಮಾಡಿ!

|

ಒನ್‌ಪ್ಲಸ್‌ (OnePlus) ತನ್ನ ಕೆಲವು ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ ಅನ್ನು ಹೊರತರಲು ಪ್ರಾರಂಭಿಸಿದ್ದು, ಈ ನೂತನ ಅಪ್‌ಡೇಟ್‌ ಜಿಯೋ 5G ನೆಟ್‌ವರ್ಕ್ ಸಪೋರ್ಟ್‌ ಆಕ್ಟಿವ್ ಮಾಡುತ್ತದೆ. ಸಂಸ್ಥೆಯು ಇದೀಗ ಒನ್‌ಪ್ಲಸ್‌ ನಾರ್ಡ್‌ 5G ಮತ್ತು ಒನ್‌ಪ್ಲಸ್‌ ನಾರ್ಡ್‌ CE 5G ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್‌ ಅನ್ನು ಹೊರಹಾಕಲಾಗುತ್ತಿದೆ.

 ಫೋನ್‌ಗಳಿಗೆ 5G

ಒನ್‌ಪ್ಲಸ್‌ ಸಂಸ್ಥೆಯು ತನ್ನ ಕೆಲವು ಫೋನ್‌ಗಳಿಗೆ 5G ಸಪೋರ್ಟ್‌ ಸಾಫ್ಟ್‌ವೇರ್ ಅಪ್‌ಡೇಟ್‌ ಪ್ರಾರಂಭಿಸಿದೆ. ಕೆಲವು ವಾರಗಳ ಹಿಂದೆ ಸಂಸ್ಥೆಯು ಒನ್‌ಪ್ಲಸ್‌ 10R, ಒನ್‌ಪ್ಲಸ್‌ 10T ಮತ್ತು ಒನ್‌ಪ್ಲಸ್‌ 10 ಪ್ರೊ ಸಾಫ್ಟ್‌ವೇರ್ ಅಪ್‌ಡೇಟ್‌ ಪಡೆದಿವೆ. ಒನ್‌ಪ್ಲಸ್‌ ನಾರ್ಡ್‌ 5G ಫೋನ್‌ ಆಕ್ಸಿಜನ್‌ ಓಎಸ್‌ (OxygenOS C.08) ಹಾಗೂ ಒನ್‌ಪ್ಲಸ್‌ ನಾರ್ಡ್‌ CE 5G ಫೋನ್ ಆಕ್ಸಿಜನ್‌ ಓಎಸ್‌ (OxygenOS F.16) ಗೆ ಅಪ್‌ಡೇಟ್‌ ಪಡೆಯುತ್ತವೆ.

ನೆಟ್‌ವರ್ಕ್ ಅಪ್‌ಡೇಟ್‌

ಈ ನೂತನ ಅಪ್‌ಡೇಟ್‌ನಿಂದ ಫೋನ್‌ಗಳ ಸಿಸ್ಟಮ್ ಸ್ಥಿರತೆ ಮತ್ತು fluidity ಸುಧಾರಿಸುವ ಜೊತೆಗೆ ಆಂಡ್ರಾಯ್ಡ್ ಭದ್ರತಾ ಪ್ಯಾಚ್ (security patch) ಅನ್ನು 2022.10 ಗೆ ನೆಟ್‌ವರ್ಕ್ ಅಪ್‌ಡೇಟ್‌ ಆಗುತ್ತದೆ. ಅಲ್ಲದೇ ಹಾಗೆಯೇ ಜಿಯೋ 5G ನೆಟ್‌ವರ್ಕ್ ಸೇವೆಯನ್ನು ಸಪೋರ್ಟ್‌ ಮಾಡುತ್ತದೆ.

ಅಪ್‌ಡೇಟ್‌ ಮಾಡಲು ಹೀಗೆ ಮಾಡಿ:

ಅಪ್‌ಡೇಟ್‌ ಮಾಡಲು ಹೀಗೆ ಮಾಡಿ:

ನಿಮ್ಮ ಬಳಿ ಒನ್‌ಪ್ಲಸ್‌ ನಾರ್ಡ್‌ 5G ಮತ್ತು ಒನ್‌ಪ್ಲಸ್‌ ನಾರ್ಡ್‌ CE 5G ಫೋನ್ ಇದ್ದು, ನೀವು ನೂತನ ಸಾಫ್ಟ್‌ವೇರ ಅಪ್‌ಡೇಟ್‌ ಮಾಡಲು ಮೊದಲು, ನಿಮ್ಮ ಫೋನಿನ ಸೆಟ್ಟಿಂಗ್‌ಗಳ ಆಪ್‌ ತೆರೆಯಿರಿ. ಬಳಿಕ About Device ಟ್ಯಾಪ್ ಮಾಡಿರಿ. ಆ ನಂತರ update ಕಾಣಿಸುತ್ತದೆಯೇ ಎಂದು ನೋಡಿ. ಒಂದು ವೇಳೆ ಅಪ್‌ಡೇಟ್ ಲಭ್ಯವಿದ್ದರೆ, ಡೌನ್‌ಲೋಡ್ ಬಟನ್ ಮೇಲೆ ಟ್ಯಾಪ್ ಮಾಡಿ.

5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

5G ಸಪೋರ್ಟ್‌ ಪಡೆದ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಒನ್‌ಪ್ಲಸ್‌ ನಾರ್ಡ್‌ ಒನ್‌ಪ್ಲಸ್‌ 9
ಒನ್‌ಪ್ಲಸ್‌ 9 ಪ್ರೊ
ಒನ್‌ಪ್ಲಸ್‌ ನಾರ್ಡ್‌ CE
ಒನ್‌ಪ್ಲಸ್‌ ನಾರ್ಡ್‌ CE 2
ಒನ್‌ಪ್ಲಸ್‌ 10 ಪ್ರೊ 5G
ಒನ್‌ಪ್ಲಸ್‌ ನಾರ್ಡ್‌ CE LITE 2
ಒನ್‌ಪ್ಲಸ್‌ 10R

ಒನ್‌ಪ್ಲಸ್‌ 9R

ಒನ್‌ಪ್ಲಸ್‌ ನಾರ್ಡ್‌ 2
ಒನ್‌ಪ್ಲಸ್‌ ನಾರ್ಡ್‌ 2T
ಒನ್‌ಪ್ಲಸ್‌ 10T
ಒನ್‌ಪ್ಲಸ್‌ 8
ಒನ್‌ಪ್ಲಸ್‌ 8T
ಒನ್‌ಪ್ಲಸ್‌ 8 ಪ್ರೊ
ಒನ್‌ಪ್ಲಸ್‌ 9RT
ಒನ್‌ಪ್ಲಸ್‌ ನಾರ್ಡ್‌ 2
ಒನ್‌ಪ್ಲಸ್‌ 9R

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ಚೆಕ್‌ ಮಾಡಿ:

ನಿಮ್ಮ ಸ್ಮಾರ್ಟ್‌ಫೋನ್‌ 5G ಸಪೋರ್ಟ್‌ ಮಾಡುತ್ತದೆಯೇ?..ಹೀಗೆ ಚೆಕ್‌ ಮಾಡಿ:

ಹಂತ 1: ನಿಮ್ಮ ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ
ಹಂತ 2: ನಂತರ 'Wi-Fi ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಆ ಬಳಿಕ 'SIM ಮತ್ತು Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: 'Preferred network type' ಆಯ್ಕೆಯಲ್ಲಿ ನೀವು ಲಭ್ಯವಿರುವ ನೆಟ್‌ವರ್ಕ್ ಮಾಹಿತಿ ಬಗ್ಗೆ ನೋಡಲು ಸಾಧ್ಯವಾಗುತ್ತದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G / 3G / 4G / 5G ಎಂದು ಪಟ್ಟಿ ಮಾಡಲಾಗುತ್ತದೆ.

ಏರ್‌ಟೆಲ್‌ 5G ಲಭ್ಯತೆಯ ನಗರಗಳು

ಏರ್‌ಟೆಲ್‌ 5G ಲಭ್ಯತೆಯ ನಗರಗಳು

ಏರ್‌ಟೆಲ್‌ನ 5G ನೆಟ್‌ವರ್ಕ್ ಸೇವೆಗಳು ಮುಂಬೈ, ದೆಹಲಿ, ವಾರಣಾಸಿ, ಚೆನ್ನೈ, ಸಿಲಿಗುರಿ, ನಾಗ್ಪುರ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ವರ್ಷಾಂತ್ಯದ ವೇಳೆಗೆ ಟೆಲಿಕಾಂಗಳು ಹೆಚ್ಚಿನ ನಗರಗಳನ್ನು ತಲುಪುವ ನಿರೀಕ್ಷೆಯಿದೆ.

ಜಿಯೋ 5G ಲಭ್ಯತೆಯ ನಗರಗಳು

ಜಿಯೋ 5G ಲಭ್ಯತೆಯ ನಗರಗಳು

ರಿಲಯನ್ಸ್ ಜಿಯೋ ದೆಹಲಿ, ಮುಂಬೈ, ಕೋಲ್ಕತ್ತಾ, ವಾರಣಾಸಿ ಮತ್ತು ಚೆನ್ನೈ ಸೇರಿದಂತೆ ಐದು ನಗರಗಳಲ್ಲಿ ಜಿಯೋದ 5G ನೆಟ್‌ವರ್ಕ್ ಸೇವೆಗಳು ಲಭ್ಯವಿದೆ. ಇತ್ತೀಚಿಗೆ ರಾಜಸ್ಥಾನದ ದೇವಾಲಯ ಪಟ್ಟಣವಾದ ನಾಥದ್ವಾರದಲ್ಲಿ, ಜಿಯೋ ಉಚಿತ 5G-ಚಾಲಿತ Wi-Fi ಸೇವೆಗಳನ್ನು ಪ್ರಾರಂಭಿಸಿದೆ.

Best Mobiles in India

English summary
These OnePlus Mobiles now support 5G network: Here's Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X